ಈ ಗೋಶಾಲೆ ಆ ದೇವರಿಗೆ ಪ್ರೀತಿ!


Team Udayavani, Aug 17, 2017, 2:14 PM IST

Untitled-1.jpg

ಕೂಡ್ಲಿಗಿ: ತಾಲೂಕಿನಲ್ಲಿ ಈ ಬಾರಿಯೂ ಮುಂಗಾರು ಕೈಕೊಟ್ಟ ಪರಿಣಾಮ ಮೇವಿನ ಕೊರತೆಯಿಂದಾಗಿ ಜಾನುವಾರುಗಳ ಮೂಕ ವೇದನೆ ಹೇಳತೀರದಾಗಿದೆ. ಗೋಶಾಲೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಬರುವ ಜಾನುವಾರುಗಳಿಗೆ ಮೇವು ಒದಗಿಸಲು ಪರದಾಡುವಂತಾಗಿದೆ.

ತಾಲೂಕಿನ ಗಂಡಬೊಮ್ಮನಹಳ್ಳಿ ಗೋಶಾಲೆಗೆ ಬರುವ ಜಾನುವಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವುಗಳಿಗೆ ಮೇವು ಪೂರೈಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಗೋಶಾಲೆಯಲ್ಲಿ ಮೇವಿನ ಕೊರತೆ ಕಂಡು ಬರುತ್ತಿದ್ದು , ಹಸಿ ಮೇವು ಇಲ್ಲದೇ ಜಾನುವಾರುಗಳು ಕಂಗಾಲಾಗಿವೆ. ಹಸಿ ಮೇವು ನೀಡುವ ಮೂಲಕ ಇಲ್ಲಿನ ಗೋಶಾಲೆಯ ಜಾನುವಾರುಗಳು ಚೆನ್ನಾಗಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಈಗ ಅ ಧಿಕಾರಿಗಳ ಮೇಲಿದೆ. ತಾಲೂಕಿನಲ್ಲಿರುವ ಏಕೈಕ ಗೋಶಾಲೆಯಲ್ಲಿ ಈ ಮೊದಲು ಸುಮಾರು 4300 ಜಾನುವಾರಗಳು ಇದ್ದವು. ಆದರೆ, ಕಳೆದೊಂದು ತಿಂಗಳಿಂದ ಇಲ್ಲಿಯವರೆಗೆ ಈಗ 7400 ಜಾನುವಾರುಗಳು ಗೋಶಾಲೆಗೆ ಬಂದಿವೆ. ಜಾನುವಾರುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಪ್ರತಿನಿತ್ಯ 30 ಟನ್‌ ಮೇವು ಪೂರೈಕೆ ಮಾಡಲಾಗುತ್ತದೆ. ಗೋಶಾಲೆಯನ್ನು ತಿಂಗಳ ಕಾಲ ಮುಂದುವರಿಸಿದರೆ 900 ಟನ್‌ ಮೇವು ಅಗತ್ಯವಿದೆ. ಈಗಾಗಿ ಮೇವು ಪೂರೈಕೆ ಮಾಡುವುದು ಹೇಗೇ ಎಂಬುದು ಅಧಿ ಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ತಾಲೂಕಿನ ಅತಿ ದೊಡ್ಡ ಕೆರೆಯಾದ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗಿರುವುದರಿಂದ ಗೋಶಾಲೆಗೆ ಈಗ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಈಗ ಪ್ರಮುಖ ಸಮಸ್ಯೆ ಏನೆಂದರೆ ಗೋವುಗಳನ್ನು ನೋಡಿಕೊಳ್ಳುವವರಿಗೆ ಊಟದ ವ್ಯವಸ್ಥೆ ಕಳೆದೊಂದು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಮತ್ತು ಕರೆಂಟ್‌ ವ್ಯವಸ್ಥೆಯಿಲ್ಲದೆ ಕತ್ತಲಲ್ಲಿ ಕಾಲಕಳೆಯುವ ಪರಿಸ್ಥಿತಿ ರೈತರದ್ದಾಗಿದೆ. 10ಕ್ಕೂ ಹೆಚ್ಚು ಶೆಡ್‌ಗಳನ್ನು ನಿರ್ಮಿಸಿ ನೆರಳಿನ ವ್ಯವಸ್ಥೆ ಮಾಡಿಲಾಗಿದೆಯಾದರೂ ಇನ್ನೂ ಸಾವಿರಾರು ಜಾನುವಾರು ಬಿಸಿಲಿನಲ್ಲಿ ನಿತ್ಯವು ಬಸವಿಳಿಯುತ್ತಿವೆ. ಈ ಸಮಸ್ಯೆಗೆ ಜಾನುವಾರಗಳ ಹೆಚ್ಚಳವೇ ಪ್ರಮುಖ ಕಾರಣವಾಗಿದೆ ಎಂಬುದು ಅಧಿಕಾರಿಗಳ  ಉತ್ತರವಾಗಿದೆ.

