UAEಯಲ್ಲಿ ವ್ಯಾಟ್ ಜಾರಿ
Team Udayavani, Jan 2, 2018, 11:00 AM IST
ರಿಯಾದ್: ಸೌದಿ ಅರೇಬಿಯಾ ಯುಎಇ ಪ್ರವಾಸಕ್ಕೆ ಹೋಗುವ ಇರಾದೆ ಉಂಟಾ? ಹಾಗಿದ್ದರೆ ನೀವು ಹೊಂದಿಸಿಕೊಂಡ ಹಣಕ್ಕಿಂತ ಕೊಂಚ ಹೆಚ್ಚು ಮೊತ್ತವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಸೋಮವಾರದಿಂದ ಜಾರಿಯಾಗುವಂತೆ ಇದೆ ಮೊದ ಲ ಬಾರಿಗೆ ಅಲ್ಲಿ ಎಲ್ಲಾ ರೀತಿಯ ಸೇವೆಗಳು ಮತ್ತು ವಸ್ತುಗಳ ಖರೀದಿಯ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಜಾರಿ ಮಾಡಲಾಗಿದೆ.
ಹೀಗಾಗಿ ಶೇ.5ರಷ್ಟು ತೆರಿಗೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಆಹಾರ, ಬಟ್ಟೆ, ಇಲೆಕ್ಟ್ರಾನಿಕ್ ವಸ್ತುಗಳು, ಫೋನ್, ನೀರು ಮತ್ತು ವಿದ್ಯುತ್ ಬಿಲ್, ಹೋಟೆಲ್ ರಿಸರ್ವೇಷನ್‌ಗಳ ಮೇಲೆ ಪ್ರವಾಸಿಗರು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಪ್ರಥಮ ವರ್ಷದಲ್ಲಿ ಹೊಸ ತೆರಿಗೆಯಿಂದ 21 ಸಾವಿರ ಕೋಟಿ ರೂ. (12 ಬಿಲಿಯನ್ ದಿರ್‌ಹಮ್) ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ತಂಬಾಕು ಉತ್ಪನ್ನಗಳು ಮತ್ತು ತಂಪು ಪಾನೀಯಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಯುಎಇಯಲ್ಲಿ ರಸ್ತೆ ಬಳಕೆಗೆ ಇರುವ ಟೋಲ್ ಪರಿಷ್ಕರಿಸಲಾಗಿದೆ ಮತ್ತು ಪ್ರವಾಸೋದ್ಯಮ ತೆರಿಗೆ ವಿಧಿಸಲಾಗಿದೆ.
ತೈಲ ಕ್ಷೇತ್ರದಿಂದ ಸೌದಿಗೆ ಶೇ.90ರಷ್ಟು ಆದಾಯ ಬಂದರೆ, ಯುಎಇಗೆ ಶೇ.80ರಷ್ಟು ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಚ್ಚಾ ತೈಲ ಕ್ಷೇತ್ರದಲ್ಲಿ ಭಾರೀ ಕುಸಿತ ಉಂಟಾಗಿರುವುದರಿಂದ ಯುಎಇಯ ಅರ್ಥ ವ್ಯವಸ್ಥೆ ಕುಸಿಯಲಿದೆ ಎಂಬ ಶಂಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಬದಲಿ ಆದಾಯದ ಮೂಲಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಐಎಂಎಫ್ ಕೂಡ ಬದಲಿ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!