ಮಿಥಾಲಿ ರಾಜ್‌ ವಿಶ್ವದಾಖಲೆ, ವನಿತಾ ಏಕದಿನ ಕ್ರಿಕೆಟಿನ ಗರಿಷ್ಠ ರನ್‌


Team Udayavani, Jul 13, 2017, 3:50 AM IST

mitali.jpg

ಬ್ರಿಸ್ಟಲ್‌: ಭಾರತೀಯ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ವನಿತಾ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಆರು ಸಾವಿರ  ರನ್‌ ದಾಟಿ ವಿಶ್ವದಾಖಲೆ ಸ್ಥಾಪಿ ಸಿದರಲ್ಲದೇ ಈ ಸಾಧನೆಗೈದ ಮೊದಲ ಆಟ ಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಸಿಸಿ ವನಿತಾ ವಿಶ್ವಕಪ್‌ನ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್‌ ಈ ಸಾಧನೆ ಮಾಡಿದರು. ಇದರಿಂದಾಗಿ ಭಾರತ ಎರಡು ವಿಶ್ವದಾಖಲೆ ಹೊಂದಿದಂತಾಗಿದೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತದ ಜೂಲನ್‌ ಗೋಸ್ವಾಮಿ ಗರಿಷ್ಠ ವಿಕೆಟ್‌ ಕಿತ್ತ ವಿಶ್ವದಾಖಲೆ ಹೊಂದಿದ್ದಾರೆ.

ಆಸ್ಟ್ರೇಲಿಯ ವಿರುದ್ಧ ಬುಧವಾರ ನಡೆದ ಪಂದ್ಯದ ವೇಳೆ ಮಿಥಾಲಿ 34 ರನ್‌ ತಲುಪಿದಾಗ ಇಂಗ್ಲೆಂಡಿನ ನಾಯಕಿ ಚಾರ್ಲೋಟ್‌ ಎಡ್ವರ್ಡ್ಸ್‌ ಹೆಸರಲ್ಲಿದ್ದ ಗರಿಷ್ಠ ರನ್‌ ದಾಖಲೆಯನ್ನು (5992 ರನ್‌) ಅಳಿಸಿ ಹಾಕಿ ತನ್ನ ಹೆಸರಿಗೆ ಬರೆಸಿ ಕೊಂಡರು. ಎಲಿಸ್‌ ಪೆರ್ರಿ ಓವರಿನಲ್ಲಿ ಒಂಟಿ ರನ್‌ ತೆಗೆಯುವ ಮೂಲಕ ಮಿಥಾಲಿ ವಿಶ್ವದಾಖಲೆ ನಿರ್ಮಿಸಿದರು.

ಕಿರ್ಸ್ಟನ್‌ ಬೀಮ್ಸ್‌ ಅವರ ಓವರಿ ನಲ್ಲಿ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ಮಿಥಾಲಿ ಮೌಂಟ್‌ 6000 ಶಿಖರವನ್ನೇರಿ ದರು. ಈ ಸಾಧನೆಗೈದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಗೌರವ ಸಲ್ಲಿಸಿದರು. ಅಂತಿಮವಾಗಿ ಅವು 69  ರನ್‌ ಗಳಿಸಿ ಔಟಾದರು. 114 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ್ದರು. ಒಟ್ಟಾರೆ 183 ಪಂದ್ಯವನ್ನಾಡಿದ ಅವರು 6028 ರನ್‌ ಗಳಿಸಿದ್ದಾರೆ. ಇದು ಅವರ 164ನೇ ಇನ್ನಿಂಗ್ಸ್‌ ಆಗಿದೆ. ಚಾರ್ಲೋಸ್‌ ಅವರಿಗಿಂತ 16 ಇನ್ನಿಂಗ್ಸ್‌ ಕಡಿಮೆ.

1999ರ ಜೂನ್‌ನಲ್ಲಿ ಅಯರ್‌ಲ್ಯಾಂಡ್‌ ವಿರುದ್ಧ ಆಡುವ ಮೂಲಕ ಮಿಥಾಲಿ ಏಕ ದಿನಕ್ಕೆ ಪಾದಾರ್ಪಣೆಗೈದಿದ್ದರು. ಆ ಪಂದ್ಯದಲ್ಲಿಯೇ ಪಂದ್ಯ ಗೆಲುವಿನ ಶತಕ ಸಿಡಿಸಿ ದ್ದರು. 2017ರ ಫೆಬ್ರವರಿ ಬಳಿಕ ಅವರು ಸತತ ಏಳು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಟಾಟನ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನ ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ 46 ರನ್ನಿಗೆ ಔಟಾದ ಮಿಥಾಲಿ ಸತತ ಎಂಟನೇ ಪಂದ್ಯದಲ್ಲಿ ಅರ್ಧಶತಕ ದಾಖಲಿಸಲು ವಿಫ‌ಲರಾದರು. ಇಷ್ಟರವರೆಗಿನ ಕ್ರಿಕೆಟ್‌ ಬಾಳ್ವೆ ಯಲ್ಲಿ ಅಮೋಘ ಸಾಧನೆಗೈದ ಮಿಥಾಲಿ ವನಿತಾ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. 

