ಸುಖಧರೆ ಚಿತ್ರದಲ್ಲಿ ವಿಜಯ್‌; ಕನಕ, ಜಾನಿ ನಂತರ ಚಿತ್ರ ಶುರು

Team Udayavani, Aug 10, 2017, 4:14 PM IST

Vijay-(7).jpg

ನಿರ್ದೆಶಕ ಮಹೇಶ್‌ ಸುಖಧರೆ ಅವರು ರಾಜಕಾರಣಿ ಚೆಲುವರಾಯಸ್ವಾಮಿ ಪುತ್ರ ಸಚಿನ್‌ ಗಾಗಿ ದೇಸಿ ಸೊಗಡಿನ ಕಥೆವುಳ್ಳ “ಹ್ಯಾಪಿ ಬರ್ತ್ ಡೇ’ ಚಿತ್ರ ನಿರ್ದೇಶಿಸಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರದ ನಂತರ ಸುಖಧರೆ ಮತ್ಯಾವ ಚಿತ್ರಕ್ಕೆ ಕೈ ಹಾಕುತ್ತಾರೆ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಎಲ್ಲೆಡೆ ಗಿರಕಿ ಹೊಡೆಯುತ್ತಿತ್ತು. “ಹ್ಯಾಪಿ ಬರ್ತ್‌ಡೆ’ ಸಿನಿಮಾ ಬಳಿಕ ಮಹೇಶ್‌ ಸುಖಧರೆ ಎಲ್ಲೂ ಹೆಚ್ಚು ಸುದ್ದಿಯಾಗಲಿಲ್ಲ.

ಹಾಗಂತ ಅವರು ಸಿನಿಮಾ ಚಟುವಟಿಕೆಗಳಿಂದ ದೂರ ಇರಲಿಲ್ಲ. ಯಾಕೆಂದರೆ, ಅವರು ಇಷ್ಟು ದಿನಗಳ ಕಾಲ ಹೊಸ ಚಿತ್ರದ ಕಥೆಯ ಕೆತ್ತನೆಯಲ್ಲೇ ಬಿಜಿಯಾಗಿದ್ದರು. ಅವರೀಗ ಹೊಸತನ ಇರುವ ಚಿತ್ರಕ್ಕೊಂದು ಕಥೆ ಮಾಡಿಕೊಂಡಿದ್ದಾರೆ.

ಈಗ ಮತ್ತೂಂದು ಸಿನಿಮಾ ನಿರ್ದೇಶನಕ್ಕೆ ಅಣಿಯಾಗಿರುವ ಮಹೇಶ್‌ ಸುಖಧರೆ, ಪುನಃ ಯಾವು ದಾದರು ಹೊಸ ಪ್ರತಿಭೆಯನ್ನು ಕರೆದು ತರುತ್ತಾರೆಯೇ ಎಂಬ ಅನುಮಾನ ಬೇಡ. ಹಾಗಂತ ಯಾರೊಬ್ಬರೂ ಭಾವಿಸಬೇಕಿಲ್ಲ. ಯಾಕೆಂದರೆ, ಮಹೇಶ್‌ ಸುಖಧರೆ ಅವರು ಪಕ್ಕಾ
ಕಮರ್ಷಿಯಲ್‌ ಸಿನಿಮಾಗೆ ಕೈ ಹಾಕಿರುವುದರಿಂದ, ಅವರ ಮುಂದಿನ ಚಿತ್ರಕ್ಕೆ ಕಮರ್ಷಿಯಲ್‌ ಹೀರೋನೇ ಇರುತ್ತಾರೆ. ಅದು ಬೇರಾರೂ ಅಲ್ಲ,
“ದುನಿಯಾ’ ವಿಜಯ್‌. ಹೌದು, ಮಹೇಶ್‌ ಸುಖಧರೆ ತಮ್ಮ ಮುಂದಿನ ಚಿತ್ರವನ್ನು “ದುನಿಯಾ’ ವಿಜಯ್‌ ಅವರೊಂದಿಗೆ ಮಾಡುತ್ತಿದ್ದಾರೆ
ಎಂಬುದು ಈ ಹೊತ್ತಿನ ಹೊಸ ಸುದ್ದಿ.

ಸದ್ಯಕ್ಕೆ “ದುನಿಯಾ’ ವಿಜಯ್‌ ಅವರ ಚಿತ್ರವನ್ನು ಮಹೇಶ್‌ ಸುಖಧರೆ ನಿರ್ದೇಶನ ಮಾಡುತ್ತಾರೆ ಮತ್ತು ಅದೊಂದು ಪಕ್ಕಾ ಸ್ವಮೇಕ್‌
ಚಿತ್ರ ಅನ್ನೋದಷ್ಟೇ ಲೇಟೆಸ್ಟ್‌ ನ್ಯೂಸು. ಅದನ್ನು ಹೊರತುಪಡಿಸಿದರೆ, ಕಥೆ ಏನು, ಸಿನಿಮಾದಲ್ಲಿ ಯಾರ್ಯಾರಿರುತ್ತಾರೆ, ತಂತ್ರಜ್ಞರು ಯಾರು,
ಯಾವಾಗ ಚಿತ್ರೀಕರಣ ಶುರುವಾಗಲಿದೆ, ಎಲ್ಲೆಲ್ಲಿ ಶೂಟಿಂಗ್‌ ನಡೆಯುತ್ತೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ.

ಯಾಕೆಂದರೆ, ಈಗಷ್ಟೇ ಒಂದು ರೌಂಡ್‌ ಸ್ಕ್ರಿಪ್ಟ್ನಲ್ಲಿ ಕುಳಿತಿರುವ ಮಹೇಶ್‌ ಸುಖಧರೆ, ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಮೂಡ್‌ನ‌ಲ್ಲಿದ್ದಾರೆ. ಇನ್ನು, ದುನಿಯಾ ವಿಜಯ್‌ ಕೂಡ “ಕನಕ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರ ಮುಗಿದ ಬಳಿಕ ಪ್ರೀತಂ ಗುಬ್ಬಿ ನಿರ್ದೇಶನದ “ಜಾನಿ
ಜಾನಿ ಯೆಸ್‌ ಪಪ್ಪಾ’ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಎರಡು ಸಿನಿಮಾ ನಂತರವಷ್ಟೇ ಮಹೇಶ್‌ ಸುಖಧರೆ ಅವರ ಚಿತ್ರದಲ್ಲಿ ದುನಿಯಾ ವಿಜಯ್‌ ನಟಿಸುವ ಸಾಧ್ಯತೆ ಇದೆ. ಅಂದಹಾಗೆ, ದುನಿಯಾ ವಿಜಯ್‌ ಚಿತ್ರಕ್ಕೆ ಮಹೇಶ್‌ ಸುಖಧರೆ ನಿರ್ದೇಶನ ಮಾತ್ರವಲ್ಲ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ದಸರಾ ಹಬ್ಬದ ಹೊತ್ತಿಗೆ ಸುಖಧರೆ, ತಮ್ಮ ಹೊಸಚಿತ್ರದ ಸಂಪೂರ್ಣ ಚಿತ್ರಣವನ್ನು ಕೊಡಲಿದ್ದಾರೆ. ಅಲ್ಲಿಯವರೆಗೆ, ಕಥೆಯತ್ತ ತಮ್ಮ ಚಿತ್ತ ಎಂದಷ್ಟೇ
ಹೇಳುತ್ತಾರೆ ಅವರು.

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.