ಸ್ವಚ್ಛ ಜಪಾನ್‌


Team Udayavani, Sep 9, 2018, 6:00 AM IST

x-2.jpg

ಸ್ವಚ್ಛತೆ ಎನ್ನುವುದು ವೈಯುಕ್ತಿಕವಾಗಿ ಮೂಡುವಂತಹ ಒಂದು ಗುಣ. ಇದನ್ನು ಹುಟ್ಟಿನಿಂದಲೇ ಜಪಾನೀಯರು ರೂಢಿಸಿಕೊಂಡು ಬಿಟ್ಟಿದ್ದಾರೆ. ಅಲ್ಲಿ ಇವರಿಗೆ ಯಾವ ಸರಕಾರವಾಗಲಿ, ಸಂಘಸಂಸ್ಥೆಗಳಾಗಲಿ ಹೇಳಿಕೊಡುವ ಆವಶ್ಯಕತೆ ಇಲ್ಲ. ಎಳವೆಯಲ್ಲೇ ಪ್ರಾಥಮಿಕ ಶಾಲೆಯಲ್ಲೇ ಮಕ್ಕಳಿಗೆ ಅವರ ಕೊಠಡಿಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಮಧ್ಯಾಹ್ನದ ಊಟವನ್ನು ಹಂಚುವುದು, ಊಟದ ನಂತರ ಪಾತ್ರೆಗಳನ್ನು ಸ್ವತ್ಛಗೊಳಿಸುವುದು, ತರಗತಿಯ ನೆಲವನ್ನು ಒರೆಸುವುದು ಇತ್ಯಾದಿಗಳನ್ನು ಹೇಳಿಕೊಡುವುದರಿಂದ ಅವರಿಗೆ ಸ್ವಚ್ಛತೆ ರಕ್ತದಲ್ಲೇ ಮೈಗೂಡಿರುತ್ತದೆ. ಈ ಕೆಲಸವನ್ನು ಮಕ್ಕಳಾಗಲಿ, ಪೋಷಕರಾಗಲಿ, ಶಾಲೆಯ ಶಿಕ್ಷಕರಾಗಲಿ ಕೀಳರಿಮೆಯೆಂದು ಭಾವಿಸುವುದಿಲ್ಲ. ಹಾಗಾಗಿ, ಈ ಮಕ್ಕಳು ಬೆಳೆದು ದೇಶದ ನಾಗರಿಕರಾದಾಗ, ಇವರ ನಡವಳಿಕೆಗಳು ಸಮಾಜಮುಖೀಯಾಗಿರುತ್ತದೆ. ಜಪಾನಿನ ಯಾವುದೇ ರಸ್ತೆಗಳಾಗಲಿ, ಜನನಿಬಿಡ ಸ್ಥಳಗಳಾದ ಮೆಟ್ರೋ ನಿಲ್ದಾಣವಾಗಲಿ, ಬಸ್‌ ನಿಲ್ದಾಣವಾಗಲಿ, ಮಾಲ್‌ಗ‌ಳಾಗಲಿ, ಪಾರ್ಕ್‌ಗಳಾಗಲಿ, ಆಫೀಸಿನಲ್ಲಾಗಲಿ ನೀವು ಹುಡುಕಿದರೂ ಕಸ ಸಿಗುವುದಿಲ್ಲ. ಇಲ್ಲಿ ಸಿಗರೇಟು ಸೇದುವವರು ಸಹ ಸಿಗರೇಟಿನ ಬೂದಿ ನೆಲದ ಮೇಲೆ ಬೀಳದಂತೆ ಆ ಬೂದಿಯನ್ನು ಇನ್ನೊಂದು ಪೊಟ್ಟಣದಲ್ಲಿ ಚಿಮುಕಿಸಿಕೊಳ್ಳುತ್ತಾರೆ. 

ಎಲ್ಲ ಕನ್‌ವೀನಿಯನ್ಸ್‌ ಸ್ಟೋರ್‌ಗಳಲ್ಲಿ ತರಕಾರಿಗಳನ್ನು ಪ್ಲಾಸ್ಟಿಕ್‌ ತೆಳುಹಾಳೆಗಳಲ್ಲಿ ಸುತ್ತಿಟ್ಟಿರುತ್ತಾರೆ. ವ್ಯಾಪಾರ ಮುಗಿಸಿ ಹೊರಬರುವಾಗಲು ಪ್ಲಾಸ್ಟಿಕ್‌ ಕೈಚೀಲವನ್ನೇ ಕೊಡುತ್ತಾರೆ. ಆದರೂ ಜಪಾನೀಯರು ವ್ಯವಸ್ಥಿತವಾಗಿ ಮರುಬಳಕೆ ಮಾಡುವುದರಿಂದ ಇವರಿಗೆ ಪ್ಲಾಸ್ಟಿಕ್‌ ತಲೆನೋವಾಗಿರುವ ವಸ್ತುವಾಗಿ ಪರಿಗಣಿತವಾಗುವುದಿಲ್ಲ. 

ನಾವು ತಿಳಿದುಕೊಳ್ಳಬೇಕಾದ ಅಂಶವೆಂದರೆ ಸ್ವಚ್ಛತೆ ಎಂಬುದು ಕೇವಲ ಘೋಷಣೆಗಳಿಂದಾಗಲಿ, ವಾಟ್ಸಾಪ್‌ ಸಂದೇಶದಿಂದಾಗಲಿ, ಶಾರ್ಟ್‌ ಫಿಲ್ಮ್ನಿಂದಾಗಲಿ, ಸಂಘಸಂಸ್ಥೆಗಳ ಒಂದು ದಿನದ ಕಾರ್ಯಕ್ರಮದಿಂದಾಗಲಿ ಮೂಡುವ ಭಾವನೆಯಲ್ಲ. ಅದು ತನ್ನೊಳಗೆಯೇ ಮೂಡುವ ಒಂದು ಎಚ್ಚರ. 

ಸಿ. ಎಸ್‌. ಶ್ರೀನಾಥ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.