ರಚಿತಾ ರಾಮ್ ಹೊಸ ಪದ್ಮಾವತಿ
Team Udayavani, Oct 16, 2017, 8:49 PM IST
ಈ ಹಿಂದೆ “ಜಾನಿ ಮೇರಾ ನಾಮ್’ ಚಿತ್ರದಲ್ಲಿ “ದುನಿಯಾ’ ವಿಜಯ್ ಎದುರು ರಮ್ಯಾ, ಪದ್ಮಾವತಿಯಾಗಿ ಹೆಜ್ಜೆ ಹಾಕಿದ್ದರು. ಇದೀಗ “ಜಾನಿ ಜಾನಿ ಎಸ್ ಪಾಪ್ಪ’ ಚಿತ್ರಕ್ಕೆ ವಿಜಯ್ ಎದುರು ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದು, “ಹೊಸ ಪದ್ಮಾವತಿ …’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಹೌದು, “ಜಾನಿ ಜಾನಿ ಎಸ್ ಪಾಪ್ಪಾ’ ಚಿತ್ರದ ಚಿತ್ರೀಕರಣ ಸೋಮವಾಗ ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ. “ದುನಿಯಾ’ ವಿಜಯ್ ಮತ್ತು ರಚಿತಾ ರಾಮ್ ಅಭಿನಯದಲ್ಲಿ “ಹೊಸ ಪದ್ಮಾವತಿ …’ ಎಂಬ ಹಾಡೊಂದನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಮುರಳಿ ನೃತ್ಯ ನಿರ್ದೇಶನದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಹಾಡಿನಲ್ಲಿ “ದುನಿಯಾ’ ವಿಜಯ್ ಸಿಕ್ಸ್ ಪ್ಯಾಕ್ ಪ್ರದರ್ಶಿಸಲಿದ್ದಾರೆ. ಈ ಹಿಂದೆ “ಶಂಕರ್ ಐಪಿಎಸ್’ ಚಿತ್ರದಲ್ಲಿ ವಿಜಯ್ ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದರು. ಅದಾಗಿ ಕೆಲವು ವರ್ಷಗಳ ನಂತರ ಮತ್ತೂಮ್ಮೆ ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಒಂದು ಹಾಡು ಮತ್ತು ಫೈಟ್ನಲ್ಲಿ ವಿಜಯ್ ಸಿಕ್ಸ್ ಪ್ಯಾಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಜಾನಿ ಜಾನಿ ಎಸ್ ಪಾಪ್ಪ’ ಚಿತ್ರಕ್ಕಾಗಿ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ರೈನ್ಬೋ ಕಾಲೋನಿ ಎಂಬ ಕಾಲೋನಿಯ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ವಿಜಯ್ ಮತ್ತು ರಚಿತಾ ಜೊತೆಗೆ ರಂಗಾಯಣ ರಘು, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಪ್ರೀತಂ ಗುಬ್ಬಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದರೆ, “ದುನಿಯಾ’ ವಿಜಯ್ ಈ ಚಿತ್ರವನ್ನು ತಮ್ಮ ದುನಿಯಾ ಟಾಕೀಸ್ ಪ್ರೊಡಕ್ಷನ್ಸ್ನಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು “ಹೆಬ್ಬುಲಿ’ ಕರುಣಾಕರ್ ಅವರ ಛಾಯಾಗ್ರಹಣವಿದೆ.
ಇದೊಂದು ಮಜಾ ಚಿತ್ರವಾಗಲಿದೆ ಎನ್ನುವ ಪ್ರೀತಂ ಗುಬ್ಬಿ, ಚಿತ್ರಕ್ಕೆ “ದಿ ಫನ್ ಸ್ಟಾಟ್ಸ’ ಎಂಬ ಅಡಿಬರಹ ಇಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