ಐಸಿಸ್ನ ಬಾಗ್ಧಾದಿ ಸತ್ತಿಲ್ಲ
Team Udayavani, Aug 24, 2018, 8:55 AM IST
ಹೊಸದಿಲ್ಲಿ: ಐಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬೂಬಕ್ಕರ್ ಅಲ್ ಬಾಗ್ಧಾದಿ ಬದುಕಿದ್ದಾನೆ. ಬಕ್ರೀದ್ ಶುಭಾಶಯ ಕೋರಿ ಆತ ಹೊಸ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆತ ಸತ್ತಿಲ್ಲ ಎನ್ನುವುದು ಸಾಬೀತಾದಂತಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಸಿರಿಯಾದ ರಖಾದಲ್ಲಿ ರಷ್ಯಾ ಪಡೆ ನಡೆಸಿದ ವೈಮಾನಿಕ ದಾಳಿಗೆ ಬಾಗ್ಧಾದಿ ಬಲಿಯಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ, ಗುರುವಾರ ಬಿಡುಗಡೆಯಾದ ಆಡಿಯೋದಲ್ಲಿ ಆತ ಅರೆಬಿಕ್ ಭಾಷೆಯಲ್ಲಿ ಮಾತನಾಡಿದ್ದು, ಹೋರಾಟವು ಒಂದು ನಗರವನ್ನು ವಶಪಡೆದ ಮಾತ್ರಕ್ಕೆ ಯಶಸ್ವಿ ಆಗುವುದಿಲ್ಲ. ಗೌರವಯುತವಾಗಿ ಬದುಕಬೇಕೆಂದರೆ ಹೋರಾಟ ನಡೆಸಲೇಬೇಕು ಎಂದು ಹೇಳಿದ್ದಾನೆ.