ಸಂಗ್ರಹ ಕೊರತೆ: ಗೋಶಾಲೆಯಲ್ಲಿನ ಜಾನುವಾರುಗಳ ಮೇವು ಪೂರೈಕೆ ಮಾಡಲು ಹೊಸಪೇಟೆ, ಹಗರಿ ಮತ್ತು ಸಿರುಗುಪ್ಪದಲ್ಲಿ ಮೇವು ಬ್ಯಾಂಕ್‌ನಲ್ಲಿ ಮೇವು ಸಂಗ್ರಹ ಮಾಡಲಾಗಿತು. ಆದರೆ, ಅಲ್ಲೂ ಸಹ ಮೇವು ಸಾವಿರಾರು ಟನ್‌ ಮೇವು ಇಲ್ಲಿಗೆ ಪೂರೈಕೆ ಮಾಡಿರುವ ಕಾರಣ ಮೇವಿನ ಸಂಗ್ರಹಗದಲ್ಲಿ ಕೊರತೆಯಾಗಿದೆ. ಹೀಗಾಗಿ ಅಗತ್ಯ ಮೇವು ಪೂರೈಕೆ ಮಾಡಲು ಸಮಸ್ಯೆಯಾಗಿದೆ. ಅಲ್ಲದೆ, ಮೇವು ಪೂರೈಕೆ ಮಾಡುವ ಪ್ರಯತ್ನ ಅಧಿಕಾರಿಗಳು ಮುಂದುವರಿಸಿದ್ದಾರೆ. ಮುಂಗಾರು ಮಳೆ ಆರಂಭದಿಂದ ಇಲ್ಲಿಯವರೆಗೆ ಮಳೆಯಾಗದಿರುವುದರಿಂದ ಜಾನುವಾರಗಳಿಗೆ
ಸ್ಥಳೀಯವಾಗಿ ಮೇವು ಸಿಗುತ್ತಿಲ್ಲ. ಹೀಗಾಗಿ ಗೋಶಾಲೆಯನ್ನು ಸರ್ಕಾರ ಮುಂದುವರಿಸಬೇಕು. ಅಲ್ಲದೇ ಇಲ್ಲಿಯವರೆಗೂ ನಾಲ್ಕೈದು ತಿಂಗಳು ಇಲ್ಲಿನ ಗೋಶಾಲೆಯ ಜಾನುವಾರುಗಳು ಒಣಮೇವು ತಿಂದು ಬಡಕಲಾಗಿವೆ. ಈಗ ನದಿ ದಡ ಇರುವ ಪ್ರದೇಶದ ಕಡೆ ಮಳೆಯಾಗಿರುವ ಕಡೆ ಹಸಿ ಮೇವು ಸಿಗುತ್ತದೆ. ಇಲ್ಲಿನ ಜಾನುವಾರುಗಳಿಗೆ ಹಸಿ ಮೇವು ಪೂರೈಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗಂಡಬೊಮ್ಮನಹಳ್ಳಿ ಗ್ರಾಮದ ರೈತ ಪಾಪಯ್ಯ ಆಗ್ರಹಿಸಿದ್ದಾರೆ.

ಗೋಶಾಲೆಯಲ್ಲಿನ ಜಾನುವಾರುಗಳಿಗೆ ಮೇವು ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶೆಡ್‌ ಸಾಲುತ್ತಿಲ್ಲ. ಇನ್ನೂ 5 ಶೆಡ್‌ ನಿರ್ಮಿಸಲು ಸೂಚಿಸಲಾಗಿದೆ. ಮೇಲಾ  ಧಿಕಾರಿಗಳ ಆದೇಶ ಬರುವವರಿಗೂ ಗೋಶಾಲೆ ಮುದುವರಿಸಲಾಗುವುದು. ರೈತರು ಆತಂಕ ಪಡುವ ಅಗತ್ಯವಿಲ್ಲ. 
ಎಲ್‌.ಕೃಷ್ಣಮೂರ್ತಿ ತಹಶೀಲ್ದಾರ್‌, ಕೂಡ್ಲಿಗಿ.

ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಸಮಾರ್ಪಕ ಮೇವು, ನೀರು ಪೂರೈಸಲಾಗಿದೆ. ಪ್ರಸುತ್ತ ನಿತ್ಯ 30 ಟನ್‌ ಮೇವು ವಿತರಿಸುತ್ತಿದ್ದು, ಸೊಪ್ಪೆ ಮತ್ತು ಭತ್ತದ ಮೇವು ಸಂಗ್ರಹವಿದೆ. ಜಾನುವಾರುಗಳ ನಿತ್ಯ ಆರೋಗ್ಯ ತಪಾಸಣೆ
ಮಾಡಲಾಗುತ್ತಿದ್ದು, ಪಶುವೈದ್ಯ ಕೇಂದ್ರ ತೆರೆಯಲಾಗಿದೆ. ಅಗತ್ಯ ಮೇವು ಮೇವಿನ ಬ್ಯಾಂಕಿನಿಂದ ಬರುತ್ತದೆ. ಸ್ವತ್ಛತೆಗೆ ಒತ್ತು ನೀಡಲಾಗಿದೆ. 
ಯಜಮಾನಪ್ಪ, ಕಂದಾಯ ನಿರೀಕ್ಷಕ, ಗೋಶಾಲೆ ಉಸ್ತುವಾರಿ ಅಧಿಕಾರಿ

ಕೆ.ನಾಗರಾಜ 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.