ಯಾರಿಗೂ ಇಲ್ಲ ಟಿಕೆಟ್‌ ಹಂಚಿಕೆ ಅಧಿಕಾರ


Team Udayavani, Feb 12, 2018, 3:56 PM IST

bid-2.jpg

ವಿಜಯಪುರ: ರಾಜ್ಯದ ವಿಧಾನಸಭೆ ಚುನಾವಣೆಯ ಯಾವ ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್‌ ಅಂತಿಮಗೊಂಡಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯ ಉಸ್ತುವಾರಿ ಹೊಂದಿರುವ ಕೇಂದ್ರ ರೈಲ್ವೇ ಖಾತೆ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ನಗರದ ಮಧುವನ ಸಭಾಂಗಣದಲ್ಲಿ ನಡೆದ ಬಿಜೆಪಿ ಪದಾ ಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಯಾವ ಮುಖಂಡರಿಗೂ ಟಿಕೆಟ್‌ ಫೈನಲ್‌ ಮಾಡುವ ಅಧಿ ಕಾರ ಇಲ್ಲ. ಅದು ಏನಿದ್ದರೂ ಬಿಜೆಪಿಯ ಕೇಂದ್ರಿಯ ಸಂಸದೀಯ ಬೋರ್ಡ್‌ ನಿರ್ಧಾರಕ್ಕೆ ಬಿಟ್ಟಿದೆ. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಟಿಕೆಟ್‌ ಬಗ್ಗೆ ಗೊಂದಲ ಮೂಡಿಸಿಕೊಳ್ಳಬಾರದು. ಪಕ್ಷ ಸಂಘಟನೆಗೆ ಪ್ರಥಮಾದ್ಯತೆ ನೀಡಬೇಕು. ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಅವರ ಗೆಲುವಿಗೆ ಉಳಿದ ಆಕಾಂಕ್ಷಿಗಳು, ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಎಲ್ಲೆ ಮೀರಿದೆ. ಎಲ್ಲ ರಂಗಗಳಲ್ಲಿಯೂ ವ್ಯಾಪಕವಾದ ಭ್ರಷ್ಟಾಚಾರ ಆವರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಭ್ರಷ್ಟ ಮುಖವನ್ನು ಜನರ ಮುಂದೆ ತರಬೇಕಿದೆ ಎಂದರು.

ಅಹಿಂದ ವರ್ಗದ ಕಲ್ಯಾಣ ಎಂಬ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಈಗ ಕೇವಲ ಒಂದು ಮತದ ಜನರನ್ನು ಓಲೈಸುವಲ್ಲಿ ಮಾತ್ರ ತೊಡಗಿದೆ. ಜಾತಿ, ಧರ್ಮ ರಾಜಕಾರಣ ಮಾಡುವ ಮೂಲಕ ಧರ್ಮ ಒಡೆಯುವ ಕೆಟ್ಟ ಕೆಲಸಕ್ಕೆ ಕಾಂಗ್ರೆಸ್‌ ಸರ್ಕಾರ ಕೈ ಹಾಕಿದೆ ಎಂದು ವಾಗ್ಧಾಳಿ ನಡೆಸಿದರು.

 ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ರೈತರ ಹಿತರಕ್ಷಣೆ ಸಂಪೂರ್ಣ ಕಡೆಗಣಿಸಿದೆ. ಈ ಕಾರಣದಿಂದಾಗಿಯೇ ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ನೋವಿನ ಹಾಗೂ ದುರಂತದ ಸಂಗತಿ. ರೈತರ ಸಮಸ್ಯೆಗೆ ಸ್ಪಂದಿಸಲು ಆಗದ ಕಾಂಗ್ರೆಸ್‌ ಸರ್ಕಾರ ಅತ್ಯಂತ ಬೇಜವಾಬ್ದಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಬೆಳಗಾವಿ ಸಂಸದ ಸುರೇಶ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಶಾಸಕರಾದ ಅರುಣ ಶಹಾಪುರ, ರಮೇಶ ಭೂಸನೂರ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ. ಬೆಳ್ಳುಬ್ಬಿ, ಆರ್‌.ಎಸ್‌. ಪಾಟೀಲ ಕೂಚಬಾಳ, ರವಿಕಾಂತ ಬಗಲಿ, ವಿಜಯಕುಮಾರ ಪಾಟೀಲ, ಚಂದ್ರಶೇಖರ ಕವಟಗಿ, ವಿವೇಕ್‌ ಡಬ್ಬಿ ಇದ್ದರು.

