ವಾಣಿಜ್ಯ ವಾಹನ ಮಾಲೀಕ-ಚಾಲಕರ ಪ್ರತಿಭಟನೆ


Team Udayavani, Jul 24, 2018, 3:39 PM IST

dvg-1.jpg

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಶುಕ್ರವಾರದಿಂದ (ಜು. 20) ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ವಾಣಿಜ್ಯ ವಾಹನಗಳ ಮಾಲೀಕರು, ಚಾಲಕರು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್‌, ಪೆಟ್ರೋಲ್‌ ಸೇರ್ಪಡೆ, ದರ ಇಳಿಕೆ, ಏಕರೂಪ ದರ ನಿಗದಿ, ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಮೊತ್ತ ಕಡಿತ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊàರ್ಟ್‌ ಏಜೆಂಟರ ಸಂಘದ ನೇತೃತ್ವದಲ್ಲಿ ಬಸ್‌, ಮಿನಿಗೂಡ್ಸ್‌, 3 ಮತ್ತು 4 ಚಕ್ರಗಳ ವಾಹನ, ಟ್ಯಾಕ್ಸಿ ಮಾಲೀಕರು, ಚಾಲಕರು ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. 

ಪ್ರತಿ ದಿನ ಡೀಸೆಲ್‌ ಬೆಲೆಯಲ್ಲಿ ಏರಿಳಿತದ ಪರಿಣಾಮ ಬಾಡಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜಿಎಸ್‌ಟಿಯಡಿ ಡೀಸೆಲ್‌, ಪೆಟ್ರೋಲ್‌ ಸೇರಿಸಿ, ಪ್ರತಿ 3 ತಿಂಗಳಿಗೊಮ್ಮೆ ದರ ಪರಿಶೀಲನಾ ಪದ್ಧತಿ ಜಾರಿಗೊಳಿಸಬೇಕು. ಬಾಡಿಗೆ ಇಲ್ಲದೆ ತೀವ್ರ ಸಮಸ್ಯೆ ಅನುಭವಿಸುತ್ತಿರುವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದೇಶದ 427 ಟೋಲ್‌ಗ‌ಳಲ್ಲಿ 67 ಖಾಸಗಿ ಕಂಪನಿಗಳ, 360 ಸರ್ಕಾರದ ಅಧೀನದಲ್ಲಿವೆ. ವರ್ಷಕ್ಕೆ 427 ಟೋಲ್‌ಗ‌ಳಿಂದ 17 ಸಾವಿರ ಕೋಟಿ ಶುಲ್ಕ ವಸೂಲಾಗುತ್ತದೆ. ಲಾರಿ  ಲಿಕರ ಮತ್ತು ಟ್ರಾನ್ಸ್‌ಪೊರ್ಟ್‌ ಏಜೆಂಟರ ಸಂಘದ ಮೂಲಕವೇ
ವರ್ಷಕ್ಕೆ 20 ಸಾವಿರ ಕೋಟಿ ಟೋಲ್‌ ಶುಲ್ಕ ಪಾವತಿ ಮಾಡಲಾಗುತ್ತಿದೆ. ಬಸ್‌, ಲಾರಿ, ಕಾರು ಎಲ್ಲಾ ವಾಹನಗಳಿಂದ ಟೋಲ್‌ ಸಂಗ್ರಹ ನಿಲ್ಲಿಸುವ ಮೂಲಕ ಟೋಲ್‌ವುುಕ್ತ ಭಾರತ ಮಾಡಬೇಕು ಎಂದು ಒತ್ತಾಯಿಸಿದರು.

ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಅತಿ ಹೆಚ್ಚಾಗಿದೆ. ವಿಮಾ ಮೊತ್ತದ ಹೆಚ್ಚಳಕ್ಕೆ ಕಾರಣ ಕೇಳಿದರೆ ನಷ್ಟದ ಬಗ್ಗೆ ಹೇಳುತ್ತಾರೆ. ವಿಮಾ ಕ್ಷೇತ್ರವೇ ನಷ್ಟದಲ್ಲಿರುವಾಗ ಹೊಸ ಕಂಪನಿಗಳು ಬರುವುದು ನೋಡಿದರೆ ವಿಮಾ ಕಂಪನಿಗಳ ಲಾಬಿ ಗೊತ್ತಾಗುತ್ತದೆ. ಥರ್ಡ್‌ ಪಾರ್ಟಿ ವಿಮಾ ಪಾಲಿಸಿ ಕಡಿಮೆ ಮಾಡಬೇಕು. ಲಾರಿಗಳ ಮಾದರಿಯಲ್ಲೇ ಪ್ರವಾಸಿ ಬಸ್‌ಗಳಿಗೂ ರಾಷ್ಟ್ರೀಯ ಪರವಾನಿಗೆ ನೀಡಬೇಕು. ಟಿಡಿಎಸ್‌ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. 

ಪೂರ್ವಭಾವಿ ಆದಾಯ (ಆದಾಯ ತೆರಿಗೆ ನಿಯಮ-44) ಕಾಯ್ದೆ ಪರಿವರ್ತನೆ, ಈ-ವೇ ಬಿಲ್‌ ಸಮಸ್ಯೆ ನಿವಾರಣೆ, ಮುಂಬೈನ ಜವಾಹರ್‌ ಲಾಲ್‌ ನೆಹರು ಪೋರ್ಟ್‌ ಟ್ರಸ್ಟ್‌ ನೂತನವಾಗಿ ಪ್ರಕಟಿಸಿರುವ ನೇರ ಪೋರ್ಟ್‌ ಡೆಲಿವಿರಿ ಪದ್ಧತಿ ರದ್ದು ಮತ್ತು ಬಂದರುಗಳಲ್ಲಿ ಆಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಲಾರಿ ಮಾಲೀಕರ ಮತ್ತು ಟ್ರಾನ್ಸ್‌ಪೊರ್ಟ್‌ ಏಜೆಂಟರ ಸಂಘದ ಗೌರವ ಅಧ್ಯಕ್ಷ ಜಿ. ನಾಗೋಜಿರಾವ್‌, ಉಪಾಧ್ಯಕ್ಷ ಮಹಾಂತೇಶ್‌ ಒಣರೊಟ್ಟಿ, ಖಜಾಂಚಿ ಮಲ್ಲಿಕಾರ್ಜುನ್‌, ಖಜಾಂಚಿ ಭೀಮಪ್ಪ, ಸೋಗಿ ಮಹಾಂತೇಶ್‌, ಇಮಾಂ, ಸ್ವಾಮಿ, ಸಿದ್ದೇಶ್‌, ಮಹಾಂತೇಶ್‌, ಜಯಣ್ಣ, 3 ಮತ್ತು 4 ಚಕ್ರಗಳ ವಾಹನಗಳ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಪಳನಿಸ್ವಾಮಿ ಇತರರು ಇದ್ದರು.

ಟಾಪ್ ನ್ಯೂಸ್

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Kharge 2

Congress ವರಿಷ್ಠರ ಸೂಚನೆಯಂತೆ ವರ್ತಿಸಿ: ಎಂಪಿ ಅಧೀರ್‌ಗೆ ಖರ್ಗೆ ತಾಕೀತು

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

crime

Davanagere; ಪಾರ್ಟಿ ಮಾಡಲು ಹೋಗಿದ್ದ ಯುವಕನ ಕೊಲೆ!

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

rishi-sunak

British ದೊರೆಗಿಂತ ಪಿಎಂ ರಿಷಿ ದಂಪತಿ ಶ್ರೀಮಂತರು!

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.