ತನುವು ನನ್ನದು ಮನವೂ ನನ್ನದೇ!


Team Udayavani, Jul 23, 2017, 5:55 AM IST

tanu.gif

ಪಡೀಲ್‌ ಪಡೀಲ್‌’ ಎನ್ನುವ ಕಂಡಕ್ಟರ್‌ನ ಅರಚುವಿಕೆಗೆ ಗಡಬಡನೇ ಎ¨ªೆ. ಆಗಲೇ ನೆನಪಾಯಿತು. ನಾನು ಬಸ್ಸಿನಲ್ಲಿ ಇದ್ದೇನೆ ಎಂದು, ಎದ್ದವಳೇ ನನ್ನ ಪರಿಕರಗಳನ್ನು ಜೋಡಿಸಲು ತೊಡಗಿದೆ. ಬ್ಯಾಗ್‌, ಚಪ್ಪಲಿ ತೊಟ್ಟು ತಯಾರಾದೆ. ಈಗ ಕಿಬ್ಬೊಟ್ಟೆ ಒತ್ತತೊಡಗಿತ್ತು. ಅಷ್ಟರಲ್ಲಿ, “”ಪಂಪ್‌ವೆಲ್‌ನಲ್ಲಿ ಏನೋ ಬ್ಲಾಕ್‌ ಅಂತೆ…”  ಎಂದು ಯಾರೋ ಅಂದದ್ದು ಕೇಳಿಸಿತು. ನನಗೆ ಇನ್ನು ತಡೆಯಲು ಸಾಧ್ಯವಿಲ್ಲ. ಕಂಕನಾಡಿಯಲ್ಲಿ ಇಳಿದು ಆಟೊ ಮಾಡಿಕೊಂಡು ಮನೆ ಸೇರಿಕೊಂಡು ಬಿಡುವುದು ಎಂದು ಯೋಚಿಸುವಷ್ಟರಲ್ಲಿ ಫೋನ್‌ ರಿಂಗಾಯಿತು. ದಿನು ಕಾಲಿಂಗ್‌, “”ಹಲೋ ದಿನು…” ಅತ್ತ ಕಡೆಯಿಂದ, “”ಎಲ್ಲಿ ಸತ್ತುಹೋಗಿದ್ದೆ? ನಿನ್ನ ಫ್ರೆಂಡ್‌ಗೆ ಏನಾಗಿದೆ? ಎಲ್ಲವೂ ನಿಮಗೆ ತಮಾಷೆ. ಎಲ್ಲಾ  ತಯಾರಿ ಆದ ಮೇಲೆ ಮದುವೆ ಬೇಡ ಅಂತಿದ್ದಾಳೆ. ಅವಳಿಗೇನು ತಲೆ ಕೆಟ್ಟಿದಿಯಾ? ಯಾವ ಊರಿನ ರಂಭೆ ಅವಳು. ಅವಳ ಕ್ರೆçಟಿರಿಯಾಕ್ಕೆ ಅವನು ಹೆಚ್ಚು. ಅವನಂತಹ ಹುಡುಗ ಎಲ್ಲಿ ಸಿಗುತ್ತಾನೆ. ಕುಡಿತ ಇಲ್ಲ. ನೆಮ್ಮದಿಯ ಸರಕಾರಿ ಕೆಲಸ ಇದೆ. ಒಳ್ಳೆಯ ಕುಟುಂಬ. ಅವಳಿಗೇನು ಸೊಕ್ಕು. ರವಿಯ ಮನೆಯಲ್ಲಿ ಇನ್ವಿಟೇಶನ್‌ ಕಾರ್ಡೂ ಪ್ರಿಂಟ್‌ ಆಗಿದೆ. ಅವನ ಅಕ್ಕ-ಭಾವಂದಿರು ಬರಲು ಫ್ಲೈಟ್‌ ಬುಕ್‌ ಆಗಿದೆ. ನೂರಾರು ಜನರಿಗೆ ಬಾಯಿಮಾತು ಹೋಗಿದೆ. ಈಗ ಈ ಹೊತ್ತಿನಲ್ಲಿ ಮದುವೆ ಬೇಡ ಅಂತಿದ್ದಾಳೆ.

ಎಂಗೇಜ್‌ಮೆಂಟ್‌ ಸಮಯದಲ್ಲಿ ಅವಳ ಬುದ್ಧಿ ಎಲ್ಲಿ ಮೇಯಲು ಹೋಗಿತ್ತು” ನನಗೆ ಮಾತಾಡಲು, ನಾನು ಕೇಳಿಸಿಕೊಳ್ಳುತ್ತಿದ್ದೇನೆಯೆ ಎನ್ನುವುದನ್ನು ನೋಡದೇ ಬಡಬಡಿಸುತ್ತಲೆ ಇ¨ªಾನೆ. ನಾನೆಂದೆ, “”ಹೋಲ್ಡ್‌ ಆನ್‌, ಹೋಲ್ಡ್‌ ಆನ್‌, ಏನೋ ತಮಾಷೆಗೋ ಸಿಟ್ಟಿಗೋ ಅಂದಿರಬೇಕು. ಸೀರಿಯಸ್‌ ಆಗಿ ಹೇಳಿರಲಿಕ್ಕಿಲ್ಲ” ಅದಕ್ಕೆ ದಿನೂ, “”ಇಲ್ಲಿ ಸ್ವಲ್ಪ ಕೇಳು… ಅವಳೇ ರವಿ ಮನೆಗೆ ಬಂದಳು. ನಾವು ರಮ್ಮಿ ಆಡುತ್ತಾ ಕುಳಿತಿ¨ªೆವು.  ಬಂದವಳೇ ಎಂಗೇಜ್‌ಮೆಂಟ್‌ ರಿಂಗ್‌ ಟೇಬಲ್‌ ಮೇಲೆ ಇಟ್ಟವಳೇ,  ಅವನು ಕೊಟ್ಟ ಸೀರೆ ಇತರ ಗಿಫ್ಟ್ಗಳನ್ನು ಕೊಟ್ಟು ಎಂಗೇಜ್‌ಮೆಂಟ್‌ಗೆ ಏನೇನು ಖರ್ಚಾಗಿದೆಯೋ ಅವನ್ನೆಲ್ಲಾ ಅವಳು ಕೊಡುತ್ತೇನೆ ಎಂದು ಹೇಳಿ ಬಂದಿದ್ದಾಳೆ.

ನೀನು ಎಲ್ಲಿ ಸತ್ತು ಹೋಗಿದ್ದಿ. ಮೂರು ಹೊತ್ತು ಅವಳ ಬಾಲದಾಗೆ ಇರುತ್ತಿ ಅಥವಾ ನಿನಗೆ ಗೊತ್ತಿದೆಯೋ ಹೇಗೆ?” 
“”ಅಯ್ಯೋ ಮಾರಾಯ, ನನಗೆ ಶಾಕ್‌ ಆಗ್ತಾ ಇದೆ. ಬಸ್ಸಿನಿಂದ ಬೇರೆ ಇಳೀತಾ ಇದ್ದೀನಿ. ಉಸಿರು ಬಿಡಲು ಅವಕಾಶ ಕೊಡು. ಮಾತಾಡುತ್ತೀನಿ. ಮೂರು ದಿನ ನಾನು ಇರಲಿಲ್ಲ. ಆ ಹಳ್ಳಿ ಕೊಂಪೆಯಲ್ಲಿ ನನ್ನ ಫೋನ್‌ ಬೇರೆ ನಾಟ್‌ ರೀಚೇಬಲ್‌. ವಿಚಾರಿಸುತ್ತೀನಿ. ಮೊದಲು ಮನೆ ಸೇರಿ¤àನಿ” ಎಂದವಳೇ ಫೋನ್‌ ಕಟ್‌ ಮಾಡಿದೆ. 

ಕಂಕನಾಡಿ ಇಳಿಯಬೇಕೆಂದಿದ್ದವಳು ಬಹಳ ಮುಂದಕ್ಕೆ ಬಂದು ಬಿಟ್ಟಿದೆ. ಹಸಿವು, ಮೂತ್ರ, ಬಾಯಾರಿಕೆ ಎಲ್ಲವು ಮರೆತು ತನು ಮಾತ್ರ ಈಗ ನನ್ನ ಮನಸ್ಸಿನಲ್ಲಿ. ಮನೆಗೆ ಹೋಗಲು ಭಯವಾಯಿತು. ದಿನು ಗೆಳೆಯನಾಗಿ ಇಷ್ಟು ಬೈದಾಡಿದವನು ಅವನ ಗೆಳೆಯನಾಗಿ, ನನ್ನ ಗಂಡನಾಗಿ ಅಜಯ ಹೇಗೆ ಮಾತಾಡಬಹುದು. ಬಹುಶಃ ಅದಕ್ಕೆ ನನಗೆ ಫೋನ್‌ ಇಲ್ಲ, ಮಾತಿಲ್ಲ ; ತನುವಿಗೆ ಏನಾಯಿತು? ಹುಷಾರಿ¨ªಾಳೆ ತಾನೆ, ಎಂದೆಲ್ಲಾ ಯೋಚಿಸುತ್ತ ಆಟೋ ಹಿಡಿದು ಮನೆ ಸೇರಿದೆ. ಹೇಗೆ ಮನೆ ತಲುಪಿದೆನೋ ಗೊತ್ತಿಲ್ಲ. ಅಜಯ್‌ ಹೊರಗೆ ಸಿಟ್‌ಔಟ್‌ನಲ್ಲಿಯೇ ಪೇಪರ್‌ ಓದುತ್ತ ಕುಳಿತಿದ್ದ.

ಇವತ್ತು ಶನಿವಾರ ಬೇರೆ.  ಸ್ವಲ್ಪ ಫ್ರೀಯಾಗಿಯೇ ಇರುತ್ತಾನೆ. ಮಕ್ಕಳು ಶಾಲೆಗೆ ಹೋದ ಕುರುಹಾಗಿ ಹಾಲುಕುಡಿದ ಕಪ್‌ಗ್ಳು ಟೀಪಾಯಿ ಮೇಲಿದ್ದವು. ಶೂ ಬ್ರಶ್‌ ಬಿದ್ದಿತ್ತು. ನಾನು ಪೇಲವವಾಗಿ ಅವನನ್ನು ನೋಡಿ ನಕ್ಕು, “”ಗುಡ್‌ ಮಾರ್ನಿಂಗ್‌” ಅಂದೆ. ಅವನು ಮುಗುಮ್ಮಾಗಿ, “”ಗುಡ್‌ ಮಾರ್ನಿಂಗ್‌” ಅಂದ. ಅವನ ಗುಡ್‌ ಮಾರ್ನಿಂಗ್‌ ನನಗೆ, “”ಬಂದಿಯಷ್ಟೇ ನಿನಗೆ ಇಟ್ಟಿದ್ದೀನಿ” ಅಂದ ಹಾಗೆ ಆಯಿತು. 

