ಅಪಘಾತ ನಿಯಂತ್ರಕ ಬ್ಯಾರಿಕೇಡ್‌ಗಳಿಂದಲೇ ಅಪಘಾತ!

Team Udayavani, Apr 14, 2018, 6:25 AM IST

0804Kapu1b.jpg

ಕಾಪು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ನಿಯಂತ್ರಣ, ಸಂಚಾರದ ಒತ್ತಡವನ್ನು ನಿಭಾಯಿಸುವುದಕ್ಕೆ ಅಳವಡಿಸಿದ ಪೊಲೀಸ್‌ ಬ್ಯಾರಿಕೇಡ್‌ಗಳೇ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. 
 
ಬ್ಯಾರಿಕೇಡ್‌ ಭರಾಟೆ 
ಉದ್ಯಾವರ ಬಲಾಯಿಪಾದೆ ಜಂಕ್ಷನ್‌, ಉದ್ಯಾವರ ಹಲೀಮಾ ಸಾಬುj ಸಭಾಭವನ (ಸಭಾಭವನದಲ್ಲಿ ಮದುವೆಯಿದ್ದಾಗ), ಉದ್ಯಾವರ ಜಂಕ್ಷನ್‌, ಕಟಪಾಡಿ ಜಂಕ್ಷನ್‌, ಪೊಲಿಪು ಮಸೀದಿ, ಉಚ್ಚಿಲ – ಪಣಿಯೂರು ಡೈವರ್ಷನ್‌ ಬಳಿ, ಎರ್ಮಾಳು ಡೈವರ್ಷನ್‌, ಪಡುಬಿದ್ರಿ ಮತ್ತು ಹೆಜಮಾಡಿಯಲ್ಲಿ ರಾ.ಹೆ. 66ರಲ್ಲಿ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಆಳವಡಿಸಲಾಗಿದೆ.
 
ಮುರಿದ ಬ್ಯಾರಿಕೇಡ್‌ಗಳಿಂದ ಅಪಘಾತ
ವೇಗವಾಗಿ ಬರುವ ವಾಹನ ಚಾಲಕರಿಗೆ ಬ್ಯಾರಿಕೇಡ್‌ಗಳ ಬಗ್ಗೆ ಸೂಚನೆ ಇಲ್ಲದೆ  ಢಿಕ್ಕಿ ಹೊಡೆದು ಜಖಂಗೊಂಡು ನೆಲಕ್ಕುರಿಳಿದೆ.  ಪೊಲೀಸರೂ ಕೆಲವೆಡೆ ಅಪಘಾತ ನಡೆದ ಸಂದರ್ಭ ಬ್ಯಾರಿಕೇಡ್‌ಗಳನ್ನು ಹಾಕುತ್ತಾರೆ. ಬಳಿಕ ತೆರವು ಮಾಡುವುದೂ ಇಲ್ಲ. ಬ್ಯಾರಿಕೇಡ್‌ ಅಪಘಾತಕ್ಕೆ ಬಲಿ ಯಾಗುವವರಲ್ಲಿ  ದ್ವಿಚಕ್ರ ವಾಹನ ಸವಾರರು ಮತ್ತು ರಿಕ್ಷಾ ಚಾಲಕರೇ ಹೆಚ್ಚು. 

ಅವೈಜ್ಞಾನಿಕ ಕಾಮಗಾರಿ ಸಮಸ್ಯೆ  
ರಾ.ಹೆ.66ರ ಕಾಮಗಾರಿ ಬಗ್ಗೆ ಆರಂಭ ದಿಂದಲೂ ಅಪಸ್ವರ ಕೇಳಿ ಬಂದಿತ್ತು. ತಂತ್ರಜ್ಞರು, ಸ್ಥಳೀಯರ ವಿರೋಧದ ನಡುವೆ  ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದಾಗಿಯೇ ಹೆಚ್ಚಿನ ಅಪಘಾತಗಳು ಸಂಭವಿಸುವಂತಾಗಿದೆ. ನೀಲನಕ್ಷೆ ತಯಾರಿಸುವ ಸಂದರ್ಭದಲ್ಲೇ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಂಡಿದ್ದರೇ ಇಷ್ಟೊಂದು ಪ್ರಮಾಣದಲ್ಲಿ ಬ್ಯಾರಿಕೇಡ್‌ ಹಾಕ ಬೇಕೆಂದಿಲ್ಲ. ಜತೆಗೆ ಅಪಘಾತಗಳ ಪ್ರಮಾಣವನ್ನೂ ತಗ್ಗಿಸಬಹುದಿತ್ತು ಎನ್ನುವ ಅಭಿಪ್ರಾಯವಿದೆ.  

