ದ.ಕ.ದಲ್ಲಿ ಬಿಜೆಪಿಯಿಂದ ಹೊಸದಿಲ್ಲಿ ತಂತ್ರಗಾರಿಕೆ?


Team Udayavani, Aug 10, 2017, 8:10 AM IST

bjp-1.jpg

ಮಂಗಳೂರು: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೊಸದಿಲ್ಲಿಯ ಪ್ರಯೋಗವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಾಡಲಿದೆಯೇ… ಹೀಗೊಂದು ಮಾತು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಎಪ್ರಿಲ್‌ನೊಳಗೆ ಚುನಾವಣೆ ನಡೆಯಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಚುನಾವಣಾ ಸಿದ್ಧತೆಯ ಕಹಳೆ ಮೊಳಗಿಸಿವೆ. 

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳಿದಂತೆ ಅಭ್ಯರ್ಥಿಗಳು ಈಗಾಗಲೇ ಬಹುತೇಕ ಖಚಿತಗೊಂಡಿದ್ದು ಅವರ ಗೆಲುವಿಗೆ ಕಾರ್ಯಕರ್ತರನ್ನು ಪ್ರೇರೇಪಿಸುವ ಕಾರ್ಯವೂ ಪಕ್ಷದ ಜಿಲ್ಲಾ, ಬ್ಲಾಕ್‌ ಮಟ್ಟದ ನಾಯಕರು ಆರಂಭಿಸಿ ದ್ದಾರೆ. ಬಿಜೆಪಿಯಲ್ಲೂ ಚುನಾವಣೆಗೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ನಡೆಯುತ್ತಿದೆಯಾದರೂ ಅಭ್ಯರ್ಥಿಗಳ ಕುರಿತಂತೆ ಒಂದು ರೀತಿಯ ಅಸ್ಪಷ್ಟತೆ ಎದ್ದು ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ತನ್ನ ಮೂಲಗಳ ಮೂಲಕ ನಡೆಸುತ್ತಿರುವ ಆಂತರಿಕ ಸಮೀಕ್ಷೆ ಹಾಗೂ ಹೊಸದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಯೋಗಿಸಿ ಯಶಸ್ವಿಯಾದ ಹೊಸ ಮುಖಗಳಿಗೆ ಅವಕಾಶ.

ಶಾ ತಂತ್ರದಡಿಯಲ್ಲಿ ಈಗಾಗಲೇ ತನ್ನ ಚಾಣಾಕ್ಷ ಕಾರ್ಯತಂತ್ರದ ಮೂಲಕ ರಾಷ್ಟ್ರದ ಬಹುತೇಕ ರಾಜ್ಯಗಳನ್ನು ಬಿಜೆಪಿಗೆ ಸೆಳೆದು ಕೊಂಡಿರುವ ಅಮಿತ್‌ ಶಾ ಕ‌ರ್ನಾಟಕ ವನ್ನು ಮುಂದಿನ ಕಾರ್ಯಕ್ಷೇತ್ರ ವಾಗಿರಿಸಿ ಕೊಂಡಿದ್ದಾರೆ. ಮಿಷನ್‌ 150 ಗುರಿ  ಇರಿಸಿ ಕೊಂಡು ಇದರ ಸಾಕಾರಕ್ಕೆ ರಾಜ್ಯ ಘಟಕ ವನ್ನು ಕಾರ್ಯಕ್ಷೇತ್ರಕ್ಕಿಳಿಸಿದ್ದಾರೆ. ದ.ಕ.ಜಿಲ್ಲೆಯಲ್ಲೂ ಬಿಜೆಪಿಯಲ್ಲಿ ತಳಮಟ್ಟದಲ್ಲಿ ಪಕ್ಷದ ಸಂಘಟನೆ ಚುರುಕುಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲೂ ವಿಸ್ತಾರಕರ ಮಾರ್ಗದರ್ಶನದಲ್ಲಿ ಮನೆಮನೆ ಭೇಟಿ ಕಾರ್ಯ ನಡೆದಿದೆ. ಪಕ್ಷ ನಿರ್ಧರಿಸುವ ಯಾವುದೇ ಅಭ್ಯರ್ಥಿ ಇರಲಿ ಅವರ ಗೆಲುವಿಗೆ ಶ್ರಮಿಸುವ ಭೂಮಿಕೆಯನ್ನು ಕಾರ್ಯಕರ್ತರಲ್ಲಿ ಸಿದ್ಧಪಡಿಸಲಾಗುತ್ತಿದೆ.

