ಜೆಡಬ್ಲ್ಯು ಮುಖಪುಟದಲ್ಲಿ ಸಾನಿಯಾ ಮಿರ್ಜಾ
Team Udayavani, Jul 10, 2018, 6:00 AM IST
ಹೊಸದಿಲ್ಲಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಇದೀಗ ಖ್ಯಾತ ಫ್ಯಾಶನ್ ನಿಯತ ಕಾಲಿಕೆ “ಜೆಡಬ್ಲ್ಯು’ನ ಮುಖಪುಟದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ತಾಯ್ತನ ವಿಚಾರದಡಿ ರೂಪಿಸ ಲಾಗಿರುವ ಈ ಮುಖಪುಟದಲ್ಲಿ ಅವರ ಫೋಟೋದೊಂದಿಗೆ, “ಗರ್ಭಿಣಿ
ಯಾಗುವುದೆಂದರೆ ಅದು ಸ್ವಾತಂತ್ರ್ಯಕ್ಕೆ ಅಡ್ಡಿಯಾದಂತಲ್ಲ. ಅದು ಮಹಿಳೆ ಯರನ್ನು ಮತ್ತಷ್ಟು ಸಶಕ್ತೀಕರಣ ಗೊಳಿಸುತ್ತದೆ ಹಾಗೂ ಅವರಲ್ಲಿ ಸ್ಫೂರ್ತಿ ತುಂಬುತ್ತದೆ’ ಎಂಬ ಅವರ ಮಾತುಗಳನ್ನು ಉಲ್ಲೇಖೀಸಲಾಗಿದೆ.
ಮುಖಪುಟ ಲೇಖನದಲ್ಲಿ ಸಾನಿಯಾ ಅವರ ಸಂದರ್ಶನದ ಸಾರಾಂಶ ನೀಡಲಾಗಿದ್ದು, ಇದರಲ್ಲಿ ತಾಯ್ತನದ ಬಗ್ಗೆ ಸಾನಿಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.