2 ವರ್ಷಗಳ ಬಳಿಕ ಏಕದಿನ ತಂಡದಲ್ಲಿ ಡೇಲ್ ಸ್ಟೇನ್
Team Udayavani, Sep 15, 2018, 6:10 AM IST
ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ಹಿರಿಯ ವೇಗಿ ಡೇಲ್ ಸ್ಟೇನ್ 2 ವರ್ಷಗಳ ಬಳಿಕ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ಸೆ. 30ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗಾಗಿ ಪ್ರಕಟಿಸಲಾದ ತಂಡದಲ್ಲಿ ಸ್ಟೇನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ಟಿ20 ಪಂದ್ಯವನ್ನೂ ಪ್ರಕಟಿಸಲಾಗಿದೆ. ಫಾ ಡು ಪ್ಲೆಸಿಸ್ ಮರಳಿ ತಂಡದ ನೇತೃತ್ವ ವಹಿಸಲಿದ್ದಾರೆ. ಎದುರಾಳಿಯ ಸಾಮರ್ಥ್ಯ ಹಾಗೂ ಮುಂದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಗಮನದಲ್ಲಿರಿಸಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶ್ರಾಂತಿ ಪಡೆದ ಪ್ರಮುಖರೆಂದರೆ ಕೀಪರ್ ಕ್ವಿಂಟನ್ ಡಿ ಕಾಕ್ ಮತ್ತು ಹಾರ್ಡ್ ಹಿಟ್ಟರ್ ಡೇವಿಡ್ ಮಿಲ್ಲರ್.
ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅವರನ್ನು ಮರಳಿ ಕರೆಸಿಕೊಳ್ಳಲಾಗಿದೆ. ಕಳೆದ ಶ್ರೀಲಂಕಾ ವಿರುದ್ಧದ ಸರಣಿಯ ವೇಳೆ ತಾಹಿರ್ಗೆ ವಿಶ್ರಾಂತಿ ನೀಡಲಾಗಿತ್ತು. ದಕ್ಷಿಣ ಆಫ್ರಿಕಾ “ಎ’ ತಂಡದ ನಾಯಕ ಖಯಾ ಜೊಂಡೊ ಕೂಡ ಅವಕಾಶ ಪಡೆದಿದ್ದಾರೆ. ಕ್ರಿಸ್ಟಿಯಾನ್ ಜಾನ್ಕರ್ ಈ ತಂಡದ ಹೊಸ ಮುಖ.
ಏಕದಿನ ತಂಡ: ಫಾ ಡು ಪ್ಲೆಸಿಸ್ (ನಾಯಕ), ಹಾಶಿಮ್ ಆಮ್ಲ, ರೀಝ ಹೆಂಡ್ರಿಕ್ಸ್, ಜೆಪಿ ಡ್ಯುಮಿನಿ, ಇಮ್ರಾನ್ ತಾಹಿರ್, ಕ್ರಿಸ್ಟಿಯಾನ್ ಜಾನ್ಕರ್, ಕೇಶವ್ ಮಹಾರಾಜ್, ಐಡನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್, ವಿಯಾನ್ ಮುಲ್ಡರ್, ಲುಂಗಿಸಾನಿ ಎನ್ಗಿಡಿ, ಕಾಗಿಸೊ ರಬಾಡ, ತಬ್ರೇಜ್ ಶಂಸಿ, ಆ್ಯಂಡಿಲ್ ಫೆಲುಕ್ವಾಯೊ, ಡೇಲ್ ಸ್ಟೇನ್, ಖಯಾ ಜೊಂಡೊ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್