ರೂಮ್‌ ಹೋಗಿ ಲಗೇಜ್‌ ಎಸೆದವಳೇ ಬಾತ್‌ರೂಮ್‌ ಸೇರಿದೆ. ಸ್ನಾನ ಮುಗಿಸಿ ಫ್ರೆಶ್‌ ಆಗಿ ಹೊರಬಂದೆ. ಅಷ್ಟರಲ್ಲಿ ಮನೆಕೆಲಸದ ವನಿತಕ್ಕ ಬಂದು ತನ್ನ ಕೈಚಳಕ ತೋರಿದಳು. ಅಡುಗೆ ಮನೆ ಸ್ವತ್ಛವಾಗಿತ್ತು. ಒಗೆಯುವ ಬಟ್ಟೆ ಮಿಶನ್‌ ಹೋಗಿದೆ. ಮನೆ ಕಸ ಹೊಡೆದಾಗಿತ್ತು. ಅಜಯ್‌ ಹಾಗೆಯೇ ಇದ್ದ. ಬಹುಶಃ ವನಿತಾಕ್ಕನ ಎದುರು ಯಾಕೆ ಎಂದೋ ಏನೋ. 10 ಗಂಟೆಗೆಲ್ಲಾ ವನಿತಾಕ್ಕ ಮನೆ ಬಿಟ್ಟಳು. ಈಗ ಅಜಯ್‌ ಬಾಯಿ ಬಿಟ್ಟ. “”ನಿನ್ನ ಫ್ರೆಂಡ್‌ಗೆ ಏನಾಗಿದೆ.

ಎಷ್ಟು ಸೊಕ್ಕು ಅವಳಿಗೆ?” ಈಗ ನನ್ನ ಹೊಟ್ಟೆಯೊಳಗಿಂದ ಸಿಟ್ಟು ರೊಮ್ಮೆನೆ ಹೊರಬಂತು. ಇವನಿಗೆ ಎಷ್ಟು ಸೊಕ್ಕು ನನ್ನ ಗೆಳತಿಗೆ ಸೊಕ್ಕು ಎನ್ನಲು. ಇನ್ನೇನು ನನ್ನ ನಾಲಗೆ ಕಟು ಉತ್ತರ ಹೇಳಲು ಹೊರಳುವ ಮುನ್ನ ಒಳಗೆ ಎಳೆದು ಇಟ್ಟು ಸುಧಾರಿಸಿಕೊಳ್ಳುವಷ್ಟÃಲ್ಲಿ ನನ್ನ ಹತ್ತಿರಕ್ಕೆ ಹೊಡೆಯುವವನಂತೆ ಬಂದವನೇ, “”ಅವಳಿಗೆ ಹುಚ್ಚುಗಿಚ್ಚು ಹಿಡಿದಿದೆಯಾ? ಇಷ್ಟೆಲ್ಲ ಮುಂದೆ ಹೋದಮೇಲೆ ಮದುವೆ ಬೇಡಾ ಹೇಳಲು. ಅವಳೇನು ಸಣ್ಣ ಹುಡುಗಿಯೇ? ಅಲ್ಲದೇ ಅವಳನ್ನು ಯಾರು ಬಲವಂತ ಮಾಡಿರಲಿಲ್ಲ. ಬೇಕಾದಷ್ಟು ಸಮಯ ತೆಗೆದುಕೊಂಡು ಅವಳ ನಿರ್ಧಾರ ಹೇಳಿದ್ದಳು”.