ಚೆಕ್‌ಪೋಸ್ಟ್‌ಗಳಲ್ಲಿಯೂ ಇವೆ!
ಚುನಾವಣೆ ಹಿನ್ನೆಲೆ,  ಠಾಣಾ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚನೆ ಮಾಡಲಾಗಿದ್ದು. ಈ ಚೆಕ್‌ಪೋಸ್ಟ್‌ ಗಳಲ್ಲಿ ಮತ್ತು ಅನತಿ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್‌ ಅಳವಡಿಸಿರುವ ಕುರಿತು ಕನಿಷ್ಠ 100 ಮೀ. ದೂರದಲ್ಲಿ ಸೂಚನಾ ಫ‌ಲಕ ಅಳವಡಿಸಲು ವಾಹನ ಚಾಲಕರು ಆಗ್ರಹಿಸಿದ್ದಾರೆ.

ಪ್ರಾಯೋಜಕತ್ವಕ್ಕೆ ಪೈಪೋಟಿ!
ಅಚ್ಚರಿ ಎಂದರೆ ರಸ್ತೆಯಲ್ಲಿ ಹಾಕುವ ಬ್ಯಾರಿಕೇಡ್‌ಗಳನ್ನು ಪ್ರಾಯೋಜಿಸಲು ದಾನಿಗಳು ತಾ ಮುಂದು ಎಂಬಂತೆ ಬರುತ್ತಿದ್ದಾರೆ. ರಸ್ತೆ ಮೇಲಿನ ಹೆಚ್ಚಿನ ಬ್ಯಾರಿಕೇಡ್‌ಗಳನ್ನು  ಸ್ಥಳೀಯ ಉದ್ಯಮಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಪ್ರಾಯೋಜಿಸಿ, ಅವುಗಳಲ್ಲಿ ತಮ್ಮ ಜಾಹೀರಾತು ಪ್ರದರ್ಶಿಸುತ್ತಿವೆ. ಇದೇ ಕಾರಣಕ್ಕೆ ಬ್ಯಾರಿಕೇಟ್‌ ಪ್ರಾಯೋಜಕತ್ವಕ್ಕೆ ಪೈಪೋಟಿ ಇದೆ. 

ಬ್ಯಾರಿಕೇಡ್‌ ಅಪಘಾತಕ್ಕೆ ಕಾರಣಗಳೇನು ? 
-  ಬ್ಯಾರಿಕೇಡ್‌ಗಳಲ್ಲಿ ಸೂಕ್ತ ರೀತಿಯ ರಿಫ್ಲೆಕ್ಟರ್‌ ಬಳಸದೇ ಇರುವುದು
-  ಬೀದಿ ದೀಪ ಇಲ್ಲದಲ್ಲಿ ಬ್ಯಾರಿಕೇಡ್‌ ಹಾಕಿರುವುದು
-  ಚೆಕ್‌ಪೋಸ್ಟ್‌ಗಳ ರಚನೆ
-  ಪ್ರವಾಸಿ ವಾಹನ ಚಾಲಕರಿಗೆ, ಘನ ವಾಹನ ಚಾಲಕರಿಗೆ ಗಮನಕ್ಕೆ ಬಾರದ ರೀತಿ ಅಳವಡಿಕೆ  

ಸುಗಮ ಸಂಚಾರಕ್ಕೆ ಅಗತ್ಯ
ರಾ.ಹೆ 66ರ ಅವೈಜ್ಞಾನಿಕ ಕಾಮಗಾರಿಯಿಂದ ಸಂಚಾರ ನಿಯಂತ್ರಣಕ್ಕೆ ಬ್ಯಾರಿಕೇಡ್‌ ಅಳವಡಿಸುವುದು ಅವಶ್ಯ. ಶಾಲೆ, ಚೆಕ್‌ಪೋಸ್ಟ್‌, ಅತಿ ಜನಸಂದಣಿ, ನಾಲ್ಕು ರಸ್ತೆ ಕೂಡುವ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. 
– ನಿತ್ಯಾನಂದ ಗೌಡ, ಕಾಪು ಪಿಎಸ್‌ಐ.

– ರಾಕೇಶ್‌ ಕುಂಜೂರು 

ಟಾಪ್ ನ್ಯೂಸ್

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.