ಹೈದರಾಬಾದ್‌ನ ಮಿಥಾಲಿ ಮತ್ತು ಗೋಸ್ವಾಮಿ ಭಾರತೀಯ ವನಿತಾ ತಂಡದ ಇಬ್ಬರು ಹಿರಿಯ ಆಟಗಾರ್ತಿ ಯರಾಗಿದ್ದಾರೆ. ಅವರಿಬ್ಬರು 2003ರ ವಿಶ್ವಕಪ್‌ ಮೊದಲೇ ತಂಡದಲ್ಲಿದ್ದರು. 2002ರಲ್ಲಿ ಟಾಂಟನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ವನಿತಾ ಟೆಸ್ಟ್‌ ಪಂದ್ಯದಲ್ಲಿ 214 ರನ್‌ ಸಿಡಿಸುವ ಮೂಲಕ ಮಿಥಾಲಿ ಪ್ರಸಿದ್ಧಿಗೆ ಬಂದರು. ಇದು ವನಿತಾ ಕ್ರಿಕೆಟಿನ ಆಟಗಾರ್ತಿಯೊಬ್ಬರ ಗರಿಷ್ಠ ಮೊತ್ತವಾಗಿದೆ. 

ನಾಯಕಿ ಮಿಥಾಲಿ ಅವರ ಸಾಧನೆಗೆ ಬಿಸಿಸಿಐ ಪ್ರಭಾರ ಅಧ್ಯಕ್ಷ ಸಿಕೆ ಸಿನ್ನಾ ಅಭಿನಂದನೆ ಸಲ್ಲಿಸಿದ್ದಾರೆ. ಬಿಸಿಸಿಐ ಪರವಾಗಿ ನಾನು ಮಿಥಾಲಿ ಅವರ ಅಮೋಘ ಸಾಧನೆಗೆ ಅಭಿನಂದನೆ ಸಲ್ಲಿಸು ತ್ತಿದ್ದೇನೆ. ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಗೈದ ಪಂದ್ಯ ದಲ್ಲಿಯೇ ಶತಕ ಸಿಡಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ ಮಿಥಾಲಿ ರಾಜ್‌ ದಾಖಲೆ ಸತತ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ ಎಂದರು. 

ಮಿಥಾಲಿ ಅವರ ಸಾಧನೆಯನ್ನು ಅವಲೋಕಿಸಿದರೆ ಅವರು ಹಿಂದಿನ ಶ್ರೇಷ್ಠ ಆಟಗಾರ್ತಿಯರಾದ ಡಯಾನಾ ಎಡುಲ್ಜಿ, ಶಾಂತಾ ರಂಗಸ್ವಾಮಿ ಮತ್ತು ಅಂಜುಮ್‌ ಚೋಪ್ರಾ ಅವರಿಗಿಂತ ಮಿಗಿಲಾದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡಿಗೆ ಗೆಲುವು
ಡರ್ಬಿ
: ಆತಿಥೇಯ ಇಂಗ್ಲೆಂಡ್‌ ವನಿತೆಯರು ಐಸಿಸಿ ವನಿತಾ ವಿಶ್ವಕಪ್‌ನ ಬುಧವಾರದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವನಿತೆಯರನ್ನು 75 ರನ್ನುಗಳಿಂದ ಸೋಲಿಸಿದ್ದಾರೆ.
ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ತಂಡವು ನತಾಲಿಯೆ ಸಿವರ್‌ ಅವರ ಆಕರ್ಷಕ ಶತಕ ಮತ್ತು ತಮಿ ಬೀಮೌಂಟ್‌ ಅವರ ಅಮೋಘ ಆಟದಿಂದಾಗಿ 9 ವಿಕೆಟಿಗೆ 284 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಸಿವರ್‌ 111 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ 129 ರನ್‌ ಸಿಡಿಸಿದರೆ ಬೀಮೌಂಟ್‌ 102 ಎಸೆತಗಳಿಂದ 93 ರನ್‌ ಗಳಿಸಿದರು. 

ಗೆಲ್ಲಲು ಕಠಿನ ಗುರಿ ಪಡೆದ ನ್ಯೂಜಿಲ್ಯಾಂಡ್‌ ತಂಡವು ಇಂಗ್ಲೆಂಡಿನ ದಾಳಿಯನ್ನು ಎದುರಿಸಲು ವಿಫ‌ಲವಾಗಿ 46.4 ಓವರ್‌ಗಳಲ್ಲಿ 209 ರನ್ನಿಗೆ ಆಲೌಟಾಯಿತು. 

ದಕ್ಷಿಣ ಆಫ್ರಿಕಾಕ್ಕೆ ಜಯ
ಟಾಟನ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡವು 40.3 ಓವರ್‌ಗಳಲ್ಲಿ 101 ರನ್ನಿಗೆ ಆಲೌಟಾಯಿತು. ಡಿ ವಾನ್‌ ನೀಕೆರ್ಕ್‌ 24 ರನ್ನಿಗೆ 4 ವಿಕೆಟ್‌ ಕಿತ್ತರೆ ಶಬಿ°ಮ್‌ ಇಸ್ಮಾಯಿಲ್‌ 14 ರನ್ನಿಗೆ 3 ವಿಕೆಟ್‌ ಉರುಳಿಸಿದರು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾವು 23.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ 104 ರನ್‌ ಗಳಿಸಿ ಜಯಭೇರಿ ಬಾರಿ ಸಿತು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.