ನಾನೆಂದೆ, “”ನೋಡು ಅಜು, ತನುವಿನ ಎದುರು ಹೀಗೆಲ್ಲಾ ಮಾತಾಡಬೇಡ. ಮತ್ತು ಹೀಗೇ ವರ್ತಿಸಿದರೆ ನಿನ್ನ ಮಾರ್ಯಾದೆಯೇ ಹೋಗುವುದು. ನಾನು ಅವಳನ್ನು ಕಂಡುಬರುವವರೆಗೂ ನೀನು ತನುವಿನಲ್ಲಿ ಮಾತನಾಡಬಾರದು. ನಿನ್ನ ಮೇಲೆ ಅವಳಿಗೆ ವಿಶೇಷ ಗೌರವ ಪ್ರೀತಿಯಿದೆ. ನನಗಿಂತಲೂ ಒಂದು ಕೈ ಹೆಚ್ಚು. ಹಾಗಾಗಿ, ಅದನ್ನು ಉಳಿಸಿಕೋ… ಮತ್ತೆ ಒಬ್ಬಳು ಹೆಣ್ಣುಮಗಳು ತನ್ನ ಮದುವೆ ಎಂಗೇಜ್‌ಮೆಂಟ್‌ ಮುರಿಯುವಂಥ ನಿರ್ಧಾರಕ್ಕೆ ಬಂದಳೆಂದರೆ ಅದರ ಹಿಂದೆ ಏನೋ ಬಲವಾದ ಕಾರಣ ಇದ್ದೇ ಇರುತ್ತದೆ” ಅದಕ್ಕೆ ಅಜು, “”ಬಲವಾದ ಕಾರಣ ಮಣ್ಣಾಂಗಟ್ಟಿ… ನಿನಗೆ ಹೇಗೆ ನಿನ್ನ ಗೆಳತಿ ಮೇಲೋ ಹಾಗೆ ನಮಗೆ ನಮ್ಮ ಗೆಳೆಯ. ನಮಗೆ ಯಾಕೆ ಬೇಕಿತ್ತು ಈ ಉಸಾಬರಿ. ರಜೆಗೆ ನಮ್ಮೊಡನೆ ಇರಲಿಕ್ಕೆ ಬಂದವನನ್ನು ಮದುವೆ ಒಪ್ಪಿಸಿ ಈಗ ನೋಡಿದರೆ…” ಎಂದು ಗೊಣಗುತ್ತ ಕಾಲು ಅಪ್ಪಳಿಸುತ್ತ ಹೋದ. 

ಮನೆ ಉಡುಪು ಬದಲಾಯಿಸಿ ಸಿಕ್ಕಿದ ಕುರ್ತಾ ಹಾಕಿಕೊಂಡು ಅಜಯ್‌ ಜತೆಗೆ ಒಂದು ಶಬ್ದವನ್ನು ಮಾತಾಡದೆ ಹೊರಗೆ ಬಂದೆ. ಸ್ಕೂಟರ್‌ಸ್ಟಾರ್ಟ್‌ ಮಾಡಲು ನೋಡಿದರೆ, ಅದು ಸ್ಟಾರ್ಟ್‌ ಆಗಲು ಒಲ್ಲದು. ಸಾಧಾರಣವಾಗಿ ಹಾಗೆ ಆದರೆ ಒಂದು ಸಣ್ಣ ಪ್ರಯತ್ನವನ್ನು ಮಾಡದೆ ಅಜಯನನ್ನು ಕರೆದು ಸ್ಟಾರ್ಟ್‌ ಮಾಡಿಕೊಡಲು ಹೇಳುವ ನಾನು ಇವತ್ತು ಸೆಲ್ಫ್ಸ್ಟಾರ್ಟ್‌ ಬಿಟ್ಟು ಸ್ಟಾrಂಡ್‌ ಎಳೆದು ಹಾಕಿ ನಿಲ್ಲಿಸಿ, ಕಿಕ್‌ ಹಾಕಿ ಅವನ ಮೇಲಿನ ಕೋಪವನ್ನೆಲ್ಲಾ ಕಿಕ್ಕ‌ರ್‌ ಮೇಲೆ ತೋರಿಸಿದೆ. ಒಂದೇ ಕಿಕ್‌ ಸ್ಕೂಟರ್‌ ಸ್ಟಾರ್ಟ್‌!  20 ನಿಮಿಷದಲ್ಲಿ ತನು ಮನೆ ಮುಂದೆ ನಿಂತಿ¨ªೆ. ಕರೆಗಂಟೆ ಒತ್ತಿದಾಗ ತನುವೇ ಬಾಗಿಲು ತೆರೆದಳು. ಅದೇ ತಾನೇ ಸ್ನಾನ ಮಾಡಿದಳು ಕಾಣುತ್ತೆ. ಒ¨ªೆ ಕೂದಲನ್ನು ಹಾಗೆ ಬೆನ್ನ ಮೇಲೆ ಹರಡಿಕೊಂಡಿದ್ದಳು. ಶುಭ್ರಮುಖ ಮತ್ತಷ್ಟು ಆತ್ಮವಿಶ್ವಾಸದಿಂದ ಹೊಳೆಯುತ್ತಿರುವ ಹಾಗೆ ಕಂಡಿತ್ತು. ಮದುವೆ ನಿಶ್ಚಯವನ್ನು ಬೇಡವೆಂದಿಟ್ಟ ಯಾವುದೇ ನೋವು ಒತ್ತಡ ಕಾಣದೆ ನಿರುಮ್ಮಳವಾಗಿ ಇದ್ದಂತೆ ಕಂಡಿತ್ತು. ಹಿತವಾದ ಮುಗುಳು ನಗು. ಆಹಾ! ನನ್ನೊಳಗೆ ಅದುಮಿಟ್ಟಿದ್ದ ಸಿಟ್ಟು, ನೋವು ಅÇÉೇ ಕರಗಿ ನಾನು ಅಷ್ಟೇ ನಿರಾಳವಾಗಿ ನಕ್ಕೆ. 

