“ಚಿನ್ನ ಕೊಡಗಿನ ನಿರಾಶ್ರಿತರಿಗೆ ಅರ್ಪಣೆ’


Team Udayavani, Sep 1, 2018, 9:45 AM IST

poovamma.jpg

ಮಂಗಳೂರು: “ಕೊಡಗಿನಲ್ಲಿ ಸಂಭವಿಸಿದ ಮಹಾಮಳೆಯಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ನೆರೆಯಿಂದ ತತ್ತರಿಸಿರುವ ನನ್ನ ಊರಿನ ಜನರು ಈಗ ದುಃಖದಲ್ಲಿದ್ದಾರೆ. ಹೀಗಾಗಿ ಏಶ್ಯನ್‌ ಗೇಮ್ಸ್‌ನಲ್ಲಿ ನಾನು ಗೆದ್ದಿ ರುವ ಈ ಚಿನ್ನದ ಪದಕವನ್ನು ಈ ನನ್ನ ಕೊಡಗಿನ ನಿರಾಶ್ರಿತರಿಗಾಗಿ ಸಮರ್ಪಿಸುತ್ತಿದ್ದೇನೆ’. 

ಇದು ಗೇಮ್ಸ್‌ನ ವನಿತೆಯರ 4ಗಿ400 ಮೀ. ರಿಲೇಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಕ್ರೀಡಾಪಟು ಪೂವಮ್ಮ ಅವರ ಮಾತು. ಪೂವಮ್ಮ ಜಕಾರ್ತಾದಿಂದ ದೂರವಾಣಿ ಮೂಲಕ “ಉದಯವಾಣಿ’ ಜತೆ ಮಾತನಾಡಿ ಚಿನ್ನದ ಓಟದ ಬಗ್ಗೆ ಅನುಭವ ಹಂಚಿಕೊಂಡರು. 

ಪದಕ ಗೆದ್ದ ಸಂಭ್ರಮ ಹೇಗಿತ್ತು?
ತುಂಬಾನೇ ಖುಷಿಯಾಗುತ್ತಿದೆ. ಈ ಪ್ರಶಸ್ತಿಯನ್ನು ಕೊಡಗಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅರ್ಪಿಸುತ್ತೇನೆ. ನನ್ನ ಸಾಧನೆಗೆ ತಂದೆ ರಾಜು, ತಾಯಿ ಜಾಜಿ, ಸಹೋದರ ಮಂಜು, ಸಹೋದರಿ ಲಿಖೀತಾ ಸಹಿತ ಕೋಚ್‌ ಅವರ ಬೆಂಬಲವೂ ಕಾರಣವಾಗಿದೆ.  

ಚಿನ್ನ ಗೆಲ್ಲುವ ನಿರೀಕ್ಷೆ ಇತ್ತಾ?
ಖಂಡಿತಾ ಇತ್ತು. ತಂಡ ಚಿನ್ನ ಗೆಲ್ಲುವುದರ ಹಿಂದೆ ಹಿಮಾ ದಾಸ್‌, ಸರಿತಾ ಬೆನ್‌ ಮತ್ತು ವಿಸ್ಮಯಾ ಕೊರೋತ್‌ ಅವರ ಪಾತ್ರವೂ ಹಿರಿದು.

ಅಭ್ಯಾಸ ಯಾವ ರೀತಿ ಇತ್ತು?
ದಿನಂಪ್ರತಿ ಬೆಳಗ್ಗೆ ಮತ್ತು ಸಂಜೆ 3 ಗಂಟೆ ಅಭ್ಯಾಸ ಮಾಡು ತ್ತಿದ್ದೆವು. ನನ್ನ ತರಬೇತುದಾರರು ವಿಶ್ವಾಸ ತುಂಬುತ್ತಿದ್ದರು.

ಕೊಡಗಿನ ಪರಿಸ್ಥಿತಿಯ ಬಗ್ಗೆ ?
ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ಮೊನ್ನೆಯ ಅನಾಹುತಕ್ಕೆ ನಮ್ಮ ಕೆಲವು ಸಂಬಂಧಿಕರ ಮನೆಗಳು ನೆಲ ಸಮವಾಗಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುತ್ತೇನೆ.

ಕ್ರೀಡಾಪಟುಗಳಿಗೆ ನಿಮ್ಮ ಸಲಹೆ? 
ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಜೀವನದಲ್ಲಿ ಗುರಿ, ಶಿಸ್ತು ಇದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಂಗಳೂರಿನಲ್ಲಿ ಬೆಳೆದ ನಾನೇ ಸಾಕ್ಷಿ. ಕರಾವಳಿ ನನಗಿಷ್ಟವಾದ ಊರು. ಇಲ್ಲಿನ ಕೋರಿ-ರೊಟ್ಟಿ ಎಂದರೆ ಪಂಚಪ್ರಾಣ.

4 ವರ್ಷವಾದರೂ ಸೈಟ್‌ ಸಿಕ್ಕಿಲ್ಲ
ಮಗಳು ಚಿನ್ನ ಜಯಿಸಿದ್ದಕ್ಕೆ ಪ್ರತಿ ಕ್ರಿಯಿಸಿರುವ ಪೂವಮ್ಮ ಅವರ ತಂದೆ ರಾಜು “2014ರಲ್ಲಿ ಕಾಮನ್‌ವೆಲ್ತ್‌ ಮತ್ತು ಏಶ್ಯಾಡ್‌ನ‌ಲ್ಲಿ ಪದಕ ಗಳಿಸಿದ ಎಲ್ಲ ಆ್ಯತ್ಲೀಟ್‌ಗಳಿಗೆ 2 ತಿಂಗಳೊಳಗೆ ಸರಕಾರದಿಂದ ನಿವೇಶನ ನೀಡುವ ಕುರಿತು ಅಂದಿನ ಸಿಎಂ ಸಿದ್ದರಾಮಯ್ಯ, ಕ್ರೀಡಾ ಸಚಿವ ಅಭಯಚಂದ್ರ ಜೈನ್‌ ಭರವಸೆ ನೀಡಿದ್ದರು. ಆದರೆ 4 ವರ್ಷ ಕಳೆದರೂ ಸರಕಾರದಿಂದ ನಿವೇಶನ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕಾಲು ನೋವಿದ್ದರೂ ಓಡಿದ್ದೆ..!
“ಕೆಲವು ದಿನಗಳ ಹಿಂದೆ ನಾನು ಅಭ್ಯಾಸ ನಡೆಸುತ್ತಿರುವ ಸಮಯದಲ್ಲಿ ಕಾಲು ನೋವಾಗಿತ್ತು. ಏಶ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸುವಾಗಲೂ ಕಾಲು ನೋವು ಹಾಗೆಯೇ ಇತ್ತು. ಆದರೆ ಭಾರತಕ್ಕೆ ಪದಕ ತಂದು ಕೊಡ ಬೇಕೆಂಬ ಛಲದ ಮುಂದೆ ನೋವು ದೊಡ್ಡದಲ್ಲ. ಕೊನೆಗೂ ಆ ಛಲದಲ್ಲಿ ಯಶಸ್ವಿಯಾಗಿರುವುದಕ್ಕೆ ತುಂಬಾ ಖುಷಿಯಿದೆ’ ಎನ್ನುತ್ತಾರೆ ಪೂವಮ್ಮ.

ಮುಂದಿನ ಗುರಿ ?
ಮುಂದಿನ ವರ್ಷ ವಿಶ್ವ ಚಾಂಪಿಯನ್‌ಶಿಪ್‌ ಹಾಗೂ 2020ರಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಗುರಿ ಹೊಂದಿದ್ದೇನೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.