ಡಿಜಿಟಲ್ ಕ್ರಾಂತಿಯಿಂದ ಶೈಕ್ಷಣಿಕ ವ್ಯಾಪ್ತಿ ಸಂಕುಚಿ
Team Udayavani, Jan 18, 2018, 1:48 PM IST
ಬೆಂಗಳೂರು: ಜಾಗತಿಕ ಡಿಜಿಟಲ್ ಕ್ರಾಂತಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ವ್ಯಾಪ್ತಿಯನ್ನು ಸಂಕುಚಿತಗೊಳಿ ಸುತ್ತಿದೆ ಎಂದು ಇನ್ಫೋಸಿಸ್ ಕಾರ್ಯನಿರ್ವಾಹೇತರ ಸಿಇಒ ನಂದನ್ ನಿಲೇಕಣಿ ಅಭಿಪ್ರಾಯಪಟ್ಟರು.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಆಯೋಜಿಸಿದ್ದ 3 ದಿನಗಳ ಅಂತಾ ರಾಷ್ಟ್ರೀಯ ಮಟ್ಟದ “ಮುಂದಿನ ಭವಿಷ್ಯಕ್ಕಾಗಿ ಕಲಿಕೆ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದಿನೇ ದಿನೇ ಹೆಚ್ಚುತ್ತಿರುವ ಡಿಜಿಟಲ್ ಕ್ರಾಂತಿ ಶಿಕ್ಷಣ ಕ್ಷೇತ್ರದ ಮೇಲೆಯೂ ಪರಿಣಾಮವನ್ನುಂಟು ಮಾಡುತ್ತಿದ್ದು, ಹೊಸ ಸಂಶೋಧನೆಗಳು, ಕಲಿ ಕೆಯ ಸರಳೀಕರಣ, ಹೊಸ ಅವಕಾಶ ಗಳನ್ನು ಬಿಚ್ಚಿಡುತ್ತಿದೆ. ಡಿಜಿಟಲೀಕರಣದ ಅವಲಂಬಿಕೆಯ ಪರಿಣಾಮದ ಬಗ್ಗೆಯೂ ಚಿಂತಿಸಬೇಕಿದೆ ಎಂದರು.
ಮುಂಬರುವ ದಿನಗಳಲ್ಲಿ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಕಲಿಕಾ ಶಿಕ್ಷಣದ ಜೊತೆಗೆ, ಶೈಕ್ಷಣಿಕೇತರ ವಿಷಯ ತಜ್ಞರು, ತಂತ್ರೋದ್ಯಮಶೀಲರು ಮತ್ತು ಹೂಡಿಕೆದಾರರ ಸಹಯೋಗದೊಂದಿಗೆ ಕಲಿಕಾ ನೀತಿ ರೂಪಿಸಬೇಕಿದೆ ಎಂದರು.
ವಿಚಾರ ಸಂಕಿರಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶೈಕ್ಷಣಿಕ ತಜ್ಞರು, ದೇಶ, ವಿದೇಶಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ವಿಷಯ ತಜ್ಞರು, ಸೇರಿದಂತೆ 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಿತು.