ಇನ್ನಿಂಗ್ಸ್‌ ಜಯಭೇರಿ; ಕರ್ನಾಟಕ ಸೆಮಿ ಸವಾರಿ


Team Udayavani, Dec 11, 2017, 6:10 AM IST

PTI12_10_2017_000069B.jpg

ನಾಗ್ಪುರ: ರಣಜಿ ಇತಿಹಾಸದ ಬಲಿಷ್ಠ ತಂಡವೆಂದೇ ಗುರುತಿಸಲ್ಪಡುವ ಮುಂಬಯಿಯನ್ನು ಇನ್ನಿಂಗ್ಸ್‌ ಹಾಗೂ 20 ರನ್ನುಗಳ ಸೋಲಿಗೆ ಗುರಿಪಡಿಸಿದ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ. 2017-18ರ ಋತುವಿನಲ್ಲಿ ಉಪಾಂತ್ಯ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

397 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಮುಂಬಯಿ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 120 ರನ್‌ ಮಾಡಿತ್ತು. ಆಗಲೇ ಆದಿತ್ಯ ತಾರೆ ಬಳಗದ ಮೇಲೆ ಇನ್ನಿಂಗ್ಸ್‌ ಸೋಲಿನ ಕಾರ್ಮೋಡ ಆವರಿಸಿತ್ತು. ರವಿವಾರ ಬ್ಯಾಟಿಂಗ್‌ ಮುಂದುವರಿಸಿದ ಮುಂಬಯಿ 377 ರನ್ನುಗಳಿಗೆ ಸರ್ವಪತನ ಕಂಡಿತು. ಇನ್ನೊಂದು ದಿನದ ಆಟ ಬಾಕಿ ಉಳಿದಿರುವಾಗಲೇ ವಿನಯ್‌ ಪಡೆ ಈ ಪರಾಕ್ರಮ ಮೆರೆಯಿತು. ಇದು ರಣಜಿ ಇತಿಹಾಸದಲ್ಲಿ ಮುಂಬಯಿ ಅನುಭವಿಸಿದ ಕೇವಲ 5ನೇ ಇನ್ನಿಂಗ್ಸ್‌ ಸೋಲಾಗಿದೆ.

ಬೌಲಿಂಗ್‌ ಹೀರೋ ಗೌತಮ್‌
ಸೂರ್ಯಕುಮಾರ್‌ ಯಾದವ್‌ ಅವರ ಶತಕ, ನೈಟ್‌ ವಾಚ್‌ಮನ್‌ ಆಕಾಶ್‌ ಪಾರ್ಕರ್‌ ಮತ್ತು ಮೊದಲ ಪಂದ್ಯವಾಡಿದ ಶಿವಂ ದುಬೆ ಅವರ ಅರ್ಧ ಶತಕಗಳು ಮುಂಬಯಿಯ ಹೋರಾಟವನ್ನೇನೋ ಜಾರಿಯಲ್ಲಿರಿಸಿದರು. ಆದರೆ ಕರ್ನಾಟಕವನ್ನು ಮತ್ತೆ ಬ್ಯಾಟಿಂಗಿಗೆ ಇಳಿಸುವಲ್ಲಿ ಈ ಪ್ರಯತ್ನ ಸಾಲಲಿಲ್ಲ. ಆಫ್ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ 6 ವಿಕೆಟ್‌ ಹಾರಿಸಿ ಮುಂಬಯಿಗೆ ಕಂಟಕವಾಗಿ ಪರಿಣಮಿಸಿದರು. ಗೌತಮ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಹಾರಿಸಿದ್ದು ಇದು 5ನೇ ಸಲ.

ಹ್ಯಾಟ್ರಿಕ್‌ ಪರಾಕ್ರಮದೊಂದಿಗೆ ಮುಂಬಯಿಯ ಕುಸಿತಕ್ಕೆ ಮುಹೂರ್ತವಿರಿಸಿದ ಕರ್ನಾಟಕದ ನಾಯಕ ಆರ್‌. ವಿನಯ್‌ ಕುಮಾರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರ ಒಟ್ಟು ಸಾಧನೆ 78ಕ್ಕೆ 8 ವಿಕೆಟ್‌ ಹಾಗೂ 37 ರನ್‌. ಇದರೊಂದಿಗೆ “ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್‌ ಪಾಲಿಗೆ 100ನೇ ಪ್ರಥಮ ದರ್ಜೆ ಪಂದ್ಯ ಸ್ಮರಣೀಯವೆನಿಸಿತು.