40 ಸಾವಿರ ಕೋಟಿ ರೂ. ವಿದ್ಯುತ್‌ ಉಳಿತಾಯ 
ವಿಜಯಪುರ: ಕೇಂದ್ರ ಸರ್ಕಾರದ ಪ್ರಸ್ತುತ ಉಜ್ವಲ ಯೋಜನೆ ಅಡಿಯಲ್ಲಿ 40 ಸಾವಿರ ಕೋಟಿ ಮೌಲ್ಯದ ವಿದ್ಯುತ್‌ ಉಳಿತಾಯವಾಗಿದೆ. ಸರ್ಕಾರಕ್ಕೂ ಹಾಗೂ ಗ್ರಾಹಕರಿಗೂ ಆರ್ಥಿಕ ಹೊರೆ ತಗ್ಗಿದಂತಾಯಿತು ಎಂದು ರೈಲ್ವೇ ಸಚಿವ ಪಿಯೂಸ್‌ ಗೋಯಲ್‌ ಹೇಳಿದರು. ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್‌ಇಡಿ ಬಲ್ಬ್ಗಳನ್ನು ವಿತರಣೆ ಮಾಡುತ್ತಿದೆ. 40 ರೂ.ಗೆ 9 ವ್ಯಾಟ್‌ ಸಾಮರ್ಥ್ಯದ ಬಲ್ಬ್ ಮಾರಲಾಗುತ್ತಿದೆ. ಆದರೆ ಈ ಹಿಂದೆ ಯುಪಿಎ ಸರ್ಕಾರ 7 ವ್ಯಾಟ್‌ ಎಲ್‌ಇಡಿ ಬಲ್ಬ್ನ್ನು 310 ರೂ.ಗೆ ಖರೀದಿ ಮಾಡಿ, 99 ರೂ.ಗೆ ವಿತರಣೆ ಮಾಡಿತ್ತು. ಇದರಿಂದಾಗಿ ಸರ್ಕಾರಕ್ಕೂ ದೊಡ್ಡ ಮೊತ್ತ ಹಾಗೂ ಗ್ರಾಹಕರಿಗೂ ದೊಡ್ಡ ಮೊತ್ತ ಪಾವತಿ ಮಾಡಬೇಕಾಯಿತು ಎಂದರು. ಆದರೆ ಈ ಚಿಂತೆ ಕಾಂಗ್ರೆಸ್‌ ಸರ್ಕಾರಕ್ಕೆ ಇರಲಿಲ್ಲ. ಆದರೆ ಜನರ ಒಂದೊಂದು ರೂ. ಸಹ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂಬ ವಿಚಾರಧಾರೆ ಹೊಂದಿರುವ ಬಿಜೆಪಿ ಮೇಕ್‌ ಇನ್‌ ಇಂಡಿಯಾ ಮೂಲಕ ಎಲ್‌ಇಡಿ ಬಲ್ಬ್ ಉದ್ಯಮಕ್ಕೆ ಉತ್ತೇಜನ ನೀಡಿತು. ಪರಿಣಾಮವಾಗಿ 9 ವ್ಯಾಟ್‌ ಸಾಮರ್ಥ್ಯ ಬಲ್ಪ್ ಕೇವಲ 40 ರೂ.ನಲ್ಲಿ ಖರೀದಿಸಲು ಸಾಧ್ಯವಾಯಿತು ಎಂದು ವಿವರಿಸಿದರು. 

ವಿದ್ಯುತ್‌ಉತ್ಪಾದನಾಕೇಂದ್ರಗಳುಬೇಸಿಗೆಯಲ್ಲೇಕಲ್ಲಿದ್ದಲುಸಂಗ್ರಹಿಸಲಿ
ವಿಜಯಪುರ: ಮಳೆಗಾಲದಲ್ಲಿ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಕೆಲಸ ಅಸಾಧ್ಯ. ಹೀಗಾಗಿ ದೇಶದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಕಲ್ಲಿದ್ದಲು  ನಿಯಮಗಳಂತೆ ಬೇಸಿಗೆಯಲ್ಲೇ ಮಳೆಗಾಲದಲ್ಲಿ ಅಗತ್ಯವಾದ ಕಲ್ಲಿದ್ದಲನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಕಲ್ಲಿದ್ದಲು ಹಾಗೂ ರೈಲ್ವೆ ಖಾತೆ ಸಚಿವ ಪಿಯೂಸ್‌ ಗೋಯಲ್‌ ಹೇಳಿದರು. 

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಗೆ ಅಗತ್ಯವಾದ ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳುವುದು ರಾಜ್ಯಗಳ ಕೆಲಸ. ಆದರೆ ಮಳೆಗಾಲಕ್ಕೆ ಬೇಕಾದ ಅಗತ್ಯ ಕಲ್ಲಿದ್ದಲು ಸಂಗ್ರಹಿಸಿಕೊಳ್ಳದೇ ಕೇವಲ 30 ದಿನಗಳ ಕಲ್ಲಿದ್ದಲು ದಾಸ್ತಾನು ಮಾಡಿಕೊಳ್ಳುತ್ತಿರುವ ಕ್ರಮವೇ ವಿದ್ಯುತ್‌ ಕೇಂದ್ರಗಳಿಗೆ ಕಲ್ಲಿದ್ದಲು ಕೊರತೆಯ ಸಮಸ್ಯೆ ಎದುರಾಗಲು ಪ್ರಮಖ ಕಾರಣ.

