ಟಿಒಪಿ ಮುಖ್ಯಸ್ಥ ಸ್ಥಾನಕ್ಕೆ ಬಿಂದ್ರಾ ರಾಜೀನಾಮೆ
Team Udayavani, Dec 24, 2017, 6:20 AM IST
ಹೊಸದಿಲ್ಲಿ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಖ್ಯಾತ ಶೋಟರ್ ಅಭಿನವ್ ಬಿಂದ್ರಾ ಕೇಂದ್ರ ಕ್ರೀಡಾ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆ ಟಿಒಪಿ (ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ) ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವಹಿತಾಸಕ್ತಿ ವಿವಾದಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬಿಂದ್ರಾ ಶನಿವಾರ ಟ್ವಿಟರ್ನಲ್ಲಿ ತಮ್ಮ ರಾಜೀನಾಮೆ ವಿಷಯವನ್ನು ಪ್ರಕಟಿಸಿದರು. ಸದ್ಯ ಅಭಿನವ್ ಬಿಂದ್ರಾ ತಮ್ಮದೇ ಕೆಲವು ಖಾಸಗಿ ಯೋಜನೆಗಳು ಹಾಗೂ ಅಭಿನವ್ ಬಿಂದ್ರಾ ಟಾರ್ಗೆಟ್ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವತ್ತ ಗಮನ ಹರಿಸಿದ್ದಾರೆ. ಹೀಗಾಗಿ ತಾನು ಸರಕಾರಿ ಹುದ್ದೆಯನ್ನು ಬಿಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಟಿಒಪಿ ಅಡಿಯಲ್ಲಿ ಸರಕಾರ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಕಾಮನ್ವೆಲ್ತ್, ಏಶ್ಯಾಡ್, ಒಲಿಂಪಿಕ್ಸ್ ಕೂಟಗಳಿಗೆ ಸಿದ್ಧ ಮಾಡುತ್ತದೆ. ಇದಕ್ಕಾಗಿ ಕೇಂದ್ರ ಸರಕಾರ ಕೋಟ್ಯಂತರ ರೂ. ಹಣವನ್ನು ವಿನಿಯೋಗಿಸಿದೆ ಎನ್ನುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್ ಗೆಲುವು: 4-0 ಮುನ್ನಡೆ
Pakistan ಟಿ20 ವಿಶ್ವಕಪ್ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್ ಬಹುಮಾನ
Table Tennis Star; ಬಾಳ್ವೆಯ ದೊಡ್ಡ ಗೆಲುವು ದಾಖಲಿಸಿದ ಮನಿಕಾ ಬಾತ್ರ
IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?