ನನ್ನ ನಗುವಿನಿಂದ ಉತ್ತೇಜಿತಗೊಂಡಂತೆ ಅವಳು ನನ್ನನ್ನು ಹಿಡಿದು ಇಡಿಯಾಗಿ ಹಗುರವಾಗಿ ತಬ್ಬಿಕೊಂಡಳು. ನಾನೂ ಮೌನವಾಗಿ ತಬ್ಬಿದೆ. “”ನಿನ್ನನ್ನೇ ನಿರೀಕ್ಷೆ ಮಾಡುತ್ತಿ¨ªೆ. ನಿನಗೊಬ್ಬಳಿಗೆ ಅರ್ಥವಾದರೆ ಸಾಕು. ಬೇರೆ ಯಾರಿಗೂ ಅರ್ಥವಾಗಲಿ ಬಿಡಲಿ… ಐ ಜಸ್ಟ್‌ ಡೋಂಡ್‌ ಮೈಂಡ್‌” ಎಂದಳು. ಒಳಹೋಗಿ ದೊಡ್ಡ ಕಾಫಿ ಮಗ್‌ ಒಂದು ಚಿಪ್ಸ್‌, ಹಾಕಿಕೊಂಡು ಬಂದಳು. ನಾನು ಅವಳ ಮನೆಯ ನನ್ನ ಅಚ್ಚುಮೆಚ್ಚಿನ ಜಾಗವಾದ ಆ ಬಾಲ್ಕನಿಯ ವಿಶಾಲವಾದ ಕಿಟಿಕಿಗೆ ಒರಗಿ ಕುಳಿತುಕೊಂಡೆ. 

ಕಾಫಿಯ ಪರಿಮಳ ಆಘ್ರಾಣಿಸುತ್ತ ನನ್ನೊಳಗೆ ಮೆದುವಾದೆ. ನಿಧಾನವಾಗಿ ಕೇಳಿದೆ, “”ಯಾಕೆ ಏನಾಯಿತು ರವಿಗೆ ಬೇಡ ಎಂದು ಯಾಕೆ ಹೇಳಿದೆ. ಅಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ನನ್ನ ಹತ್ರ. ಯಾಕೆ ಹೇಳಿಲ್ಲ? ಅದಿರಲಿ, ಏನಾಗಿತ್ತು? ನಿನಗೆ ಮನಪೂರ್ತಿಯಾಗಿ ಒಪ್ಪಿಗೆಯಾಗಿರಲಿಲ್ಲ ಎನ್ನುವ ಸತ್ಯ ನಮಗೆ ಇಬ್ಬರಿಗೇ  ಗೊತ್ತು. ನಾವಿಬ್ಬರೂ ಕೂತು ಯೋಜನೆ ಬರೆಯುವ ಹಾಗೆ ಬರೆದು ಕೂಡಿಸಿ ಕಳೆದು ಗುಣಿಸಿ ಭಾಗಿಸಿ ಒಂದಾಗಿಸಿದ ಮೇಲೆ ನೀನು ಸಮ್ಮತಿಸಿದ ಮದುವೆಯಾಗಿತ್ತು. ಎಲ್ಲದರಲ್ಲೂ ಅವನ ವಿಶಾಲ ಮನೋಭಾವ… ನಗುನಗುತ್ತಾ ಮಾತಾಡುವ ರೀತಿಗೆ ನಾವು ಹೆಚ್ಚು ಮಾರ್ಕ್ಸ್ ಕೊಟ್ಟಿ¨ªೆವು ಮತ್ತು ಈ 40ರ ವಯಸ್ಸಿನಲ್ಲಿ  ಜತೆಗೆ ನಡೆಯಲು ಓರ್ವ ಸಂಗಾತಿ ಬೇಕೆಂದು, ವಯಸ್ಸು ಕಳೆದ ಮೇಲೆ ಚಿಂತಿಸಿ ಫ‌ಲವಿಲ್ಲ ಎಂದೆಲ್ಲಾ ಬಹಳ ಪ್ರಾಕ್ಟಿಕಲ್‌ ಆಗಿ ಚರ್ಚಿಸಿದ ಮೇಲೆಯೇ ನೀನು ನಿನ್ನ ನಿರ್ಧಾರ ಹೇಳಿದ್ದು.

ನಾನು ಮತ್ತು ಅಜಯ್‌ ರವಿ ಜತೆ ಮಾತುಕತೆ ಮುಂದುವರಿಸಿದ್ದು, ಮದುವೆ ಹೊಂದಿಸಿದ್ದು. ಮತ್ತೆ ನೀನು ನಿರಾಳವಾಗಿ ಅ ಸಂಬಂಧದೊಳಗೆ ಒಳಗೊಳ್ಳುತ್ತಿರುವ ಹಾಗೆ ಕಂಡು ನಾನು ನಿರಾಳವಾಗಿ¨ªೆ” ಎಂದು ದೀರ್ಘ‌ವಾಗಿ ಮಾತಾಡಿದೆ ಸ್ವಗತವೆಂಬಂತೆ. ತನು ಬಾಯಿಬಿಟ್ಟಳು. ನಿಧಾನವಾಗಿ ನೀಡಿದಾದ ಉಸಿರು ತೆಗೆದುಕೊಂಡು, “”ಹೌದು ಮದುವೆಗೆ ನನ್ನ ಮನಸ್ಸನ್ನು ಒಪ್ಪಿಸಿದೆ. ಮನಸ್ಸನ್ನು ಒಪ್ಪಿಸಲು ಬಹಳ ಕಷ್ಟಪಡಬೇಕಾಯಿತು. ಒಮ್ಮೆ ಮನಸ್ಸು ಹುರಿಗೊಳಿಸಿದ ಮೇಲೆ ಅವನ ಜತೆ ಮಾತುಕತೆ ಶುರುಮಾಡಿದೆ. “”ನಾನು ಯೋಚನೆ ಮಾಡಿದೆ ಈತ ಆಗಬಹುದು. ನನ್ನ ಹಿಂದಿನ ನೋವುಗಳನ್ನು ಅರ್ಥಮಾಡಿಕೊಂಡು ಒಬ್ಬ ಮದುವೆಗೆ ತಯಾರಾಗಿದ್ದನಲ್ಲಾ ಎಂದು ಖುಷಿಯಾಗತೊಡಗಿತ್ತು.