ಹೀಗಾಗಿ ಕಲ್ಲಿದ್ದಲು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಹಾಗೂ ರಾಜ್ಯ ಸರ್ಕಾರಗಳ ಕೆಲಸ. ವಿಜಯಪುರ ಜಿಲ್ಲೆಯಲ್ಲಿ ತಲೆ ಎತ್ತಿರುವ ಕೂಡಗಿ ಎನ್‌ಟಿಪಿಸಿ ವಿದ್ಯುತ್‌ ಉತ್ಪಾದನೆ ಕೇಂದ್ರಕ್ಕೆ ಕಲ್ಲಿದ್ದಲು ಸಾಗಿಸಲು ಪ್ರತ್ಯೇಕ ರೈಲು ಮಾರ್ಗ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಜೋಡಿ ಮಾರ್ಗ ನಿರ್ಮಾಣದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗೆ ಸಹಕಾರಿ ಆಗಲಿದೆ ಎಂದರು.

ರಾಹುಲ್‌ ಟೆಂಪಲ್‌ ರನ್‌ ಫಲಿಸದು
ವಿಜಯಪುರ: ಕರ್ನಾಟಕದಲ್ಲಿ ಏಕಾಏಕಿ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಮಾಡುವ ಟೆಂಪಲ್‌ ರನ್‌ ಆರಂಭಿಸಿದ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ  ಅವರ ಪ್ರಯತ್ನ ಫಲ ನೀಡುವುದಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ಡಬಲ್‌ ಎಂಜಿನ್‌ ಇರಬೇಕು ಎಂಬ ಮತದಾರರ ಆಶಯಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಪಿಯೂಸ್‌ ಗೋಯಲ್‌ ಹೇಳಿದರು. ಕರ್ನಾಟಕದ ಜನ ಬದಲಾವಣೆ ಬಯಸಿರುವ ಕಾರಣ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಸರ್ಕಾರ ರಚಿಸಲಿದೆ. ಹೀಗಾಗಿ ಚುನಾವಣೆಗಾಗಿ ದೇವಸ್ಥಾನಗಳನ್ನು ನೆನಪು ಮಾಡಿಕೊಂಡು ಓಡಾಡಲು ಮುಂದಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಪ್ರಯತ್ನ ಫಲ ನೀಡುವುದಿಲ್ಲ ಎಂದರು

ವಿಜಯಪುರ ರೈಲ್ವೆ ನಿಲ್ದಾಣ ಆಧುನೀಕರಣ
ವಿಜಯಪುರ: ವಿಜಯಪುರದ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ಸಚಿವ ಪಿಯೂಸ್‌ ಗೋಯಲ್‌ ಹೇಳಿದರು. ಕೇಂದ್ರ ಸಚಿವರಾಗಿರುವ ರಮೇಶ ಜಿಗಜಿಣಗಿ ಅವರು ತಮ್ಮ ತವರು ಕ್ಷೇತ್ರದಲ್ಲಿ ರೈಲ್ವೆ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಒತ್ತಡ ಹೇರುತ್ತಲೇ ಇರುತ್ತಾರೆ.

ಹೀಗಾಗಿ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೆ ನಿಲ್ದಾಣದ ಉನ್ನತೀಕರಣ ಮಾಡಲಾಗುತ್ತದೆ. ಕಲ್ಲಿದ್ದಲು ಆಧಾರಿತ ವಿದ್ಯುತ್‌ ಕೇಂದ್ರಗಳು ಮಳೆಗಾಲ ಆರಂಭದ ಪೂರ್ವದಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದನ್ನು ಸಂಗ್ರಹ ಮಾಡಿಕೊಳ್ಳಬೇಕು. ಆಯಾ ರಾಜ್ಯಗಳು ಮತ್ತು ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕಗಳು ಕೇವಲ 30 ದಿನಗಳಿಗಾಗುವಷ್ಟು ಕಲ್ಲಿದ್ದಲು ಸಂಗ್ರಹಿಸುತ್ತಿವೆ. ಇದರಿಂದಾಗಿ ಕಲ್ಲಿದ್ದಲು ಅಭಾವ ಸೃಷ್ಟಿಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಕಲ್ಲಿದ್ದಲು ನಿಯಮಾವಳಿ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕೂಡಗಿ ಎನ್‌ ಟಿಪಿಎಸ್‌ಗೆ ಸಂಬಂ ಧಿಸಿದಂತೆ ಜೋಡು ರೈಲು ಮಾರ್ಗ ಪೂರ್ಣಗೊಂಡರೆ ಅಗತ್ಯ ಪ್ರಮಾಣದ ವಿದ್ಯುತ್‌ ಉತ್ಪಾದನೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ ಎಂದು ಕಲ್ಲಿದ್ದಲು ಸಚಿವರೂ ಆಗಿರುವ ಪಿಯೂಷ್‌ ಗೋಯಲ್‌ ತಿಳಿಸಿದರು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.