ಇ-ತ್ಯಾಜ್ಯ ಅರಿವು ಮೂಡದಿದ್ದರೆ ಆಪತ್ತು

Team Udayavani, Mar 30, 2018, 12:52 PM IST

gul-3.jpg

ಬೀದರ: ಹಳೆಯ, ಉಪಯೋಗಕ್ಕೆ ಬಾರದ ವಿದ್ಯುನ್ಮಾನ ಮತ್ತು ವಿದ್ಯುತ್‌ ಉಪಕರಣಗಳು ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದರ ವಿಲೇವಾರಿಯನ್ನು ಸೂಕ್ತ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಗುಲಬರ್ಗಾ ವಿವಿ ಪ್ರಾಧ್ಯಾಪಕ ಪ್ರೊ| ಎಸ್‌.ಎನ್‌. ಮೂಲಗೆ ಹೇಳಿದರು.

ನಗರದ ಕರ್ನಾಟಕ ಕಾಲೇಜಿನಲ್ಲಿ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇ-ತ್ಯಾಜ್ಯದ ಬಗ್ಗೆ ಅರಿವು ಮೂಡಿಸದಿದ್ದಲ್ಲಿ ಭವಿಷ್ಯದಲ್ಲಿ ಆಪತ್ತಾಗುವ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಕೆ ನೀಡಿದರು.

ಮನುಷ್ಯರು ಉಪಯೋಸಿದ ನಂತರ ವ್ಯರ್ಥ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಭೂಮಿಗೆ ಎಸೆಯುವುದರಿಂದ ಮಣ್ಣು, ನೀರು ಮತ್ತು ವಾತಾವರಣ ಕಲುಷಿತಗೊಳ್ಳುತ್ತದೆ. ಅದರಿಂದ ಹೊರಸೂಸುವ ಅನಿಲಗಳಾದ ಅರ್ಸೆನಿಕ್‌, ಪಾದರಸ, ಲೆಡ್‌, ನಿಕ್ಕಲ್‌ ಕ್ಯಾಡ್ಮಿಯಂ ಆಕ್ಸೈಡ್‌ ಸೆಲೇನಿಯಂ ಮುಂತಾದ ವಿಷಯುಕ್ತ ಅನಿಲಗಳಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕೆಆರ್‌ಇ ಸಂಸ್ಥೆ ಸಂಯೋಜನಾಧಿಕಾರಿ ಪ್ರೊ|ಅಭಯಕುಮಾರ ಪಾಟೀಲ ಮಾತನಾಡಿ, ಭಾರತದಲ್ಲಿ ಸಮಸ್ಯೆಗಳ ಬಗ್ಗೆ ಅರಿವು ಬಂದಾಗ ತೋರುವ ನಿಷ್ಕಾಳಜಿಯಿಂದಾಗಿ ದೊಡ್ಡ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ. ಇ-ತ್ಯಾಜ್ಯ ಮಾನವನ ಆರೋಗ್ಯ, ನರ ದೌರ್ಬಲ್ಯ, ಬುದ್ಧಿ ಹೀನತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಮಾರವಾಗಿದೆ ಎಂದು ಹೇಳಿದರು. 

ಡಾ| ಮಲ್ಲಿಕಾರ್ಜುನ ಹಂಗರಗಿ ಮಾತನಾಡಿ, ನಾವು ಕಾರ್ಯಕ್ರಮವನ್ನು ಕೇವಲ ಹೆಸರಿಗೆ ಮಾತ್ರ ಮಾಡದೇ ವಾಸ್ತವಿಕವಾಗಿ ಎಲ್ಲಾ ಶಿಬಿರಾರ್ಥಿ ಹಾಗೂ ಇಲಾಖೆ ಮುಖ್ಯಸ್ಥರಿಗೆ ಮುಟ್ಟಿಸುವ ಮೂಲಕ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಉದ್ದೇಶವಿದೆ. ಇದಕ್ಕೆ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳು ಕೈ ಜೋಡಿಸಿರುವುದರಿಂದ ಯಶಸ್ವಿ ಕಾರ್ಯಗಾರವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮ ಸಂಯೋಜಕ ಪ್ರೊ| ರಾಜೇಂದ್ರ ಬಿರಾದಾರ 2016ರ ಇ-ತ್ಯಾಜ್ಯ ಕಾಯ್ದೆ ಬಗ್ಗೆ ಮಾತನಾಡಿ, ಪ್ರತಿಯೊಬ್ಬರಿಗೆ ಸಂಬಂಧಪಟ್ಟ ಕಾನೂನು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ ಹಾಗೂ ಪ್ರತಿ ವರ್ಷ ಮಾಲಿನ್ಯ ಮಂಡಳಿಗೆ ರಿಟರ್ನ್ ಫೈಲ್‌ ಮಾಡುವ ಕುರಿತು ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ| ಎಂ.ಎಸ್‌. ಪಾಟೀಲ ಅಧ್ಯಕ್ಷತೆ ಮಾತನಾಡಿದರು. ಶಿಬಿರಾರ್ಥಿಗಳಿಗಾಗಿ ಇ-ತ್ಯಾಜ್ಯದ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮ ಹಾಗೂ ಅವರನ್ನೊಳಗೊಂಡ ಇ-ತ್ಯಾಜ್ಯದ ಪೆನಾಲ್‌ ಗುಂಪು ಸಂದರ್ಶನ ಆಯೋಜಿಸಲಾಗಿತ್ತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.

ಪ್ರೊ| ಭರತರಾಜ, ಪ್ರೊ| ಎ.ಡಿ. ಶೆಟಕಾರ, ಪ್ರೊ| ರಮೇಶ ಪಾಟೀಲ ಪ್ರೊ| ವೈಜಿನಾಥ ಚಿಕಬಸ್ಸೆ, ಪ್ರೊ| ಅಶೋಕ ಹುಡೆದ, ಡಾ| ಯು.ಎಸ್‌. ಪಾಟೀಲ, ಸೋಮನಾಥ ಬಿರಾದಾರ, ಡಾ| ಹೆಬ್ಟಾಳೆ, ಸಚೀನ ವಿಶ್ವಕರ್ಮ, ವಿಶಾಲಾಕ್ಷಿ, ಶಿವಲೀಲಾ ಹಾಗೂ ಪ್ರೊ| ರವಿಚಂದ್ರನ್‌ ಸೇರಿದಂತೆ ಒಟ್ಟು 45 ಇಲಾಖೆಗಳಿಂದ ವಿವಿಧ ಜಿಲ್ಲೆಗಳಿಂದ ಒಟ್ಟು 135 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪ್ರೊ| ವಿನೋದಕುಮಾರ ನಿರೂಪಿಸಿದರು. ಪ್ರೊ| ರಾಜೇಂದ್ರ ಬಿರಾದಾರ ವಂದಿಸಿದರು.

ಟಾಪ್ ನ್ಯೂಸ್

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Bidar; ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

Bidar; ಖಾಸಗಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ ಶರಣು ಸಲಗರ್‌

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

ಏ… ಇದು ನನ್ ಸೀಟು… ಇಲ್ಲ ನನ್ ಸೀಟು: ಬಸ್ಸಿನೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.