ಆದರೆ, ನಾವು ಯಾವ ಅವನ ವಿಶಾಲ ಮನೋಭಾವಕ್ಕೆ ಹೆಚ್ಚು ಮಾರ್ಕ್ಸ್ ಕೊಟ್ಟಿ¨ªೆವೋ ಅದೇ ವಿಶಾಲ ಮನೋಭಾವವೇ ನನಗೆ ಕಷ್ಟ ಆಯಿತು ಕಣೇ”. ನಾನು ಮತ್ತೆ “”ಏನಾಯಿತು” ಎಂದು ಹುಬ್ಬೇರಿಸಿದಾಗ, “”ನೀನು ಅಜು ಅವನ ಜತೆ ಹೇಗೆ ಮಾತುಕತೆ ಶುರುಮಾಡಿದಿರಿ ಅಂತ ಗೊತ್ತಿಲ್ಲ. ಆದರೆ ನನಗೆ ನೀವು ಹೇಳಿದಂತೆ ನನ್ನ ಮತ್ತು ಆನಂದನ ಪ್ರೇಮಭಗ್ನ ಕತೆ, 10 ವರುಷದ ನಮ್ಮ ಒಡನಾಟ ಎಲ್ಲಾ ಅವನಿಗೆ ವಿವರವಾಗಿ ಹೇಳಿದಿರಿ. ಅದಕ್ಕೆ ಅವನು ನನಗೆ ಅದೊಂದು ವಿಷಯವೇ ಅಲ್ಲ.  ನನಗೆ ತನುವಿನಂತಹ ಹುಡುಗಿ ಮುಖ್ಯ ಎಂದು ಹೇಳಿದ್ದನ್ನು ಹೇಳಿದಿರಿ.

ಮತ್ತೆ ಅವನ ಅದೇ ಮಾತು ನಿಮಗಿಬ್ಬರಿಗೂ, ಮತ್ತೆ ನನಗೂ ಇಷ್ಟವಾದದ್ದು. ಸರಿ ತಾನೆ?” ಎಂದು ನನ್ನನ್ನು ಪ್ರಶ್ನಿಸಿದಳು. ನಾನೆಂದೆ, “”ಹಂಡ್ರೆಡ್‌ ಪಸೆಂಟ್‌!” ಅವನು ಬಹಳ ಸ್ಪಷ್ಟವಾಗಿ ಹೇಳಿದ್ದ. ಅವಳು ಮುಂದುವರಿಸಿದಳು, “”ನಾನು ಅವನು ಈ ನಡುವೆ ಕೆಲವು ಎಸ್‌ಎಂಎಸ್‌, ವಾಟ್ಸಾಪ್‌, ಫೋನ್‌ ಶುರುಮಾಡಿದ್ದೆವು. ನನಗೂ ಖುಶಿಯಾಗಲು ಶುರುವಾಗಿತ್ತು. ಈ ವಯಸ್ಸಿನಲ್ಲಿ ಮತ್ತೆ  ಹರೆಯ ಬಂದಂತೆ ಆಗಿತ್ತು. ಈ ನಡುವೆ ಅವನು ಕೇಳುವ ಪ್ರಶ್ನೆ ನೋಡು- ಆನಂದ ಯಾವ ಕಾರಣಕ್ಕೆ ನಿನ್ನನ್ನು ತಿರಸ್ಕರಿಸಿದ. ನಂತರ ಅವನ ಮಾತು ಕೊನೆಗೊಳ್ಳುವುದು ಹೀಗೆ- ನಾನು ಸುಮ್ಮನೆ ಹೀಗೆ ಕೇಳಿದೆ. ತಾನು ವಿಶಾಲ ಮನೋಭಾವದವನು ಬ್ರಾಡ್‌ ಮೈಂಡೆಡ್‌ ಹುಡುಗ, ಸುಮ್ಮನೇ ಕೇಳಿದೆ” ಅಂತಾನೆ. ಮತ್ತೂಮ್ಮೆ ಹೀಗೆ ಮಾತಾಡುತ್ತ¤, “”ನೀವು ಜತೆಗೆ ಓಡಾಡಿದಿರಿ ಅಂತ ಹೇಳಿದಿರಿ. ಓಡಾಟ ಮತ್ತೆ ಎಲ್ಲಾ ಮುಗಿಸಿಕೊಂಡಿದ್ದೀರೋ ಹೇಗೋ? ಅಲ್ಲಾ ನಾನು ಸುಮ್ಮನೆ ಕೇಳಿದೆ. ನಾನು ವಿಶಾಲ ಮನೋಭಾವದವನು ಬ್ರಾಡ್‌ ಮೈಂಡೆಡ್‌ ಹುಡುಗ ಸುಮ್ಮನೇ ಕೇಳಿದೆ” ಅಂದ.

