ನ.24ರಂದು ಅಂಜನಿ ಪುತ್ರ ಆಡಿಯೋ ಬಿಡುಗಡೆ
Team Udayavani, Nov 23, 2017, 11:03 AM IST
ರಾಜ್ಕುಮಾರ ಚಿತ್ರದ ನಂತರ ಪುನೀತ್ ರಾಜಕುಮಾರ್ ಅವರ ಯಾವುದೇ ಚಿತ್ರ ತೆರೆಕಂಡಿರಲಿಲ್ಲ. ಈಗ ಎಲ್ಲರೂ “ಅಂಜನೀಪುತ್ರ’ ಚಿತ್ರವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಇದೇ 24 ರಂದು ಬಿಡುಗಡೆಯಾಗುತ್ತಿದೆ. ಇನ್ನೊಂದು ವಿಶೇಷವೆಂದರೆ,
ಇದೇ ಮೊದಲ ಬಾರಿಗೆ ಪಿಆರ್ಕೆ ಆಡಿಯೋ ಸಂಸ್ಥೆ ಮೂಲಕವೇ “ಅಂಜನಿ ಪುತ್ರ’ ಚಿತ್ರದ ಹಾಡುಗಳು ಹೊರಬರುತ್ತಿವೆ. ಈ ಚಿತ್ರವನ್ನು ಹರ್ಷ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಹೊರಬರುತ್ತಿದ್ದಂತೆಯೇ ಚಿತ್ರವೂ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. “ಅಂಜನಿಪುತ್ರ’ ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾ. ಇಡೀ ಸಿನಿಮಾ ತಾಯಿ-ಮಗನ ಸೆಂಟಿಮೆಂಟ್ ಸುತ್ತ ಸುತ್ತಲಿದೆ.
ಅಂದಹಾಗೆ, ಇದು ತಮಿಳಿನ “ಪೂಜೈ’ ಚಿತ್ರದ ರೀಮೇಕ್. ಈಗ ಅದರ ಒನ್ಲೈನ್ ಇಟ್ಟುಕೊಂಡು ಹರ್ಷ, ಅದನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಿಸಿ, “ಅಂಜನಿಪುತ್ರ’ ಮಾಡಿದ್ದಾರೆ. ಈ ಚಿತ್ರವನ್ನು ಎಂ.ಎನ್. ಕುಮಾರ್ ನಿರ್ಮಿಸಿದ್ದಾರೆ. ಚಿತ್ರದ ಮತ್ತೂಂದು ಹೈಲೈಟ್ ಎಂದರೆ ಚಿತ್ರದಲ್ಲಿ ಅನುಭವಿ ನಟರಿರೋದು. ಪುನೀತ್ರಾಜಕುಮಾರ್ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಮ್ಯಾಕೃಷ್ಣ, ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ದೊಡ್ಡ ಗ್ಯಾಪ್ನ ನಂತರ ರಮ್ಯಾ ಕೃಷ್ಣ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