ಮೊಹಮ್ಮದ್ ಶಮೀ ಪರಿತ್ಯಕ್ತ ಪತ್ನಿ ಬಾಲಿವುಡ್ ಪ್ರವೇಶಕ್ಕೆ ಸಜ್ಜು
Team Udayavani, Jul 13, 2018, 11:40 AM IST
ಮುಂಬಯಿ : ಭಾರತೀಯ ಕ್ರಿಕೆಟ್ ತಂಡದ ವೇಗದ ಎಸೆಗಾರ ಮೊಹಮ್ಮದ್ ಶಮೀ ಅವರ ಪರಿತ್ಯಕ್ತ ಪತ್ನಿ ಹಸೀನ್ ಜಹಾನ್ ಅವರು ಇದೀಗ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಆಕೆ ಪತ್ರಕರ್ತೆಯಾಗಿ ನಟಿಸಲಿದ್ದಾರೆ.
ಮೊಹಮ್ಮದ್ ಶಮೀ ವಿರುದ್ಧ ಹಸೀನ್ ಜಹಾನ್ ಅವರು ಈ ಹಿಂದೆ ನಾನಾ ಬಗೆಯ ಮಾನಹಾನಿಕರ ಆರೋಪಗಳನ್ನು ಮಾಡಿ ವಿವಾದದ ಕೇಂದ್ರಬಿಂದುವಾಗಿದ್ದರು. ಮೊಹಮ್ಮದ್ ಶಮೀ ನನಗೆ ಚಿತ್ರಹಿಂಸೆ ನೀಡಿದ್ದಾರೆ; ವಂಚನೆ ಮಾಡಿದ್ದಾರೆ; ವಿವಾಹೇತರ ಸಂಬಂಧ ಹೊಂದಿದ್ದಾರೆ; ವಿದೇಶದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ಅಪಾರ ಪ್ರಮಾಣದ ಲಂಚದ ಹಣ ಪಡೆದುಕೊಂಡಿದ್ದಾರೆ ಮುಂತಾಗಿ ಅನೇಕ ಆರೋಪಗಳನ್ನು ಹಸೀನ್ ಮಾಡಿದ್ದರು.
ಹಸೀನ್ ಜಹಾನ್ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿರುವ ವಿಷಯವನ್ನು ಬಹಿರಂಗಪಡಿಸಿರುವ ಎಎನ್ಐ ಸುದ್ದಿ ಸಂಸ್ಥೆಯ ಪ್ರಕಾರ ಹಸೀನ್ ನಟಿಸುವ ಚಿತ್ರವನ್ನು ಅಮ್ಜದ್ ಖಾನ್ ನಿರ್ದೇಶಿಸಲಿದ್ದಾರೆ. ಅಂದ ಹಾಗೆ ಹಸೀನ್ ಓರ್ವ ಮಾಜಿ ಮಾಡೆಲ್. ಶಮೀ ಯಿಂದ ದೂರವಾದ ಬಳಿಕ ನಾನು ಮತ್ತೆ ಕ್ಯಾಮೆರಾ ಮುಂದೆ ನಿಲ್ಲುವ ನಿರ್ಧಾರ ತಳೆದೆ ಎಂದು ಹಸೀನ್ ಹೇಳಿದ್ದಾಳೆ.
“ನಾನು ಮತ್ತೆ ಮಾಡೆಲಿಂಗ್ಗೆ ಮರಳಲು ನಿರ್ಧಸಿದಾಗ ನನಗೆ ಮುಂಬಯಿಯಿಂದ ಕರೆ ಬಂತು. ನಾನಲ್ಲಿಗೆ ಹೋದೆ; ಕೆಲವು ಮಾಡೆಲಿಂಗ್ ಮತ್ತು ಕಿರು ಚಿತ್ರಗಳ ಶೂಟಿಂಗ್ನಲ್ಲಿ ಪಾಲ್ಗೊಂಡೆ; ಅದಾಗಿ ಅಮ್ಜದ್ ಖಾನ್ ಸರ್ ನನ್ನನ್ನು ತಮ್ಮ ಹೊಸ ಚಿತ್ರಕ್ಕೆ ತೆಗೆದುಕೊಳ್ಳುವ ಆಫರ್ ನೀಡಿದರು; ನಾನು ಒಪ್ಪಿಕೊಂಡೆ’ ಎಂದು ಹಸೀನ್ ಜಹಾನ್ ಎಎನ್ಐ ಗೆ ಹೇಳಿದ್ದಾಳೆ.
ಈ ವರ್ಷ ಅಕ್ಟೋಬರ್ನಲ್ಲಿ ಚಿತ್ರೀಕರಣ ಆರಂಭವಾಗುವ ತನ್ನ ಹೊಸ ಚಿತ್ರದ ಬಗ್ಗೆ ತಾನು ತುಂಬಾ ಎಕ್ಸೆ„ಟ್ ಆಗಿದ್ದೇನೆ ಎಂದು ಹಸೀನ್ ಹೇಳಿಕೊಂಡಿದ್ದಾಳೆ.
ಪತಿ ಮೊಹಮ್ಮದ್ ಶಮೀ ವಿರುದ್ಧ ಹೂಡಿರುವ ಕೌಟುಂಬಿಕ ಹಿಂಸೆ ಕೇಸಿನಲ್ಲಿ ಹಸೀನ್ ಜಹಾನ್ ತಿಂಗಳಿಗೆ 10 ಲಕ್ಷ ರೂ. ಪರಿಹಾರವನ್ನು ಆಗ್ರಹಿಸಿದ್ದಾಳೆ. ಆದರೆ ಶಮೀ “ನಾನು ಅಮಾಯಕ, ನಿರಪರಾಧಿ, ನನ್ನ ವಿರುದ್ಧ ಹಸೀನ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು, ನಿರಾಧಾರ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