“”ಮತ್ತೂಮ್ಮೆ ಅವನ ಮನೆಯವರ ಜತೆ ಮಾತಾಡಿಸಿದ. ಅವನ ಅಪ್ಪನ ಮಾತು ಕೇಳು- “”ರವಿ ನಿನ್ನ ಕತೆ ಎಲ್ಲಾ ಹೇಳಿದ. ನಮಗೆ ನಿನ್ನ ಹಿಂದಿನ ಸಂಬಂಧದ ಬಗ್ಗೆ ಏನು ತಕರಾರು ಇಲ್ಲ. ನಿನಗೊಂದು ಬಾಳು ಕೊಡುತ್ತಿ¨ªಾನೆ ಅವನು. ಅವನ ಬಗ್ಗೆ ನನಗೆ ಹೆಮ್ಮೆಯಿದೆ. ನಾವು ವಿಶಾಲಮನೋಭಾವದವರು ಎಜುಕೇಟೆಡ್‌ ಕುಟುಂಬ, ಏನೂ ಯೋಚಿಸಬೇಡ”. “”ನ‌ನ್ನ ಮೈಯೆಲ್ಲ ಉರಿದುಹೋಗಿತ್ತು ಕಣೇ… ಅಲ್ಲಾ ನನ್ನ ಹಿಂದಿನ ಪ್ರೇಮ ಮುಗಿದು ಹೋದ ಅಧ್ಯಾಯ. ಅದಕ್ಕೆ ಇವರ ನೊ ಅಬೆjಕ್ಷನ್‌ ಸರ್ಟಿಫಿಕೇಟ್‌ ನನಗೆ ಯಾಕೆ…”

ಮತ್ತೂಮ್ಮೆ ಹೇಳಿದ, “”ನಮ್ಮ ಅಮ್ಮ ಸಂಪ್ರಾದಯಸ್ಥೆ. ನೀನು ಜೀನ್ಸ್‌ ಪ್ಯಾಂಟು ಹೀಗೆಲ್ಲಾ ಹಾಕಿಕೊಳ್ಳೋದು ಇಷ್ಟ ಆಗಲಿಕ್ಕಿಲ್ಲ. ಆದರೆ ತಲೆಬಿಸಿ ಮಾಡ್ಕೊàಬೇಡಾ ನಾನು ಅಮ್ಮನಿಗೆ ಹೇಳ್ತಿನಿ. ನನಗೆ ಏನು ತೊಂದರೆ ಇಲ್ಲ. ನಾನು ವಿಶಾಲ ಮನೋಭಾವದವನು ಬ್ರಾಡ್‌ ಮೈಂಡೆಡ್‌ ಹುಡುಗ… ನನ್ನ ಅಮ್ಮ ಏನಾದರೂ ಅಸಮಾಧಾನ ತೋರಿಸಿದರೆ ಸುಮ್ಮನಿದ್ದುಬಿಡು…”

ಇದು ಸ್ಯಾಂಪಲ್‌ ಅಷ್ಟೇ . ಅವನ ಎಲ್ಲಾ ಮಾತಿನಲ್ಲೂ ಹೀಗೆ ಅವನ ವಿಶಾಲಮನೋಭಾವದ ಕುರಿತು ಉÇÉೇಖ ಇದ್ದೇ ಇರುತ್ತೆ, ನನಗೆ ಅವನ ಈ ಬಾಳು ಕೊಡುವ, ನಾನು ಬೊಗಸೆಯೊಡ್ಡಿ ಸ್ವೀಕರಿಸುವ, ಅವನ ವಿಶಾಲ ಮನೋಭಾವವನ್ನು ದಿನನಿತ್ಯ ಪಾಡಿಪೊಗಳಲು ಆಗದು. ಈ ಋಣಭಾರದಲ್ಲಿ ಬದುಕಲು ನನ್ನಿಂದಾಗದು. ಬಹಳ ಭಾರ ಭಾರ ಅನಿಸಲಿಕ್ಕೆ ಶುರು ಆಗಿತ್ತು. ಈ ಮಧ್ಯವಯಸ್ಸಿನಲ್ಲಿ ನನಗೆ ಈಗ ಒಬ್ಬ  ಸಂಗಾತಿಯಾಗಿ ಬೇಡ್ವೇ… ನನ್ನೊಂದಿಗೆ ಹೆಜ್ಜೆ ಹಾಕುವವ ಬೇಕು. ಕೈಹಿಡಿದು ನಡೆಸುವವ ಬೇಡ. ಕೈಗೆ ಕೈ ಬೆಸೆದು ನಡೆಯುವವ ಬೇಕಾಗಿರುವುದು. ರಕ್ಷಣೆ ಕೊಡುವವನಲ್ಲ… ಮನ್ನಣೆ ಕೊಡುವವ ಬೇಕಾಗಿರುವುದು. ಈ ಬಾಳು ಕೊಡುವ, ವಿಶಾಲ ಮನೋಭಾವ ಹಾಗೇ ಹೀಗೆ ಏನೇನೋ ಒದರುತ್ತ ನನ್ನನ್ನು ದಿನಾ ಕುಗ್ಗಿಸುವವನು ಬೇಡ ಬೇಡ”. 

