ತ್ರಿಭಾಷಾ ಅನುಷ್ಕ

Team Udayavani, Sep 7, 2018, 6:00 AM IST

25.jpg

“ಡೇಂಜರ್‌ ಝೋನ್‌’ ಹಾಗೂ “ನಿಶ್ಯದ್ಧ-2′ ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್‌ ಕುಮಾರ್‌ ಈಗ ಸದ್ದಿಲ್ಲದೇ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಅದು “ಅನುಷ್ಕ’. ದೇವರಾಜ್‌ ಕುಮಾರ್‌ “ಅನುಷ್ಕ’ ಎಂಬ ಸಿನಿಮಾವೊಂದನ್ನು ಸದ್ದಿಲ್ಲದೇ ಮಾಡಿದ್ದಾರೆ. ಇದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದ್ದು, ಅಮೃತಾ ಅಯ್ಯರ್‌ ಈ ಚಿತ್ರದ ನಾಯಕಿ. ರೂಪೇಶ್‌ ಶೆಟ್ಟಿ ನಾಯಕ. ಎಲ್ಲಾ ಓಕೆ, “ಅನುಷ್ಕ’ದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ನಿರ್ದೇಶಕ ದೇವರಾಜ್‌ ಕುಮಾರ್‌ ಹೇಳುವಂತೆ ಚಿತ್ರದ ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆಯಂತೆ. ಅಂತಿಮವಾಗಿ ಮೂರು ಟ್ರ್ಯಾಕ್‌ಗಳಿಗೂ ಲಿಂಕ್‌ ಸಿಗಲಿದೆ ಎನ್ನುತ್ತಾರೆ. ತನ್ನ ಸಾಮ್ರಾಜ್ಯ, ಅಲ್ಲಿನ ಜನರನ್ನು ರಕ್ಷಿಸುವ ರಾಣಿಯ ಕಥೆ, ಮಧುಚಂದ್ರಕ್ಕೆ ಬಂದ ನವದಂಪತಿ ಹಾಗೂ ಸಮಾಜದಲ್ಲಿ ನಡೆದಂತಹ ನೈಜ ಘಟನೆ … 

ಹೀಗೆ ಮೂರು ಟ್ರ್ಯಾಕ್‌ಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಂತೆ. ಮೂರು ಟ್ರ್ಯಾಕ್‌ಗಳಲ್ಲೂ ಅಮೃತಾ ನಟಿಸುತ್ತಿದ್ದು, ಇದು ನಾಯಕಿ ಪ್ರಧಾನ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮಾರು ಮೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆಯಂತೆ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ರೂಪೇಶ್‌ ಗೆ ಮೂರನೇ ಬಾರಿಗೆ ದೇವರಾಜ್‌ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ. ಜೊತೆಗೆ ಫಾರಿನ್‌ನಲ್ಲಿ
ಚಿತ್ರೀಕರಣವಾದ ಅವರ ಮೊದಲ ಸಿನಿಮಾ ಕೂಡಾ ಇದಂತೆ. “ನನ್ನ ಕೆರಿಯರ್‌ನಲ್ಲಿ ಇದು ಹೊಸ ಬಗೆಯ ಚಿತ್ರ. ದೇವರಾಜ್‌ ಈ ಹಿಂದಿನ ಎರಡು ಸಿನಿಮಾದಲ್ಲಿ ವಿಭಿನ್ನ ಪಾತ್ರ ನೀಡಿದ್ದರು. ಈಗ ಮೂರನೇ ಸಿನಿಮಾದಲ್ಲೂ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ರೂಪೇಶ್‌. ಈಗಾಗಲೇ “ನಾಕುಮುಖ’ ಸಿನಿಮಾದಲ್ಲಿ ನಟಿಸಿರುವ ಅಮೃತಾಗೆ ಈ ಸಿನಿಮಾದಲ್ಲಿ ದೊಡ್ಡ ಪಾತ್ರ ಸಿಕ್ಕಿದೆಯಂತೆ. ಮೂರು ಶೇಡ್‌ನ‌ಲ್ಲಿ
ಸಾಗುವ ಪಾತ್ರ ಇದಾಗಿದ್ದು, ಪ್ರಾಣ ಒತ್ತೆ ಇಟ್ಟು ತನ್ನ ಜನರನ್ನು ರಕ್ಷಿಸಲು ಹೋರಾಡುವ ರಾಣಿಯಾಗಿಯೂ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಆ್ಯಕ್ಷನ್‌ ದೃಶ್ಯಗಳು ಇದ್ದು, ತಂಡದ ಸಹಕಾರದಿಂದ ಮಾಡಿದ್ದಾಗಿ ಹೇಳಿಕೊಂಡರು. ಉಳಿದಂತೆ ಚಿತ್ರದಲ್ಲಿ “ಕಡ್ಡಿಪುಡಿ’ ಕಾಂತರಾಜು ಹಾಗೂ ಬಲರಾಜು ವಾಡಿ ನಟಿಸಿದ್ದಾರೆ. ಚಿತ್ರವನ್ನು ಎಸ್‌.ಕೆ.ಗಂಗಾಧರ್‌ ನಿರ್ಮಿಸುತ್ತಿದ್ದು, ವೀನಸ್‌ ಮೂರ್ತಿ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.