ಕಾರ್ಪೆಟ್ ಮೇಲಿನ ಕಲೆ ತಡೆಯಲು ತಂಪು ಪಾನೀಯಕ್ಕೆ ನಿಷೇಧ
Team Udayavani, May 18, 2018, 9:42 AM IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಪಂಚದಲ್ಲಿನ ಯಾವುದೇ ವ್ಯವಸ್ಥೆ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲವೇನೋ? ಸ್ಕಾಟ್ಲೆಂಡ್ನಲ್ಲಿರುವ ಅವರ ವೈಭವೋಪೇತ ಗಾಲ್ಫ್ ರೆಸಾರ್ಟ್ನಲ್ಲಿ ಜನಪ್ರಿಯ ತಂಪು ಪಾನೀಯ ಕಂಪನಿಯ ಉತ್ಪನ್ನದ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಸದ್ದಿಲ್ಲದೆ ಆ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನುವುದು ಗ್ರಾಹಕರ ಆರೋಪ. ಕಿತ್ತಳೆ ಬಣ್ಣ ಹೊಂದಿರುವ ಈ ತಂಪು ಪಾನೀಯಕ್ಕೆ ಸ್ಕಾಟ್ಲೆಂಡ್ನಲ್ಲಿ ಭಾರಿ ಬೇಡಿಕೆ. ಏಕೆಂದರೆ ಇದೊಂದು ಮದ್ಯ ರಹಿತ ಪಾನೀಯವಾಗಿದ್ದು, ಒಂದು ರೀತಿಯ ಆಕರ್ಷಕವಾಗಿದೆ ಎಂದು ಗ್ರಾಹಕರ ಅಂಬೋಣವಂತೆ. ಸರಿ ಇನ್ನು ಟ್ರಂಪ್ರ ಕ್ಲಬ್ನಲ್ಲಿ ಅದಕ್ಕೆ ನಿಷೇಧ ಹೇರಲಾಗಿದೆ ಏಕೆ ಎನ್ನುವುದಕ್ಕೆ ಸ್ಪಷ್ಟನೆ
ನೀಡಿದ ರೆಸಾರ್ಟ್ನ ಮ್ಯಾನೇಜರ್ ತೀರಾ ಇತ್ತೀಚೆಗಷ್ಟೇ ಬಹಳಷ್ಟು ರುಪಾಯಿ ಖರ್ಚು ಮಾಡಿ ಹೊಸ ಕಾರ್ಪೆಟ್ ಹಾಕಿಸಿದ್ದೇವೆ. ತಂಪು ಪಾನೀಯ ಚೆಲ್ಲಿ ಹೋದರೆ ಕಾರ್ಪೆಟ್ ನಲ್ಲಿ ಅದರ ಕಲೆ ಇರುತ್ತದೆ. ರೆಸಾರ್ಟ್ನ ವಿಲ್ಲಾಗಳಲ್ಲಿ ಈಗಾಗಲೇ ಅದರಿಂದ ಕಲೆ ಉಂಟಾದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎನ್ನುತ್ತಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !