Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

Team Udayavani, May 6, 2024, 12:09 PM IST

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

ಬೆಂಗಳೂರು: ಬಿಸಿಲಿನ ಬೇಗೆಯಿಂದ ಸೌತೆಕಾಯಿ ಉತ್ಪಾದನೆ ಕುಂಠಿತವಾಗಿದ್ದು, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಾರಾಟ ಮಹಾಮಂಡಲ ನಿಯಮಿತ (ಹಾಪ್‌ಕಾಮ್ಸ್‌) ಸೇರಿ ಮಾರುಕಟ್ಟೆಗಳಲ್ಲಿ ಸೌತೆಕಾಯಿ ಬೆಲೆ ಕೆ.ಜಿ.ಗೆ 60 ರೂ. ಆಸುಪಾಸಿನಲ್ಲಿದೆ.

ಬಿಸಿಲು ಹೆಚ್ಚಿರುವ ಕಾರಣ ಸೌತೆಕಾಯಿ ಬಳ್ಳಿ ಬೆಳೆಯುತ್ತಿಲ್ಲ. ಹೂ ಬಿಟ್ಟರೂ ಮೊಗ್ಗು ಬಾರದೆ ಒಣಗಿ ಹೋಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ತಕ್ಕಷ್ಟು ಸೌತೆಕಾಯಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಬೆಲೆಯಲ್ಲಿ ಏರಿಕೆ ಆಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಅನೇಕಲ್‌, ಸರ್ಜಾಪುರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೇರಳವಾಗಿ ಸೌತೆಕಾಯಿ ಪೂರೈಕೆ ಆಗುತ್ತಿತ್ತು. ಆದರೆ, ಈಗ ಕಡಿಮೆ ಆಗಿದೆ ಎನ್ನುತ್ತಾರೆ ಹೋಲ್‌ಸೇಲ್‌ ವ್ಯಾಪಾರಿಗಳು.

ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ. 62 ರೂ.: ಹಾಪ್‌ಕಾಮ್ಸ್‌ನಲ್ಲಿ ಉತ್ತಮ ಗುಣಮಟ್ಟದ ಸೌತೆಕಾಯಿ ಪ್ರತಿ ಕೆ.ಜಿ.ಗೆ 62 ರೂ. ಇದೆ. ಕಳೆದ ಕೆಲವು ದಿನಗಳಿಂದ ಸೌತೆಕಾಯಿ ಬೆಲೆಯಲ್ಲಿ ಏರಿಕೆ, ಇಳಿಕೆ ನಡೆಯುತ್ತಲೇ ಇದೆ. ಗೃಹ ಪ್ರವೇಶ, ವಿವಾಹ ಮತ್ತಿತರ ಶುಭ ಸಮಾರಂಭಗಳ ಸೀಜನ್‌ ಆಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸೌತೆಕಾಯಿಗೆ ಸಾಕಷ್ಟು ಬೇಡಿಕೆ ಇದೆ. ಅಲ್ಲದೆ, ಬೇಸಿಗೆಯ ನೀರಡಿಕೆ(ಬಾಯಾರಿಕೆ)ಯನ್ನೂ ತಡೆಯುವ ಗುಣ ಹೊಂದಿರುವುದರಿಂದ ಸೌತೆ ಸವಿಯಲು ಜನರೂ ಕಾತರರಾಗಿದ್ದಾರೆ. ಆದರೆ, ಬೇಡಿಕೆಯಿರುವಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ, ಸೌತೆಕಾಯಿ ಬೆಲೆ ಏರಿಕೆಯಾಗಿದೆ ಎಂದು ಹಾಪ್‌ಕಾಮ್ಸ್‌ನ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಸೌತೆಕಾಯಿ ಮಾರಾಟ ಉತ್ತಮವಾಗಿದೆ. ಪ್ರತಿದಿನ 2 ಟನ್‌ ಮಾರಾ ಟವಾಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಬೆಳೆಯುವ ರೈತರಿಂದ ಸೌತೆಕಾಯಿ ಖರೀದಿಸ ಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಕಡಿಮೆ ಆಗಿದೆ. ಮಳೆ ಸುರಿದರೆ ಬೆಲೆ ಇಳಿಯುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಮಿರ್ಜಿ ಹೇಳುತ್ತಾರೆ.