ದ.ಕ. ಜಿಲ್ಲೆ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವ ಜಿಲ್ಲೆಗಳಲ್ಲೊಂದು. ಪಕ್ಷದ ಮೂಲಗಳ ಪ್ರಕಾರ ಅಮಿತ್‌ ಶಾ ಅವರು ಜಿಲ್ಲೆಯಲ್ಲಿ ಯಾರಿಗೂ ಸುಳಿವು ನೀಡದೆ ಖಾಸಗಿ ಏಜೆನ್ಸಿಯ ಮೂಲಕ ಈಗಾಗಲೇ ಒಂದು ಸುತ್ತಿನ ಆಂತರಿಕ ಸಮೀಕ್ಷೆ ನಡೆಸಿದ್ದಾರೆ. ಇನ್ನೈದು ತಿಂಗಳುಗಳಲ್ಲಿ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ನಡೆಯಲಿರುವುದರಿಂದ ಅಮಿತ್‌ ಶಾ ಅವರು ಸದ್ಯಕ್ಕೆ ತನ್ನ ಗಮನವನ್ನು ಈ ರಾಜ್ಯಗಳಿಗೆ ಕೇಂದ್ರೀಕರಿಸಿದ್ದಾರೆ. ಇದೇ ವೇಳೆ ಕರ್ನಾಟಕವನ್ನು ದೃಷ್ಟಿಯಲ್ಲಿರಿಸಿಕೊಂಡು ತಂತ್ರಗಾರಿಕೆಗಳನ್ನು ರೂಪಿಸುವ ಕಾರ್ಯವೂ ನಡೆಯುತ್ತಿದೆ. ಆ. 12ರಿಂದ 3 ದಿನ  ಶಾ ಅವರು ಕರ್ನಾಟಕ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಇದರಲ್ಲಿ ಪಕ್ಷದ ರಣನೀತಿಯ ಬಗ್ಗೆ ಒಂದು ಚಿತ್ರಣವನ್ನು ಸೂಚ್ಯವಾಗಿ ನೀಡುವ ಸಾಧ್ಯತೆಗಳಿವೆ.

ಹೊಸದಿಲ್ಲಿ ತಂತ್ರಕ್ಕೆ ಅವಕಾಶ
ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಬಿಜೆಪಿ ಸುಳ್ಯ ಕ್ಷೇತ್ರ ದಲ್ಲಿ ಮಾತ್ರ ಶಾಸಕರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ಹೊರತುಪಡಿಸಿ ಉಳಿದಂತೆ ಹೊಸ ಅಭ್ಯರ್ಥಿಗಳ ಆಯ್ಕೆಗೆ ಅವಕಾಶಗಳಿವೆ. ಇದು ಹೊಸದಿಲ್ಲಿ ತಂತ್ರಗಾರಿಕೆಯನ್ನು ದಕ್ಷಿಣ ಜಿಲ್ಲೆಯಲ್ಲಿ ಪ್ರಯೋಗಿಸಲು ಅನುಕೂಲ ಮಾಡಿಕೊಟ್ಟಿದೆ. ಎಲ್ಲ ಕ್ಷೇತ್ರಗಳಲ್ಲೂ ಆದಷ್ಟು ಹೊಸಮುಖಗಳನ್ನು ಈ ಬಾರಿ ಕಣಕ್ಕಿಳಿಸುವ ಇರಾದೆಯನ್ನು ಪಕ್ಷದ ವರಿಷ್ಠ ಮಂಡಳಿ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ, ಪುತ್ತೂರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿ ಗಳು ಆಂತರಿಕ ಸಮೀಕ್ಷೆಯ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ನೆಲೆಯಲ್ಲಿ ಕಾರ್ಯಕರ್ತರ ಪಾಳೆಯ ಹಾಗೂ ಸಾಮಾಜಿಕ ಕಾರ್ಯ ಕ್ರಮ ಗಳ ಆಯೋಜನೆಯ ಮೂಲಕ ತಮ್ಮ ಪರವಾಗಿ ಒಂದು ಅಲೆಯನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಹಿಂದಿನ ಬಾರಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಜತೆಗೆ ಹೊಸಬರು ಕೂಡ ಒಳಗೊಂಡಿದ್ದಾರೆ. ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಹೆಸರು ಇದೆ ಎಂಬ ಮಾತುಗಳನ್ನು ಕೂಡ ಹರಿಯಬಿಡುವುದು ಕಂಡುಬರುತ್ತಿದೆ.

ಸವಾಲಿನ ಮುನ್ಸೂಚನೆ
ಹೊಸಬರಿಗೆ ಮಣೆ ಹಾಕುವ ತಂತ್ರಗಾರಿಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿರೋಧ ಎದುರಾಗುವ ಮುನ್ಸೂಚನೆಗಳು ಈಗಾಗಲೇ ಕೇಳಿಬಂದಿವೆ. ಜಿಲ್ಲೆಯಲ್ಲಿ ಎರಡು ಪ್ರಭಾವಿ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ ಬಾರಿಯೂ ಟಿಕೆಟು ಆಕಾಂಕ್ಷಿಗಳಾಗಿದ್ದು ಅವಕಾಶ ದೊರೆಯುವ ನಿರೀಕ್ಷೆಯಲ್ಲಿ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈ ಹಿಂದಿನ ಚುನಾ ವಣೆ ಯಲ್ಲಿ ನಾವು ಪಕ್ಷಕ್ಕೆ ಪ್ರತಿಕೂಲದ ಪರಿಸ್ಥಿತಿ ಇದ್ದರೂ ವರಿಷ್ಠರ ಆದೇಶಕ್ಕೆ ತಲೆಬಾಗಿ ಸ್ಪರ್ಧಿಸಿದ್ದೇವೆ. ಒಂದಷ್ಟು ಹಣವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ಪಕ್ಷಕ್ಕೆ ಪೂರಕವಾದ ವಾತಾವರಣ ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಈ ಸನ್ನಿವೇಶದಲ್ಲಿ ಹೊಸಬರನ್ನು ತಂದು ಹಾಕುವುದು ಸರಿಯಲ್ಲ ಎಂಬುದಾಗಿ ತಮ್ಮ ಆಪ್ತ ವಲಯದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. 

ಬಿಜೆಪಿ ಕಾರ್ಯಕರ್ತರ ಪಕ್ಷ. ಸಂಘಟನಾತ್ಮವಾಗಿ ಬೆಳೆದು ಬಂದಿದೆ. ಇಲ್ಲಿ ಅಭ್ಯರ್ಥಿಗಳು ಯಾರು ಆಗುತ್ತಾರೆ ಎಂಬ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿ ಕೊಳ್ಳುವುದಿಲ್ಲ. ಪಕ್ಷ ಆಯ್ಕೆ ಮಾಡುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸುವತ್ತ ಶ್ರಮಿಸುತ್ತಾರೆ. ಹಾಗಾಗಿ ನಮಗೆ ಅಭ್ಯರ್ಥಿಗಳ ಕುರಿತಂತೆ ಯಾವುದೇ ಸಮಸ್ಯೆ ಎದುರಾಗದು ಎಂಬುದು ಪಕ್ಷದ ಜಿಲ್ಲಾ ಪ್ರಮುಖ ನಾಯಕರೋರ್ವರ ಅಭಿಪ್ರಾಯ.

ದಿಲ್ಲಿಯಲ್ಲಿ  ಏನಾಗಿತ್ತು?
ದಿಲ್ಲಿಯ ಮಹಾನಗರ ಪಾಲಿಕೆಗೆ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ 272 ಕ್ಷೇತ್ರಗಳ ಪೈಕಿ 267 ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರಿಗೆ ಪಕ್ಷದ ಟಿಕೆಟು ನೀಡಿತ್ತು. ಅಭ್ಯರ್ಥಿಗಳ ಆಯ್ಕೆ ಮೊದಲು ಆಯಾಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪೈಕಿ ಆಂತರಿಕ ಮೂಲಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಚುನಾವಣೆಯಲ್ಲಿ 181 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಈ ಪ್ರಯೋಗದಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿತ್ತು.

- ಕೇಶವ ಕುಂದರ್‌

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.