ಪೂಜಾ ಸಮಯ
Team Udayavani, Feb 2, 2018, 11:17 AM IST
ಸಿಕ್ಕ ಅವಕಾಶಗಳಲ್ಲಿ ತಮ್ಮ ಪ್ರತಿಭೆ ತೋರಿಸುತ್ತಾ ಬೆಳೆಯುವ ಒಂದು ವರ್ಗವಿದೆ. ಸಣ್ಣ ಪುಟ್ಟ ಪಾತ್ರ ಸಿಕ್ಕರೂ ಖುಷಿಯಿಂದ ನಟಿಸುತ್ತಾ, ಮುಂದೆ ದೊಡ್ಡ ಪಾತ್ರ ಮಾಡುವ ಅನೇಕರಿದ್ದಾರೆ. ಈ ಸಾಲಿಗೆ ಪೂಜಾ ಹುಣಸೂರು ಕೂಡಾ ಸೇರುತ್ತಾರೆ. ಯಾರು ಈ ಪೂಜಾ ಹುಣಸೂರು ಎಂದರೆ ಸದ್ಯ “ಭಾರತಿಪುರ ಕ್ರಾಸ್’ ಕಿರುಚಿತ್ರ ತೋರಿಸಬೇಕು. “ಭಾರತಿಪುರ ಕ್ರಾಸ್’ ಕಿರುಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪೂಜಾ ಈಗಾಗಲೇ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಸಿನಿಕೆರಿಯರ್ ಆರಂಭಿಸಿದ ಪೂಜಾ ಈಗ ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.
ಎಂಎಸ್ಸಿ ಓದಿರುವ ಪೂಜಾ ಒಳ್ಳೆಯ ಡ್ಯಾನ್ಸರ್ ಕೂಡಾ. ಈಗಾಗಲೇ 700ಕ್ಕೂ ಹೆಚ್ಚು ಸ್ಟೇಜ್ ಶೋ ಕೊಟ್ಟಿದ್ದಾರೆ. ಹೀಗೆ ಸ್ಟೇಜ್ ಶೋ ಕೊಡುತ್ತಲೇ ಸಿನಿಮಾ ಕನಸು ಕಂಡ ಪೂಜಾಗೆ ಆರಂಭದಲ್ಲಿ “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’, “ರನ್ನ’ ಹಾಗೂ “ಚಕ್ರವ್ಯೂಹ’ ಚಿತ್ರಗಳ ಸಣ್ಣ ಪಾತ್ರಗಳು ಸಿಕ್ಕಿವೆ. ಸಣ್ಣ ಪಾತ್ರಗಳಲ್ಲಿ ಖುಷಿ ಕಂಡ ಪೂಜಾ ಈಗ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. “ಬಸ್ ನಂ 210′ ಹಾಗೂ ಯೋಗೇಶ್ ನಟನೆಯ “ಜಾನಕಿ ರಾಮ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎರಡೂ ಸಿನಿಮಾಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.
“ನನಗೆ ನಾಯಕಿಯೇ ಆಗಿ ನಟಿಸಬೇಕೆಂಬ ಆಸೆ ಇಲ್ಲ. ನಟನೆಗೆ ಹಾಗೂ ಸಿನಿಮಾಕ್ಕೆ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ನಟಿಸಲು ಇಷ್ಟ’ ಎನ್ನುವ ಪೂಜಾ, “ಭಾರತೀಪುರ ಕ್ರಾಸ್’ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. “ಕಿರುಚಿತ್ರವಾದರೂ ಯಾವುದೇ ಸಿನಿಮಾಕ್ಕೆ ಕಡಿಮೆ ಇಲ್ಲದಂತೆ ಮಾಡಲಾಗಿದೆ. ಇಲ್ಲೊಂದು ಸಂದೇಶವೂ ಇದೆ’ ಎನ್ನುತ್ತಾರೆ ಪೂಜಾ.
ರವಿ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್