ಸೂರ್ಯಕುಮಾರ್‌ ಶತಕದಾಟ
ಸೂರ್ಯಕುಮಾರ್‌ ಯಾದವ್‌ 55 ರನ್‌ ಹಾಗೂ ಆಕಾಶ್‌ ಪಾರ್ಕರ್‌ 3 ರನ್ನಿನಿಂದ ಬ್ಯಾಟಿಂಗ್‌ ಮುಂದುವರಿಸಿದರು. ರವಿವಾರದ ಮುಂಜಾನೆಯ ಅವಧಿಯಲ್ಲಿ ಇವರಿಬ್ಬರೂ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್‌ ಮೂಲಕ ಮುಂಬಯಿಯ ರಕ್ಷಣೆಗೆ ನಿಂತರು. ಸ್ಕೋರ್‌ ಇನ್ನೂರರ ಗಡಿ ದಾಟಿ ಬೆಳೆಯತೊಡಗಿತು. ಅಷ್ಟರಲ್ಲಿ ಯಾದವ್‌ ಶತಕವನ್ನೂ ಪೂರ್ತಿಗೊಳಿಸಿದರು. ಕರ್ನಾಟಕದ ಬೌಲರ್‌ಗಳು “ಬ್ರೇಕ್‌ ತೂÅ’ಗಾಗಿ ಹರಸಾಹಸಪಟ್ಟರೂ ಯಶಸ್ಸು ಸಿಗಲಿಲ್ಲ. ಈ ಜೋಡಿ ಬೇರ್ಪಡಲು ಯಾದವ್‌ ರನೌಟಾಗಬೇಕಾಯಿತು. 180 ಎಸೆತ ಎದುರಿಸಿದ ಯಾದವ್‌ 16 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 108 ರನ್‌ ಬಾರಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ 12ನೇ ಶತಕವಾದರೆ, ಪ್ರಸಕ್ತ ರಣಜಿ ಋತುವಿನಲ್ಲಿ ಮೊದಲನೆಯದು. ಕರ್ನಾಟಕಕ್ಕೆ ಮೊದಲ ಅವಧಿಯಲ್ಲಿ ಲಭಿಸಿದ್ದು ಇದೊಂದೇ ಯಶಸ್ಸು.

ಯಾದವ್‌ ಜತೆ 4ನೇ ವಿಕೆಟಿಗೆ 98 ರನ್‌ ಪೇರಿಸಲು ನೆರವಾದ ಆಕಾಶ್‌ ಪಾರ್ಕರ್‌ 186 ಎಸೆತಗಳನ್ನು ನಿಭಾಯಿಸಿ 65 ರನ್‌ ಹೊಡೆದರು. ಇದರಲ್ಲಿ 11 ಬೌಂಡರಿ ಸೇರಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ ಪಾರ್ಕರ್‌ ಮೊದಲ ಎಸೆತದಲ್ಲೇ ಔಟಾಗಿ ವಿನಯ್‌ಗೆ ಹ್ಯಾಟ್ರಿಕ್‌ ವಿಕೆಟ್‌ ಒಪ್ಪಿಸಿದ್ದರು. ಪಾರ್ಕರ್‌ 7ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ನಡುವೆ ಸಿದ್ದೇಶ್‌ ಲಾಡ್‌ (31) ಮತ್ತು ನಾಯಕ ಆದಿತ್ಯ ತಾರೆ (0) ಅವರಿಗೆ ವಿನಯ್‌ ಕುಮಾರ್‌ ಬಲೆ ಬೀಸಿದರು. ನಾಯಕ ತಾರೆ ಖಾತೆ ತೆರೆಯದೆ ನಿರ್ಗಮಿಸಿದ್ದು ಮುಂಬಯಿಗೆ ಬಿದ್ದ ಭಾರೀ ಹೊಡೆತವೆನಿಸಿತು.

