ಅಮಿತಾಭ್ಗೆ 8 ಕೋಟಿ ಫಾಲೋವರ್ಗಳು
Team Udayavani, Dec 12, 2017, 7:30 AM IST
ಮುಂಬಯಿ: ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ರ ಒಟ್ಟು ಫಾಲೋವರ್ಗಳ ಸಂಖ್ಯೆ 8 ಕೋಟಿ ದಾಟಿದೆ. ಈ ವಿಷಯವನ್ನು ಸ್ವತಃ ಅಮಿತಾಭ್ ಅವರೇ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. “ನನ್ನ ವಿಸ್ತರಿಕ ಕುಟುಂಬದ ಎಲ್ಲರೂ ಕೇಳಿ. ಒಂದು ಕ್ಷಣ ಉಸಿರು ಬಿಗಿ ಹಿಡಿಯಿರಿ. ಹಲವಾರು ಸಾಮಾಜಿಕ ಜಾಲತಾಣಗಳ ಲ್ಲಿಯ ನನ್ನ ಫಾಲೋವರ್ಗಳ ಸಂಖ್ಯೆ ಈಗ 8 ಕೋಟಿ ತಲುಪಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯ ವಾದ ಗಳು’ ಎಂದು ಅವರು ಬರೆದಿದ್ದಾರೆ. ಬಚ್ಚನ್ ಸದ್ಯ ಟ್ವಿಟರ್ನಲ್ಲಿ 3.17 ಕೋಟಿ, ಫೇಸ್ಬುಕ್ನಲ್ಲಿ 2.76 ಕೋಟಿ ಮತ್ತು ಇನ್ಸ್ಟಾrಗ್ರಾಂನಲ್ಲಿ 62 ಲಕ್ಷ ಫಾಲೊವರ್ಗಳನ್ನು ಹೊಂದಿದ್ದಾರೆ.