6 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ: ಚಿಕ್ಕಪ್ಪನ ಕೃತ್ಯ
Team Udayavani, Apr 21, 2018, 4:39 PM IST
ಇಂದೋರ್ : ಬಲೂನ್ ಮಾರಿಕೊಂಡು ಜೀವನ ಸಾಗಿಸುವ ಕುಟುಂಬವೊಂದರ ಆರು ತಿಂಗಳ ಹೆಣ್ಣು ಮಗವನ್ನು ಅದರ ಚಿಕ್ಕಪ್ಪನೇ ಅಪಹರಿಸಿ ಇಲ್ಲಿನ ರಾಜವಾಡ ಪ್ರದೇಶದಲ್ಲಿನ ಕಟ್ಟಡವೊಂದರ ತಳ ಅಂತಸ್ತಿನಲ್ಲಿ ಅತ್ಯಾಚಾರ ಗೈದು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗವನ್ನು ಅಪಹರಿಸಿ ಅತ್ಯಾಚಾರಗೈದು ಕೊಂದಿರುವ ಚಿಕ್ಕಪ್ಪನನ್ನು 21ರ ಹರೆಯದ ಸುನೀಲ್ ಭೀಲ್ ಎಂದು ಗುರುತಿಸಲಾಗಿದೆ. ರಾಜವಾಡ ಕೋಟೆಯ ಹೊರಗೆ ಶುಕ್ರವಾರ ರಾತ್ರಿ ಮಗುವಿನ ಕುಟುಂಬ ಮಲಗಿಕೊಂಡಿದ್ದಲ್ಲಿಂದ ಆರೋಪಿ ಸುನೀಲ್ ಭೀಲ್ ಮಗುವನ್ನು ಹೆಗಲಿಗೇರಿಸಿಕೊಂಡು ಸಾಗುತ್ತಿದ್ದ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿದ್ದು ಇದರ ಆಧಾರದಲ್ಲಿ ಅತ್ಯಾಚಾರಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಾಯಿಯೊಂದಿಗೆ ಆರೋಪಿ ಸುನೀಲ್ ಜಗಳ ಮಾಡಿದ್ದನ್ನು ಅನುಸರಿಸಿ ಆತ ಈ ನೀಚ ಕೃತ್ಯ ಎಸಗಿದ್ದಾನೆ. ಆದರೆ ಸುನೀಲ್ ಮನೆಯವನೇ ಆದ ಕಾರಣ ಮಗುವಿನ ಹೆತ್ತವರು ಆತನ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖೀಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಮರದ ಪುಡಿ, ಕೆಮಿಕಲ್ ಬಳಸಿ ಮಸಾಲೆ ಪದಾರ್ಥ ತಯಾರು; ಮೂವರ ಬಂಧನ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್
ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು
ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