ಇಂಗ್ಲಿಷ್ಗೆ ಮನಸೋತು ಹುಟ್ಟಿದ ಪ್ರೀತಿ!
Team Udayavani, Nov 18, 2017, 4:35 AM IST
ಕುರುಡರಿಗೆ ಶಬ್ದಗಳೇ ದೃಷ್ಟಿಯಿದ್ದಂತೆ. ಶಬ್ದಗಳು ಅವರಿಗೆ ದಾರಿ ತೋರಬಹುದು. ಆದರೆ, ಪ್ರೀತಿ ಹುಟ್ಟಿಸುತ್ತವಾ?
ಹೌದು ಎನ್ನುತ್ತಿದೆ ಇಲ್ಲೊಂದು ಪ್ರಕರಣ. ರಾಜಸ್ಥಾನದ ಪೂರಣ್ ಸಿಂಗ್ (24) ಎಂಬಾತನಿಗೆ ಮನಸೋತ ಬಿಹಾರದ
ಪುಷ್ಪಾಂಜಲಿ (21) ಆತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಪೂರಣ್ ಬ್ಯಾಂಕ್ ಉದ್ಯೋಗಿ. ಪುಷ್ಪಾಂಜಲಿ ದೆಹಲಿಯಲ್ಲಿ ಬಿಎ ಓದುತ್ತಿದ್ದಾಳೆ. ಈಕೆಯ ಪ್ರೀತಿಗೆ ಕಾರಣ ಪೂರಣ್ನ
ಇಂಗ್ಲೀಷ್ ವಾಗ್ಝರಿ ಯಂತೆ! ಪೂರಣ್ ಇಂಗ್ಲೀಷ್ನಲ್ಲಿ ನಿರರ್ಗಳವಾಗಿ ಮಾತಾಡುತ್ತಾರೆ. ಗೆಳತಿಯ ಮದುವೆಯಲ್ಲಿ
ಪೂರಣ್ ಅವರ ಇಂಗ್ಲೀಷ್ ಕೇಳಿ ದಂಗಾದ ಪುಷ್ಪಾಂಜಲಿ, ಆತನಿಗೆ ಮನಸೋತು ಇದೀಗ ಮದುವೆ ಆಗಿದ್ದಾಳೆ.