ಭಾರತದ ತೆರಿಗೆ ನೀತಿಗೆ ಕಿಡಿ
Team Udayavani, Jun 12, 2018, 6:00 AM IST
ವಾಷಿಂಗ್ಟನ್: ಈ ಹಿಂದೆಯೇ ಹಲವು ಬಾರಿ ಭಾರತದ ತೆರಿಗೆ ನೀತಿಯನ್ನು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೂಮ್ಮೆ ಕಿಡಿಕಾರಿದ್ದಾರೆ. ಹಲವು ದೇಶಗಳು ಅಮೆರಿಕವನ್ನು ದರೋಡೆ ಮಾಡುತ್ತಿವೆ. ಇದು ಕೇವಲ ಜಿ7 ದೇಶಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಭಾರತದಂತಹ ದೇಶಗಳು ನಮ್ಮ ಸಾಮಗ್ರಿಗಳ ಮೇಲೆ ಶೇ. 100ರಷ್ಟು ತೆರಿಗೆ ವಿಧಿಸುತ್ತಿವೆ. ಆದರೆ ನಾವು ಅವರ ಸಾಮಗ್ರಿಗಳಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಹಲವು ದೇಶಗಳ ಜೊತೆ ಈ ಸಂಬಂಧ ನಾವು ಮಾತುಕತೆ ನಡೆಸುತ್ತಿದ್ದೇವೆ. ಈ ತೆರಿಗೆ ವಿಧಿಸುವಿಕೆಯನ್ನು ನಿಲ್ಲಿಸಬೇಕು. ತಪ್ಪಿ ದರೆ, ನಾವು ವಹಿವಾಟು ನಿಲ್ಲಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಹಿಂದೆ ಹಾರ್ಲೆ ಡೆವಿಡ್ಸನ್ ಬೈಕ್ಗಳಿಗೆ ಭಾರತದಲ್ಲಿ ತೆರಿಗೆ ವಿಧಿಸುತ್ತಿದ್ದ ಬಗ್ಗೆ ಟ್ರಂಪ್ ಉಲ್ಲೇಖೀಸಿದ್ದರು.