ಪಠ್ಯೇತರ ಚಟುವಟಿಕೆಗಳಲ್ಲಿ  ಅಭಿರುಚಿ ಇರಲಿ: ಡುಂಡಿರಾಜ್‌

Team Udayavani, Jan 16, 2018, 11:29 AM IST

19-16.jpg

ಬಂಟ್ವಾಳ: ವಿದ್ಯಾರ್ಥಿಗಳ ಬದುಕು ಅರಳಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾದುದು. ವಿದ್ಯಾರ್ಥಿಗಳು ಪಠ್ಯ ಕೇಂದ್ರಿತ ಶಿಕ್ಷಣದ ಜತೆಗೆ ಪಠ್ಯೇತರ ಚಟು ವಟಿಕೆಗಳಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತ ಅಭಿರುಚಿಯನ್ನು ಹೊಂದಿರಬೇಕು ಎಂದು ಹಾಸ್ಯ ಸಾಹಿತಿ ಎಚ್‌. ಡುಂಡಿರಾಜ್‌ ಅಭಿಪ್ರಾಯ ಪಟ್ಟರು.

ಅವರು ಶನಿವಾರ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪ.ಪೂ. ಕಾಲೇಜು ಗಳ ಸುವರ್ಣ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ವರ್ತಮಾನದ ಸ್ಪರ್ಧಾತ್ಮಕ ಪರಿಸರವು ವಿದ್ಯಾರ್ಥಿಗ‌ಳನ್ನು ಸಂಕುಚಿತ ಮನಸ್ಥಿತಿಯವರ ನ್ನಾಗಿಸುತ್ತಿದೆ. ಮಾನವನ ಬದುಕು ವಿಕಾಸ ಗೊಳ್ಳುವಲ್ಲಿ ಸಾಹಿತ್ಯದ ಓದು, ಬರವಣಿಗೆ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿರುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದಲೇ ಆತ್ಮವಿಶ್ವಾಸ, ಛಲ, ಕುತೂಹಲ ಮೂಡಲು ಸಾಧ್ಯ ಎಂದರು.

ಪ್ರತಿಭೆಗೆ ಪರಿಸರ ಮುಖ್ಯ
ಎಸ್‌.ವಿ.ಎಸ್‌. ವಿದ್ಯಾಸಂಸ್ಥೆಯು ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದ ವಿದ್ಯಾರ್ಥಿ ಪೋಷಕ ಸಂಸ್ಥೆಯಾಗಿದೆ. ಸಾಹಿತ್ಯದ ಓದು ನಮ್ಮನ್ನು ಬೆಳೆಸುತ್ತದೆ. ಸಾಹಿತ್ಯದ ಓದಿನ ಮುಖೇನ ಸಮಾಜದ ನೋವು ನಲಿವಿಗೆ ಸ್ಪಂದಿಸುವ ಮನಸ್ಸು ನಿರ್ಮಾಣವಾಗುತ್ತದೆ. ಒಳ್ಳೆಯ ಪ್ರತಿಭೆ ಹುಟ್ಟಲು ಒಳ್ಳೆಯ ಪರಿಸರ ವಾತಾವರಣವು ಅಷ್ಟೇ ಮುಖ್ಯ. ವಿದ್ಯಾ ಕೇಂದ್ರಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಣದ ಸ್ವರೂಪವನ್ನು ಯೋಜಿಸಬೇಕಾಗಿದೆ ಎಂದರು.

ಶ್ರೀ ವೆಂಕಟರಮಣ ಸ್ವಾಮಿ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್‌ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್‌ ಮತ್ತು ಪ. ಪೂ. ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಉಪಸ್ಥಿತರಿದ್ದರು.
ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗ್ರೀಷ್ಮಾ ಶಲ್ಮಾ ವೇಗಸ್‌, ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನನ್ಯಾ ಜಿ. ವಿದ್ಯಾರ್ಥಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಕೆ. ವೆಂಕಟೇಶ್‌ ನಾಯಕ್‌ ಮತ್ತು ಸಂಜು ಕಲ್ಬಿ ಪಟೇಲ್‌ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮಹಾಲಸಾ ಆರ್‌.ಬಿ. ನಾಯಕ್‌ ಸ್ವಾಗತಿಸಿ, ಪದವಿ ಕಾಲೇಜಿನ ಜತೆ ಕಾರ್ಯದರ್ಶಿ ಅನುಷಾ ವಂದಿಸಿದರು. ಪ.ಪೂ. ವಿಭಾಗದ ವಿದ್ಯಾರ್ಥಿ ಸಂಘದ ನಾಯಕ ವೆಂಕಟರಮಣ ಭಟ್‌ ಎ. ಅತಿಥಿಗಳನ್ನು ಪರಿಚಯಿಸಿದರು. ನತಾಶಾ ಕಾರ್ಯಕ್ರಮ ನಿರ್ವಹಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕ ಲೆ| ಸುಂದರ್‌ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಭಾ ಕಾರ್ಯಕ್ರಮದ ಅನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ಟಾಪ್ ನ್ಯೂಸ್

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.