“”15 ವರುಷದ ಹಿಂದೆ ಆನಂದ ನನ್ನನ್ನು ಬಿಟ್ಟು ಹೊರನಡೆದಾಗ  ನನಗೆ ಆಗ ಆದ ಆಫಾತ, ನೋವು, ದುಃಖ, ನಿರಾಶೆಯನ್ನು ಹೇಳಲು ಬಾರದು. ನೀನು ಅಜು, ದಿನು ಎಲ್ಲರೂ ಅವನನ್ನು ಶಪಿಸಿದಿರಿ. ಅಜಯನಂತೂ ಅವನನ್ನು ಕೊಂದೇ ಬಿಡುವ ಮಾತಾಡುತ್ತಿದ್ದ. ಆದರೂ ನೀವೆಲ್ಲರೂ ನನ್ನ ಜತೆ ನಿಂತಿರಿ. ಎಲ್ಲವನ್ನೂ ಮೀರಿ ಈಗ ಚೆನ್ನಾಗಿದ್ದೇನೆ. ನನಗೆ ಈಗ ಅವನ ಮೇಲೆ ಕೋಪ ಇಲ್ಲ. ನಾನು ಪ್ರೀತಿಸುವಾಗ ಅವನನ್ನು ಅಪ್ಪಟವಾಗಿ ಪ್ರೀತಿಸಿದೆ. ಮತ್ತೆ ಏನಾಯಿತೋ ಗೊತ್ತಿಲ್ಲ. ಈಗ ನನ್ನ ಮನಸ್ಸಿನಲ್ಲಿ ಅವನಿಗೆ ಒಳ್ಳೆಯದಾಗಲಿ. ಸುಖವಾಗಿರಲಿ ಅಂತಾನೇ ಬಯಸುತ್ತೇನೆ. ಪುನಃ ನನಗೆ ನೀನು “ದೊಡ್ಡ ಮನಸ್ಸು’ ಅನ್ನುವ ಪಟ್ಟ ಕೊಡಬೇಡ. ಅದರಲ್ಲಿ ನನ್ನ ಸ್ವಾರ್ಥ ಇದೆ. ಹಾಗೇ ಹಾರೈಸುವಾಗ ನನಗೆ ಒಂಥರ ಖುಶಿ ಸಿಗುತ್ತೆ ಒಂಥರದ ಹೇಳಲಾಗದ ಅನುಭೂತಿಯಾಗುತ್ತೆ. ಆ ಸುಖವೇ ಬೇರೆ. ಈಗ ಈ ವಿಶಾಲ ಮನೋಭಾವದವನನ್ನು ಇಷ್ಟವಿಲ್ಲ ಎಂದು ಹೇಳಿದಾಗಲೂ ಒಂಥರದ ಹೇಳಲಾಗದ ಭಾವ. ಜತೆಗೆ ದೊಡ್ಡ ಭಾರ ಕಡಿಮೆಯಾದ ಹಾಗೆ. ಹಗುರವಾದ ಹಾಗೆ… ಈ ಸುಖವಾದರೂ ನನಗೆ ಇರಲಿ. ನಿನ್ನ ಹತ್ತಿರ ಹೇಳಿದರೆ ಎಲ್ಲಿ ಮತ್ತೆ ನೀನು ಜೀವನವನ್ನು ಪ್ರಾಕ್ಟಿಕಲ್‌ ಆಗಿ ನೋಡು. ಮುಂದಿನ ಭವಿಷ್ಯ ಹಾಗೆ ಹೀಗೆ ಹೇಳುತ್ತಿ. ಆಗ ನನಗೆ ಇಷ್ಟು ನಿರಾಳವಾಗಿ ಹೇಳಲಿಕ್ಕೆ ಆಗುತ್ತಿರಲಿಲ್ಲವೆ? ಅದಕ್ಕೆ ನಿನ್ನ ಗೈರುಹಾಜರಿಯಲ್ಲಿ ಹೇಳಿದೆ. ಮತ್ತೆ ನಿನಗೆ ಹೇಳಿ ಅರ್ಥಮಾಡಿಸಬÇÉೆ ಎನ್ನುವ ಧೈರ್ಯವಿತ್ತು. ಈಗಲೇ ಈ ಸಂಬಂಧ ಇಷ್ಟು ಭಾರವಾದರೆ ಮುಂದೆ ಭವಿಷ್ಯ ಎಷ್ಟು ಭಾರವಾಗಬಹುದು ಅಲ್ವೆ?”

ದೀರ್ಘ‌ವಾಗಿ ಹೇಳಿದ ತನುವನ್ನು ನಾನು ದಿಟ್ಟಿಸಿ ನೋಡುತ್ತಿದ್ದೇನಾದರೂ ಕಣ್ಣು ಮಂಜಾಗಿ ತನು ಕಾಣಿಸಲೇ ಇಲ್ಲ. 

– ಮಂಜುಳಾ ಸುನಿಲ್‌

ಟಾಪ್ ನ್ಯೂಸ್

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.