ಹುಬ್ಬಳ್ಳಿ-ಅಂಕೋಲಾ ಮಾರ್ಗಕ್ಕೆ ನೈಋತ್ಯ ರೈಲ್ವೆ ಸಜ್ಜು


Team Udayavani, Jul 15, 2017, 3:45 AM IST

Southwest-railway-outfit-fo.jpg

ಹುಬ್ಬಳ್ಳಿ: ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನ ಮುಹೂರ್ತದ ಶುಭ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಅರಣ್ಯ ಸಚಿವಾಲಯದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿಯಿಂದ ಇನ್ನೊಂದು ಹಂತದ ಅನುಮೋದನೆ ಸಿಕ್ಕರೆ ಸಾಕು. ನೈಋತ್ಯ ರೈಲ್ವೆ ವಲಯ ರಾಜ್ಯ ಸರ್ಕಾರಕ್ಕೆ ಭೂ ಸ್ವಾಧೀನ ಪ್ರಸ್ತಾವನೆ ಸಲ್ಲಿಸಲು ತುದಿಗಾಲ ಮೇಲೆ ನಿಂತಿದೆ.

ಬಯಲುಸೀಮೆ ಮತ್ತು ಕರಾವಳಿ ಪ್ರದೇಶಕ್ಕೆ ವ್ಯಾಪಾರ-ವಹಿವಾಟು, ಪ್ರವಾಸೋದ್ಯಮ ಸಂಪರ್ಕ ಇನ್ನಷ್ಟು ಸುಲಭವಾಗಲು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಮಹತ್ವದ ಪಾತ್ರ ವಹಿಸಲಿದೆ. ಹಲವು ದಶಕಗಳಿಂದ ವಿವಾದ ಹಾಗೂ ಉದಾಸೀನತೆಗೆ ಸಿಲುಕಿದ್ದ ಯೋಜನೆ ಇದೀಗ ಅನುಷ್ಠಾನವಾಗುವ ಆಶಾಭಾವನೆ ಗಟ್ಟಿಗೊಳ್ಳತೊಡಗಿದೆ.

164 ಕಿ.ಮೀ. ರೈಲು ಮಾರ್ಗ:
ಹುಬ್ಬಳ್ಳಿ-ಅಂಕೋಲಾ ನಡುವೆ ಸುಮಾರು 164.44 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಬೇಕಾಗಿದೆ. ಸುಮಾರು 45 ಕಿ.ಮೀ. ಮಾರ್ಗ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಯೋಜನೆಗೆ ಹುಬ್ಬಳ್ಳಿಯಿಂದ ಯಲ್ಲಾಪುರ ವರೆಗೆ ಸುಮಾರು 75 ಕಿ.ಮೀ. ಅರಣ್ಯವಲ್ಲದ ಬಯಲು ಪ್ರದೇಶವಿದೆ. ಯಲ್ಲಾಪುರದಿಂದ ಸುಂಕಸಾಳ ನಡುವೆ ಸುಮಾರು 56 ಕಿ.ಮೀ. ಪಶ್ಚಿಮ ಘಟ್ಟದ ಸಹ್ಯಾದ್ರಿ ಬೆಟ್ಟಗಳ ಘಾಟ್‌ ವಲಯವಾಗಿದೆ. ಸುಂಕಸಾಳದಿಂದ ಅಂಕೋಲಾವರೆಗೆ ಪ್ರತ್ಯೇಕ ಬೆಟ್ಟಗಳಿಂದ ಕೂಡಿದ ಪ್ರದೇಶವಿದೆ.

ಯೋಜನೆಗೆ ಒಟ್ಟಾರೆ ಸುಮಾರು 995.64 ಹೆಕ್ಟೇರ್‌ ಭೂಸ್ವಾಧೀನ ಅಗತ್ಯವಿದ್ದು. ಸುಮಾರು 595.64 ಹೆಕ್ಟೇರ್‌ ಅರಣ್ಯಭೂಮಿ, 184.60 ಹೆಕ್ಟೇರ್‌ ತೇವಾಂಶ ಇರುವ ಭೂಮಿ (ವೆಟ್‌ ಲ್ಯಾಂಡ್‌), 190 ಹೆಕ್ಟೇರ್‌ ಒಣ ಭೂಮಿ (ಡ್ರೈ ಲ್ಯಾಂಡ್‌) ಆಗಿದೆ. ಶೇ. 80ರಷ್ಟು ಅರಣ್ಯ ಪ್ರದೇಶ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಅರಣ್ಯ ಪ್ರದೇಶದ ಬಳಕೆ ಕುಗ್ಗಿಸಲಾಗಿದೆ. ಕೆಲ ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿದ್ದು. ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಗ್ಗಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಲವು ಸಲಹೆ-ಶಿಫಾರಸುಗಳ ಅಳವಡಿಕೆಗೆ ಯೋಜಿಸಲಾಗಿದೆ.

