ಕುಮಾರಸ್ವಾಮಿಗೆ ಆತಂಕಬೇಡ: ಪರಮೇಶ್ವರ್
Team Udayavani, Jun 5, 2018, 6:10 AM IST
ಬೆಂಗಳೂರು:ಸಮ್ಮಿಶ್ರ ಸರ್ಕಾರದಲ್ಲಿ ಐದು ವರ್ಷ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪುನರುಚ್ಚರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಕುರಿತು ನಗರದ ಶಾಸಕರು ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಹೈ ಕಮಾಂಡ್ ಈಗಾಗಲೇ ಸ್ಪಷ್ಟಪಡಿಸಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ನಾವು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇವೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಹೇಳಿದರು.
ಇದೇ ವೇಳೆ, ಖಾತೆ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿಯೂ ಅಸಮಾಧಾನ ಇಲ್ಲ. ರಾಹುಲ್ ಗಾಂಧಿ ವಿದೇಶದಿಂದ ಬಂದ ತಕ್ಷಣ ದೆಹಲಿಗೆ ತೆರಳಿ ಅವರೊಂದಿಗೆ ಚರ್ಚಿಸುತ್ತೇವೆ. ನೂತನ ಸಚಿವರು ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆಯೋ ಗೊತ್ತಿಲ್ಲ. ಕೆಲವರು ಬಾಗಲಕೋಟೆಯ ಅವರ ನಿವಾಸದ ಎದುರು ಪ್ರತಿಭಟನೆ ಮಾಡಿದ್ದರು. ಅದರಿಂದ ಅವರಿಗೆ ಬೇಸರ ಆಗಿರಬಹುದು. ಈ ಬಗ್ಗೆ ಅವರ ಬಳಿ ಮಾತನಾಡುತ್ತೇನೆ. ಅವರಿಗೆ ಬೇಸರವಾಗಿದ್ದರೆ ಸಮಾಧಾನ ಪಡಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ
CM ವಿರುದ್ಧ ನಕಲಿ ಪೋಸ್ಟ್: ವಿಕ್ರಮ್ ಹೆಗ್ಡೆ, ಗಿಳಿಯಾರ್ ಬಂಧನಕ್ಕೆ ತಾತ್ಕಾಲಿಕ ತಡೆ
Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್
MUST WATCH
ಹೊಸ ಸೇರ್ಪಡೆ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ
IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್
Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ
T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿನ್