ಕರ್ಣಾಟಕ ಬ್ಯಾಂಕ್‌:  133.85 ಕೋ.ರೂ. ಲಾಭ

Team Udayavani, Jul 16, 2017, 3:00 AM IST

1507mlr37-KBL-Mahabaleshwar.gif

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅಂತ್ಯಕ್ಕೆ ಶೇ. 10.13ರ ವೃದ್ಧಿಯೊಂ ದಿಗೆ 133.85 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭ 121.54 ಕೋ.ರೂ. ಆಗಿತ್ತು.

ಬ್ಯಾಂಕಿನ ನಿರ್ವಹಣಾ ಲಾಭವು 309.70 ಕೋ.ರೂ. ಆಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 18.25ರ ದರದಲ್ಲಿ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 261.92 ಕೋ.ರೂ. ನಿರ್ವಹಣಾ ಲಾಭ ಗಳಿಸಿತ್ತು. ಬ್ಯಾಂಕಿನ ನಿವ್ವಳ ಬಡ್ಡಿ ಲಾಭವು ವರ್ಷದಿಂದ ವರ್ಷಕ್ಕೆ ಶೇ. 16.38ರ ದರದಲ್ಲಿ ಹೆಚ್ಚಳಗೊಂಡು 424.42 ಕೋ.ರೂ. ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಬಡ್ಡಿ ಲಾಭವು 364.69 ಕೋ.ರೂ.ಗಳಾಗಿತ್ತು. ಜು. 15ರಂದು ಮಂಗಳೂರಿನಲ್ಲಿ ನಡೆದ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸಭೆಯಲ್ಲಿ 2017ರ ಜೂನ್‌ ಮಾಸಾಂತ್ಯದ ಹಣಕಾಸು ವರದಿಯನ್ನು ಅನುಮೋದಿಸಲಾಯಿತು.

ಶೇ. 9.56 ಬೆಳವಣಿಗೆ
ಬ್ಯಾಂಕಿನ ಒಟ್ಟು ವ್ಯವಹಾರವು 2017ರ ಜೂ. 30ಕ್ಕೆ 94,711 ಕೋ.ರೂ. ತಲುಪಿದ್ದು ಇದು ವರ್ಷದಿಂದ ವರ್ಷಕ್ಕೆ ಶೇ. 9.56 ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕಿನ ಠೇವಣಿ ಮೊತ್ತವು 51,501 ಕೋ.ರೂ.ನಿಂದ 56,227 ಕೋ.ರೂ. ತಲುಪಿ ಶೇ. 9.18ರ ಪ್ರಗತಿ ದಾಖಲಿಸಿದೆ. ಬ್ಯಾಂಕಿನ ಮುಂಗಡವು 34,946 ಕೋ.ರೂ.ನಿಂದ 38,484 ಕೋ.ರೂ. ತಲುಪಿ ಶೇ. 10.12ರ ದರದಲ್ಲಿ ವೃದ್ಧಿ ಸಾಧಿಸಿದೆ. ಬ್ಯಾಂಕಿನ ಸಿ.ಡಿ. ಅನುಪಾತವು ಉತ್ತಮಗೊಂಡಿದ್ದು ಶೇ. 68.44ರಷ್ಟಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಸಿ.ಡಿ. ಅನುಪಾತವು ಶೇ 67.86 ಆಗಿತು.¤ ಕಾಸಾ (ಚಾಲ್ತಿಖಾತೆ ಹಾಗೂ ಉಳಿತಾಯ ಖಾತೆ ) ಠೇವಣಿಗಳು ಶೇ. 28.94ರಷ್ಟಕ್ಕೆ ಏರಿವೆ. ಪ್ರಸಕ್ತ ಸಾಲಿನ ಮೊದಲ ತ್ತೈಮಾಸಾಂತ್ಯಕ್ಕೆ ಬ್ಯಾಂಕಿನ ಸ್ಥೂಲ ಅನುತ್ಪಾದಕ ಆಸ್ತಿಗಳು 1,691 ಕೋ.ರೂ.ಗಳಷ್ಟಿದ್ದು, ಇದು ಬ್ಯಾಂಕಿನ ಒಟ್ಟು ಮುಂಗಡದ ಶೇ.4.34ರಷ್ಟಿದೆ. ನಿವ್ವಳ ಅನುತ್ಪಾದಕ ಆಸ್ತಿಯು 1,230 ಕೋ.ರೂ.ಗಳಾಗಿದ್ದು ನಿವ್ವಳ ಮುಂಗಡದ ಶೇ. 3.20ರಷ್ಟಿದೆ.

ಭಾರತೀಯ ರಿಸರ್ವ್‌ ಬ್ಯಾಂಕಿನ ನಿರ್ದೇಶನದಂತೆ ಬಂಡವಾಳ ಪರ್ಯಾಪ್ತದ ಅನುಪಾತವು ಕನಿಷ್ಠ ಶೇ. 10.25 ಇರಬೇಕಾಗಿದು,ª 2017-18ರ ಮೊದಲ ತ್ತೈಮಾ ಸಾಂತ್ಯಕ್ಕೆ (30-06-2017) ಬ್ಯಾಂಕಿನ ಬಂಡವಾಳ ಪರ್ಯಾಪ್ತದ ಅನುಪಾತವು (ಕ್ಯಾಪಿಟಲ್‌ ಅಡಿಕ್ವಸಿ ರೇಶೊÂà) ಬೇಸೆಲ್‌ ಐಐಐ ಮಾನದಂಡಕ್ಕನುಗುಣವಾಗಿ ಶೇ. 13.02ರಷ್ಟಿದೆ.

ಅಭಿವೃದ್ಧಿಗೆ ಮುನ್ನುಡಿ
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ಅವರು ಪ್ರಸಕ್ತ ಅರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಫಲಿತಾಂಶದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಬ್ಯಾಂಕಿನ ಮುಂಗಡಗಳಲ್ಲಿನ ಹೆಚ್ಚಳವು ನಮ್ಮ ನಿರ್ವಹಣಾ ಲಾಭದ ಪ್ರಗತಿಗೆ ಕಾರಣವಾಗಿದೆ. ಇದು ಬ್ಯಾಂಕಿನ ಮುಂದಿನ ಅಭಿವೃದ್ಧಿಗೆೆ ಮುನ್ನುಡಿ ಬರೆಯಲಿದೆ. ನಿವ್ವಳ ಬಡ್ಡಿ ಲಾಭ ಮತ್ತು ನಿವ್ವಳ ಬಡ್ಡಿ ಲಾಭಾಂಶದಲ್ಲಿಯ ಚೇತರಿಕೆಯು ಕೂಡ ಅಭಿವೃದ್ಧಿಯ ದ್ಯೋತಕವಾಗಿವೆ. 2017ರ ಜೂ. 30ಕ್ಕೆ ಬ್ಯಾಂಕ್‌ 769 ಶಾಖೆಗಳನ್ನು, 1,398 ಎಟಿಎಂಗಳನ್ನು ಮತ್ತು 110 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಹೊಂದಿದೆ ಎಂದರು. 2018ರ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕು ಇನ್ನೂ 31 ಹೊಸ ಶಾಖೆಗಳನ್ನು ಮತ್ತು 52 ಹೊಸ ಎಟಿಎಂಗಳನ್ನು ಹಾಗೂ 40 ಇ-ಲಾಬಿ/ಮಿನಿ ಇ-ಲಾಬಿಗಳನ್ನು ಪ್ರಾರಂಭಿಸುವ ಮೂಲಕ ಒಟ್ಟು 2,250 ಸೇವಾ ಕೇಂದ್ರಗಳನ್ನು ಹೊಂದಲಿದೆ. ಇದರೊಂದಿಗೆ ಶಾಖೆಗಳ ಸಂಖ್ಯೆ 800ಕ್ಕೆ, ಎಟಿಎಂಗಳು 1450ಕ್ಕೆ ಹಾಗೂ ಇ-ಲಾಬಿ / ಮಿನಿ ಇ-ಲಾಬಿಗಳ ಸಂಖ್ಯೆ 150ಕ್ಕೇರಲಿದೆ.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.