ಸರಕು ಸಾಗಣೆ-ಪ್ರವಾಸೋದ್ಯಮಕ್ಕೆ ಅನುಕೂಲ:
ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಕ್ಕೆ ವ್ಯಾಪಾರ-ವಹಿವಾಟು ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಅನುಕೂಲವಾಗಲಿದೆ. ಕಾರವಾರ, ಬೇಲೇಕೇರಿ, ಮರ್ಮ್ ಗೋವಾ ಹಾಗೂ ಮಂಗಳೂರು ಬಂದರುಗಳಿಗೆ ಸಂಪರ್ಕದ ಕೊಂಡಿಯಾಗಲಿರುವ ಮಾರ್ಗ, ಕಬ್ಬಿಣ ಅದಿರು, ಸಿಮೆಂಟ್‌, ವಿದೇಶಕ್ಕೆ ರಫ್ತಾಗುವ ಮೆಕ್ಕೆಜೋಳ ಇನ್ನಿತರ ಕೃಷಿ ಉತ್ಪನ್ನಗಳನ್ನು ಬಂದರುಗಳ ಮೂಲಕ ಸಾಗಿಸಲು, ವಿವಿಧ ಉತ್ಪನ್ನಗಳನ್ನು ಉತ್ತರ ಕರ್ನಾಟಕಕ್ಕೆ ತರಲು, ಕರಾವಳಿ ಪ್ರದೇಶದ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ಈ ಯೋಜನೆ ಸಂಪರ್ಕ ಕಲ್ಪಿಸಲಿದೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಕುರಿತಾಗಿ ಹಲವು ವರ್ಷಗಳಿಂದ ಧ್ವನಿ ಎತ್ತುತ್ತ ಬಂದಿದ್ದೇನೆ. ಹಲವು ಸಭೆಗಳನ್ನು ನಡೆಸಿದ್ದೆ. ಬೇಲೇಕೇರಿ ಬಂದರು ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದಾಗ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಜಾರಿಗೊಳ್ಳಬೇಕು ಎಂಬ ಷರತ್ತಿನೊಂದಿಗೆ ನೆರವಿಗೆ ಒಪ್ಪಿದ್ದರು. ರಾಷ್ಟ್ರೀಯ ಹಸಿರು ನ್ಯಾಯಪೀಠ ಹಾಗೂ ಕೇಂದ್ರ ಅರಣ್ಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಹಸಿರು ನಿಶಾನೆ ತೋರಿಸಿವೆ. ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಯೋಜನೆ ಅನುಷ್ಠಾನಕ್ಕೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ. ರಾಜ್ಯ ಸರಕಾರ ಯೋಜನೆಗೆ ಎಷ್ಟು ಅರಣ್ಯ ಪ್ರದೇಶ ಬಳಕೆ, ಎಷ್ಟು ಮರಗಳು ಕಡಿಯಬೇಕಾಗುತ್ತದೆ. ಪರ್ಯಾಯ ಅರಣ್ಯ ಭೂಮಿಗೆ ಕೈಗೊಂಡ ಕ್ರಮಗಳ ಬಗ್ಗೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಿದಲ್ಲಿ, ಭೂ ಸ್ವಾಧೀನಕ್ಕೆ ಅನುಮೋದನೆ ದೊರೆತು ಯೋಜನೆ ಅನುಷ್ಠಾನಕ್ಕೆ ತೀವ್ರತೆ ಬರಲಿದೆ.
– ಪ್ರಹ್ಲಾದ ಜೋಶಿ, ಸಂಸದ

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ

Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

15-rain

Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.