4 ದಿನದಲ್ಲಿ  18.1 ಟನ್‌ ಮಾವು ಬಿಕರಿ- 9.75 ಲಕ್ಪ  ರೂ. ವಹಿವಾಟು

Team Udayavani, May 30, 2018, 5:01 PM IST

30-may-18.jpg

ಧಾರವಾಡ: ಇಲ್ಲಿಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕಳೆದ ನಾಲ್ಕು ದಿನಗಳ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮಂಗಳವಾರ ತೆರೆ ಬಿತ್ತು.

ಮೇ 26ರಿಂದ ಮೇ 28 ರವರೆಗೆ ಆಯೋಜಿಸಲಾಗಿತ್ತು. ಆದರೆ ಮೇ 28ರಂದು ಕರ್ನಾಟಕ ಬಂದ್‌ ಇದ್ದುದರಿಂದ ಹಿನ್ನಡೆ ಆಗಿದ್ದರಿಂದ ಮಂಗಳವಾರವೂ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ನಾಲ್ಕು ದಿನಗಳಲ್ಲಿ 18.1 ಟನ್‌ಗಳಷ್ಟು ಹಣ್ಣು ಮಾರಾಟ ಆಗಿದ್ದು, ಒಟ್ಟು 6086 ಡಜನ್‌ ಹಣ್ಣು ಮಾರಾಟ ಆಗುವ ಮೂಲಕ 9.75 ಲಕ್ಷ ರೂ.ಗಳಷ್ಟು ವ್ಯಾಪಾರ ವಹಿವಾಟು ಆಗಿದೆ. ಮೇಳದ ಕೊನೆಯ ದಿನವಾಗಿದ್ದ ಮಂಗಳವಾರ 4.6 ಟನ್‌ ಹಣ್ಣು ಮಾರಾಟ ಆಗಿದ್ದು, 1550 ಡಜನ್‌ ಹಣ್ಣು ಮಾರಾಟ ಆಗುವ ಮೂಲಕ 2.32 ಲಕ್ಷ ರೂ.ಗಳ ವಹಿವಾಟು ಆಗಿದೆ.

ಉತ್ತಮ ಪ್ರತಿಕ್ರಿಯೆ: ಮಾವು ಮೇಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ತಳಿಯ ಮಾವಿನ ಸಸಿಗಳ ಮಾರಾಟ ಏರ್ಪಡಿಸಲಾಗಿತ್ತು. ನಾಲ್ಕು ದಿನಗಳ ಅವಧಿಯಲ್ಲಿ 500 ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಸಸ್ಯಗಳು ಮಾರಾಟವಾದವು. ಸ್ಥಳದಲ್ಲಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತ ರೈತರಿಗೆ ಮಾವು ಬೆಳೆಸುವ ವಿಧಾನ
ಮತ್ತು ಪದ್ಧತಿ ಕುರಿತು ನಾಲ್ಕು ದಿನಗಳ ಕಾಲ ಅಗತ್ಯ ಮಾಹಿತಿ ನೀಡಿದರು.

ಬರೀ ಅಲ್ಫೋನ್ಸೋ ಮೇಳ: ಈ ವರ್ಷದ ಮಾವು ಮೇಳದಲ್ಲಿ ಅತೀ ಹೆಚ್ಚು ಮಾರಾಟವಾಗಿದ್ದು ಧಾರವಾಡದ ಅಲ್ಫೋನ್ಸೋ ತಳಿ ಮಾತ್ರ. ಕಳೆದ ವರ್ಷ ಇಲ್ಲಿ ಮಲ್ಲಿಕಾ, ಸಕ್ಕರೆ ಗುಟ್ಲಿ,ಕಲಮಿ, ರತ್ನಾಗಿರಿ ಸೇರಿದಂತೆ ವಿವಿಧ ತಳಿಯ ಮಾವುಗಳು ಮಾವು ಪ್ರಿಯರಿಗೆ ಲಭ್ಯವಾಗಿದ್ದವು. ಆದರೆ ಈ ವರ್ಷ ಮೇಳದ ಮೊದಲ ದಿನ ಹೊರತು ಪಡಿಸಿದರೆ ಉಳಿದ ಮೂರು ದಿನಗಳ ಕಲಾ ಬರೀ ಅಲ್ಫೋನ್ಸೋ ಮಾತ್ರ ಮಾರಾಟವಾಗಿದ್ದು ಕಂಡು ಬಂತು.

ಬಾವಲಿ ಮಾವಿನ ಕಾಯಿ ತಿನ್ನೋದಿಲ್ಲ
ನನಗ ಈಗ 76 ವರ್ಷ ತಮ್ಮಾ. ನಾವು ಹುಟ್ಟಿದಾಗಿನಿಂದ ನೋಡೇನಿ ಬಾವುಲಿ ಎಂದಾರ ಮಾವಿನ ಕಾಯಿ, ಹಣ್ಣು ತಿಂತೈತೇನ. ಮಂದಿ ಗಾಳಿ ಸುದ್ದಿ ನಂಬಿ ಮಾವಿನ ಹಣ್ಣು ತಿನ್ನೂದು ಬಿಟ್ಟರು. ಈ ಮೇಳದಾಗ ನಮ್ಮನ್ನ ಒಂದಿಷ್ಟು ಮಂದಿ ಚಿಕ್ಕಿ ಬಿದ್ದ ಹಣ್ಣಿಗೆ ಬಾವುಲಿ ತಿಂದತೇನು ? ಅಂತ ಕೇಳಿದ್ರು. ಇದರಿಂದ ವ್ಯಾಪಾರಕ್ಕೆ ಹೊಡತ ಕುಂತತ.
ರೇಣಕವ್ವ ತಳವಾರ, ಜೋಗೆಲ್ಲಾಪೂರ ಮಾವು ವ್ಯಾಪಾರಿ

ಹೆಚ್ಚಾಗದ ಮಾರಾಟ
ಕಳೆದ ವರ್ಷ ಮೂರು ದಿನಗಳ ಕಾಲ ನಡೆದ ಮಾವು ಮೇಳದಲ್ಲಿ 5000ಕ್ಕೂ ಅಧಿಕ ಡಜನ್‌ ಹಣ್ಣು ಮಾರಾಟವಾಗಿತ್ತು. ಆದರೆ ಈ ವರ್ಷ ನಾಲ್ಕು ದಿನಗಳ ಕಾಲ ನಡೆದರೂ ಬರೀ 6086 ಡಜನ್‌ ಹಣ್ಣು ಮಾರಾಟವಾಗಿದೆ. ಹೀಗಾಗಿ ಹಣ್ಣು ಮಾರಾಟಕ್ಕೆ ಬಂದ ಮಾವು ಬೆಳೆಗಾರರು ಇದರಿಂದ ಬೇಸರಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತೆ, ಕಂತೆ ವೈರಸ್‌ನಿಂದ ಸುಸ್ತಾಗಿ ಹೋಗಿದ್ದಾರೆ.

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.