30 ಸೆಕೆಂಡ್ನಲ್ಲೇ ಚಂದನ್ ಶೆಟ್ಟಿ ಹಾಡು ವೈರಲ್!
Team Udayavani, Nov 15, 2017, 10:27 AM IST
ಒಂದು ಸಿನಿಮಾ ಮೊದಲು ಕುತೂಹಲ ಕೆರಳಿಸೋದೇ ಶೀರ್ಷಿಕೆಯಿಂದ. ಈಗಾಗಲೇ ಅಂತಹ ವಿಭಿನ್ನ ಶೀರ್ಷಿಕೆವುಳ್ಳ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “3 ಗಂಟೆ 30 ದಿನ 30 ಸೆಕೆಂಡ್’ ಚಿತ್ರವೂ ಸೇರಿದೆ. ಈಗಾಗಲೇ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ ಪಡೆದಿವೆ. ರಾಕ್ ಗಾಯಕ ಚಂದನ್ಶೆಟ್ಟಿ ಹಾಡಿರುವ ಹಾಡು ಕೂಡ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಎಂಬುದು ವಿಶೇಷ.
ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣದ ಈ ಚಿತ್ರವನ್ನು ಮಧುಸೂಧನ್ ನಿರ್ದೇಶಿಸಿದ್ದಾರೆ. ಆರಂಭದಿಂದಲೂ ಒಂದಷ್ಟು ಗಮನಸೆಳೆದಿರುವ ಈ ಚಿತ್ರ ಈಗ ಬಿಡುಗಡೆಗೆ ತಯಾರಾಗಿದೆ. ಕನ್ನಡ ಮಟ್ಟಿಗೆ ಬೇರೆ ರೀತಿಯ ಪ್ರಯತ್ನ ಮತ್ತು ಪ್ರಯೋಗ ಮಾಡಿರುವ ನಿರ್ದೇಶಕರು, ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಹಾಡನ್ನೂ ಬರೆದಿದ್ದಾರೆ. ಅವರ ಗೆಳೆಯರು ಬ್ರೈನ್ ಶೇರ್ ಕ್ರಿಯೇಷನ್ ಪ್ರ„ವೇಟ್ ಲಿಮಿಟೆಡ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೆ, ಯು/ಎ ಅರ್ಹತಾ ಪತ್ರ ನೀಡಿದೆ. ಇದು ಈಗಿನ ಕಾಲಮಾನದ ಕಥೆ. ಇಲ್ಲಿ ಯುವಕರಿಗೆ ಸಾಕಷ್ಟು ಸಂದೇಶವಿದೆ. ಅಷ್ಟೇ ಅಲ್ಲ, ಒಂದು ಮನರಂಜನಾತ್ಮಕ ಚಿತ್ರವೂ ಹೌದು. ಕಲಾತ್ಮಕ ಅಂಶಗಳನ್ನು ಇಟ್ಟುಕೊಂಡೇ ನಿರ್ದೇಶಕ ಮಧುಸೂಧನ್ ಮಾಸ್ ಅಂಶಗಳನ್ನು ಸೇರಿಸಿದ್ದಾರೆ.
ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುವ ಈ ಚಿತ್ರದಲ್ಲಿ ಪ್ರೀತಿ, ಸೆಂಟಿಮೆಂಟ್ ಹಾಗು ಭಾವನಾತ್ಮಕ ಅಂಶಗಳಿವೆ. ಚಿತ್ರಕ್ಕೆ ಅರು ಗೌಡ ನಾಯಕ. ಅವರಿಗೆ ಕಾವ್ಯಾಶೆಟ್ಟಿ ನಾಯಕಿ. ಉಳಿದಂತೆ ದೇವರಾಜ್, ಸುಧಾರಾಣಿ ಇತರರು ಇದ್ದಾರೆ. ಶ್ರೀಧರ್ ವಿ.ಸಂಭ್ರಮ್ ಸಂಗೀತವಿದೆ. ಮಧುಸೂದನ್, ಜಯಂತ್ ಕಾಯ್ಕಿಣಿ ಗೀತೆ ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್