“ಪ್ರೇಮಂ’ ಚಿತ್ರದ ಹಿಂದೆ ಬಂದ ಹೊಸಬರು
Team Udayavani, Nov 13, 2017, 7:00 PM IST
ದಿನ ಕಳೆದಂತೆ ಕನ್ನಡಕ್ಕೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಪ್ರೇಮಂ’ ಚಿತ್ರತಂಡವೂ ಒಂದು. ಈ ಚಿತ್ರದ ಮೂಲಕ ಹರೀಶ್ ಮಾಂಡವ್ಯ ನಿರ್ದೇಶಕರಾದರೆ, ಧನುಗೌಡ ಮತ್ತು ಮೋಕ್ಷ ನಾಯಕ, ನಾಯಕಿಯಾಗುತ್ತಿದ್ದಾರೆ. ಇನ್ನು, ರತ್ನಭುವನೇಶ್ ಚಿತ್ರದ ನಿರ್ಮಾಪಕರು. ಇದು ಇವರ ಮೊದಲ ನಿರ್ಮಾಣದ ಸಿನಿಮಾ. ನವೆಂಬರ್ 20 ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಪ್ರೇಮಕಥೆ ಹೊಂದಿರುವ ಸಿನಿಮಾ. ಬೆಂಗಳೂರು, ಸಾತನೂರು, ಕನಕಪುರ, ಮೈಸೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ಹರೀಶ್ ಮಾಂಡವ್ಯ ಅವರಿಗೆ ಇದು ಮೊದಲ ಚಿತ್ರವಾದರೂ, ಅನುಭವ ಪಡೆದೇ ಆ್ಯಕ್ಷನ್-ಕಟ್ ಹೇಳ್ಳೋಕೆ ಬಂದಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ಪದ್ಮಾವತಿ’, “ಗಾಂಧಾರಿ’ ಧಾರಾವಾಹಿಗಳ ನಿರ್ದೇಶಕ ಅಶೋಕ್ ಕಶ್ಯಪ್ ಬಳಿ ಕೆಲಸ ಮಾಡಿದ್ದ ಹರೀಶ್ ಮಾಂಡವ್ಯ ಅವರೇ ಚಿತ್ರಕಥೆ ಬರೆದಿದ್ದಾರೆ. ಇನ್ನು, ನಾಯಕ ಧನುಗೌಡ ಈ ಹಿಂದೆ “ಹೊಂಬಣ್ಣ’ ಚಿತ್ರದಲ್ಲಿ ನಟಿಸಿದ್ದರು. ಇನ್ನು, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಾಯಕಿ ಮೋಕ್ಷ ದಯಾನಂದ ಸಾಗರ್ ಕಾಲೇಜ್ನಲ್ಲಿ ಬಿಬಿಎ ಓದುತ್ತಿದ್ದಾರೆ.
ಚಿತ್ರದಲ್ಲಿ ತಾರಾ, ಪದ್ಮಜಾರಾವ್, ಮೈಸೂರು ಗೋಪಿ, ಜ್ಯೋತಿರಾಯ್, ಹನುಮತೇಗೌಡ, ಮಯೂರಿ ನಟರಾಜ್, ಮಂಜು ಪಾಟೀಲ್ ಇತರರು ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ. ಪುಷ್ಪರಾಜ್ ಛಾಯಾಗ್ರಹಣವಿದೆ. ಸತೀಶ್ ಚಂದ್ರ ಸಂಕಲನ ಮಾಡಿದ್ದಾರೆ. ಅನೀಶ್ ಕಥೆ ಬರೆದಿದ್ದಾರೆ. ಯೋಗರಾಜ್ಭಟ್, ಜಯಂತ್ ಕಾಯ್ಕಿಣಿ ಗೀತೆ ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…