ಪ್ರವಾಸಕ್ಕೆ ತೆರಳಿದ ಚಿತ್ರ ಹಾಕಿ ಟೀಕೆಗೊಳಗಾದ ಪಾಂಡ್ಯ
Team Udayavani, Aug 19, 2018, 10:25 AM IST
ಲಂಡನ್: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ವಿಫಲವಾಗಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಅವರು ಇಂಗ್ಲೆಂಡ್ನಲ್ಲಿ ಪ್ರವಾಸಕ್ಕೆ ತೆರಳಿದ ಫೋಟೋವೊಂದನ್ನು ಟ್ವಿಟರ್ನಲ್ಲಿ ಪ್ರಕಟಿಸಿ ಮತ್ತಷ್ಟು ಬೈಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. 4 ಇನ್ನಿಂಗ್ಸ್ಗಳಿಂದ ಕೇವಲ 90 ರನ್ ಮತ್ತು 2 ವಿಕೆಟ್ ಪಡೆದಿದ್ದಾರೆ. ಇದರಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಿಟ್ಟಾಗಿದ್ದರು. ಹಾರ್ದಿಕ್ ಆಲ್ರೌಂಡರ್ ಪಟ್ಟವನ್ನು ಮೊದಲು ಹಿಂದಕ್ಕೆ ತೆಗೆದುಕೊಳ್ಳುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ನಲ್ಲಿ ಪ್ರವಾಸ ತೆರಳಿದ ಫೋಟೋ ಪ್ರಕಟಿಸಿದ್ದಾರೆ.
ಇದರಿಂದ ಅಭಿಮಾನಿಗಳು ಕೆರಳಿದ್ದಾರೆ. “ನೀವು ಇಂಗ್ಲೆಂಡ್ಗೆ ತೆರಳಿರುವುದು ಪ್ರವಾಸ ಮಾಡಲಿಕ್ಕಲ್ಲ. ಭಾರತ ತಂಡವನ್ನು ಪ್ರತಿನಿಧಿಸಲು. ಅದನ್ನೇ ಮರೆತಿದ್ದೀರಿ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. “ಹೀಗೆಲ್ಲ ತಿರುಗಾಡುವುದನ್ನು ಬಿಟ್ಟು ಕ್ರಿಕೆಟ್ ಕಡೆಗೆ ಗಮನ ಕೊಡಿ’ ಎಂಬುದು ಮತ್ತೂಂದು ಟ್ವೀಟ್. ಫೋಟೋ ಶೂಟ್ ಮಾಡಿಕೊಳ್ಳುವುದಕ್ಕಿಂತ ಅಭ್ಯಾಸ ಮಾಡುವುದು ಮುಖ್ಯ ಎಂದು ಮತ್ತೂಬ್ಬರು ಕುಟುಕಿದ್ದಾರೆ. ಹೀಗೆ ಅನೇಕ ಮಂದಿ ಟ್ವಿಟರ್ನಲ್ಲಿ ಪಾಂಡ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