ಟೆಸ್ಟ್ಗಾಗಿ ಐಪಿಎಲ್ ತೊರೆದ ಮಿಚೆಲ್ ಮಾರ್ಷ್
Team Udayavani, Jan 2, 2018, 6:30 AM IST
ಮೆಲ್ಬರ್ನ್: ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ಮುಂಬರುವ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಕೌಂಟಿ ಕ್ರಿಕೆಟ್ನತ್ತ ಗಮನ ಹರಿಸುವ ಆಲೋಚನೆ ನಡೆಸಿದ್ದಾರೆ. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಮಿಚೆಲ್ ಮಾರ್ಷ್ 4.8 ಕೋಟಿ ರೂ. ಮೊತ್ತಕ್ಕೆ ರೈಸಿಂಗ್ ಪುಣೆ ಪಾಲಾಗಿದ್ದರು. ಆದರೆ ಈ ಬಾರಿ ಅವರು ಇಂಗ್ಲೆಂಡಿನ ಸಸೆಕ್ಸ್ ಕೌಂಟಿಯನ್ನು ಪ್ರತಿನಿಧಿಸುವ ಮೂಲಕ ಟೆಸ್ಟ್ ಅಭ್ಯಾಸಕ್ಕೆ ಅಣಿಯಾಗಲು ಯೋಜಿಸಿದ್ದಾರೆ.