ಮೊದಲ ರಣಜಿ ಪಂದ್ಯವಾಡುತ್ತಿರುವ ಶಿವಂ ದುಬೆ ಕೊನೆಯ ಹಂತದಲ್ಲಿ ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿ 71 ರನ್‌ ಹೊಡೆದರು. ಈ ಆಕ್ರಮಣಕಾರಿ ಬ್ಯಾಟಿಂಗ್‌ ವೇಳೆ 7 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಯಲ್ಪಟ್ಟಿತು. ಮೊದಲ ಸರದಿಯಲ್ಲಿ 75 ರನ್‌ ಮಾಡಿದ್ದ ಧವಳ್‌ ಕುಲಕರ್ಣಿ, ಈ ಬಾರಿ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಆದರೆ 15 ರನ್ನಿಗೆ ಇವರ ಆಟ ಮುಗಿಯಿತು. ಅಂತಿಮವಾಗಿ ದುಬೆ ವಿಕೆಟ್‌ ಕೀಳುವ ಮೂಲಕ ಕೆ. ಗೌತಮ್‌ ಕರ್ನಾಟಕದ ಗೆಲುವನ್ನು ಸಾರಿದರು.

ಸ್ಕೋರ್‌ಪಟ್ಟಿ
* ಮುಂಬಯಿ ಪ್ರಥಮ ಇನ್ನಿಂಗ್ಸ್‌    173
* ಕರ್ನಾಟಕ ಪ್ರಥಮ ಇನ್ನಿಂಗ್ಸ್‌        570
* ಮುಂಬಯಿ ದ್ವಿತೀಯ ಇನ್ನಿಂಗ್ಸ್‌
ಪೃಥ್ವಿ ಶಾ    ಬಿ ಅರವಿಂದ್‌    14
ಜಾಯ್‌ ಬಿಸ್ತಾ    ಬಿ ಕೆ.ಗೌತಮ್‌    20
ಅಖೀಲ್‌ ಹೆರ್ವಾಡ್ಕರ್‌    ಸಿ ಅಬ್ಟಾಸ್‌ ಬಿ ಕೆ.ಗೌತಮ್‌    26
ಸೂರ್ಯಕುಮಾರ್‌ ಯಾದವ್‌    ರನೌಟ್‌    108
ಆಕಾಶ್‌ ಪಾರ್ಕರ್‌    ಸಿ ನಾಯರ್‌ ಬಿ ಕೆ.ಗೌತಮ್‌    65
ಸಿದ್ದೇಶ್‌ ಲಾಡ್‌    ಸಿ ಗೌತಮ್‌ ಬಿ ವಿನಯ್‌    31
ಆದಿತ್ಯ ತಾರೆ    ಸಿ ಗೌತಮ್‌ ಬಿ ವಿನಯ್‌    0
ಶಿವಂ ದುಬೆ    ಸಿ ಸಮರ್ಥ್ ಬಿ ಕೆ.ಗೌತಮ್‌    71
ಧವಳ್‌ ಕುಲಕರ್ಣಿ    ಬಿ ಕೆ.ಗೌತಮ್‌    15
ಕೃಶ್‌ ಕೊಠಾರಿ    ಬಿ ಕೆ.ಗೌತಮ್‌    0
ಶಿವಂ ಮಲ್ಹೋತ್ರಾ    ಔಟಾಗದೆ    0
ಇತರ        27
ಒಟ್ಟು  (ಆಲೌಟ್‌)        377        
ವಿಕೆಟ್‌ ಪತನ: 1-30, 2-34, 3-114, 4-212, 5-264, 6-276, 7-295, 8-315, 9-333.
ಬೌಲಿಂಗ್‌:
ವಿನಯ್‌ ಕುಮಾರ್‌        19-6-44-2
ಅಭಿಮನ್ಯು ಮಿಥುನ್‌        22-6-81-0
ಕೃಷ್ಣಪ್ಪ ಗೌತಮ್‌        35.5-8-104-6
ಶ್ರೀನಾಥ್‌ ಅರವಿಂದ್‌        18-8-40-1
ಶ್ರೇಯಸ್‌ ಗೋಪಾಲ್‌        16-1-74-0
ಪವನ್‌ ದೇಶಪಾಂಡೆ        4-1-10-0

ಪಂದ್ಯಶ್ರೇಷ್ಠ: ವಿನಯ್‌ ಕುಮಾರ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.