ರಾಜಧಾನಿ ಬೆಂಗಳೂರಿಗೆ 3 ಸಾವಿರ ಮೂಟೆ: ಮೂರು ನಾಲ್ಕು ದಿನಗಳ ಹಿಂದಷ್ಟೇ ಕಲಾಸಿಪಾಳ್ಯ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ 50 ಕೆ.ಜಿ. ಸೌತೆ ಕಾಯಿ ಮೂಟೆಗೆ 2 ಸಾವಿರ ರೂ. ಇತ್ತು. ಆದರೆ, ಈಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಾರೆ ಹೋಲ್‌ಸೇಲ್‌ ವ್ಯಾಪಾರಿ ರವಿರಾಜ್‌. ಒಂದು ತಿಂಗಳ ಹಿಂದೆ ಪ್ರತಿ ಕೆಜಿ.ಗೆ 25 ರೂ. ಮಾರಾಟವಾಗು ತ್ತಿದ್ದ ಸೌತೆಕಾಯಿ ಈಗ 60 ರೂ.ಗೂ ಅಧಿಕ ಬೆಲೆಗೆ ಖರೀದಿಯಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕೆಲವು ದಿನಗಳಿಂದ ಬೇಡಿಕೆಯಿರುವಷ್ಟು ಸೌತೆಕಾಯಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ. ಬೆಂಗಳೂರಿನ ಸುತ್ತಮುತ್ತ ಮಳೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುವ ಸಾಧ್ಯತೆ ಇದೆ. ಹಾಪ್‌ಕಾಮ್ಸ್‌ ನಲ್ಲಿ ನಿತ್ಯ 2 ಟನ್‌ ಸೌತೆಕಾಯಿ ಮಾರಾಟವಾಗುತ್ತಿದೆ.-ಉಮೇಶ್‌ ಮಿರ್ಜಿ, ವ್ಯವಸ್ಥಾಪಕರು ಹಾಪ್‌ಕಾಮ್ಸ್‌.  

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

IAS officer ದಿವ್ಯಾಂಗರಿಗೇಕೆ ಮೀಸಲಾತಿ?: ಐಎಎಸ್‌ ಅಧಿಕಾರಿ ಟ್ವೀಟ್‌ಗೆ ಭಾರೀ ಆಕ್ರೋಶ

IAS officer ದಿವ್ಯಾಂಗರಿಗೇಕೆ ಮೀಸಲಾತಿ?: ಐಎಎಸ್‌ ಅಧಿಕಾರಿ ಟ್ವೀಟ್‌ಗೆ ಭಾರೀ ಆಕ್ರೋಶ

Vidhana-parisaht

Valmiki Nigama Scam: ಗದ್ದಲದಲ್ಲೇ ಪರಿಷತ್‌ನಲ್ಲಿ ಸಿಎಂ ಉತ್ತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

Bengaluru: ಕಾರು ಡ್ರೈವಿಂಗ್‌ ವೇಳೆ ಯುವತಿಗೆ ಮರ್ಮಾಂಗ ತೋರಿಸಿದ ಟ್ರೈನರ್‌

Bengaluru: ಕಾರು ಡ್ರೈವಿಂಗ್‌ ವೇಳೆ ಯುವತಿಗೆ ಮರ್ಮಾಂಗ ತೋರಿಸಿದ ಟ್ರೈನರ್‌

DK Shivakumar: ಸೀಟ್‌ ಬೆಲ್ಟ್ ಧರಿಸದೆ ಕಾರು ಚಾಲನೆ; ನೆಟ್ಟಿಗರು ಕಿಡಿ

DK Shivakumar: ಸೀಟ್‌ ಬೆಲ್ಟ್ ಧರಿಸದೆ ಕಾರು ಚಾಲನೆ; ನೆಟ್ಟಿಗರು ಕಿಡಿ

Arrested: ಕೋರ್ಟ್ ಆವರಣದಲ್ಲಿದ್ದ ಹಿಟಾಚಿ ಕದ್ದ ಇಬ್ಬರು ಆರೋಪಿಗಳ ಬಂಧನ

Arrested: ಕೋರ್ಟ್ ಆವರಣದಲ್ಲಿದ್ದ ಹಿಟಾಚಿ ಕದ್ದ ಇಬ್ಬರು ಆರೋಪಿಗಳ ಬಂಧನ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

Sailor Missing; ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಡ: ನಾವಿಕ ನಾಪತ್ತೆ!

parils olympics

Olympics: ವಿದೇಶಿ ತಂಡಗಳಲ್ಲಿ ಭಾರತೀಯ ಮೂಲದ ಆ್ಯತ್ಲೀಟ್ಸ್‌ ವಿವರ ಇಲ್ಲಿದೆ 

vidhana-soudha

BBMP ಇನ್ನು 5 ಪಾಲಿಕೆ; ಗ್ರೇಟರ್‌ ಬೆಂಗಳೂರು ಮಸೂದೆಗೆ ಸಂಪುಟ ಸಭೆ ಅಸ್ತು

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Mangaluru ಅಂ. ವಿಮಾನ ನಿಲ್ದಾಣ: ಪ್ರಯಾಣಿಕರ ಸಂಖ್ಯೆ ಶೇ.21ರಷ್ಟು ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.