17 ರ ನಾಲ್ವರಿಂದ 16 ರ ವಿದ್ಯಾರ್ಥಿನಿಯ ಗ್ಯಾಂಗ್ರೇಪ್, ಗರ್ಭಪಾತ
Team Udayavani, Sep 18, 2018, 4:51 PM IST
ಡೆಹರಾಡೂನ್: ಇಲ್ಲಿನ ಶಾಲೆಯೊಂದರ ಹಾಸ್ಟೆಲ್ನಲ್ಲಿ 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಹಿರಿಯ ವಿದ್ಯಾರ್ಥಿಗಳು ಗ್ಯಾಂಗ್ ರೇಪ್ ನಡೆಸಿದ್ದು, ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ. ವಿಚಾರ ಗಮನಕ್ಕೆ ಬಂದೊಡನೆ ಶಾಲೆಯ ಪ್ರಿನ್ಸಿಪಾಲ್ ಇತರರೊಡನೆ ಸೇರಿಕೊಂಡು ಗರ್ಭಪಾತ ಮಾಡಿಸಿದ್ದಾರೆ.
ಅಗಸ್ಟ್ 14 ರಂದು ಘಟನೆ ನಡೆದಿದ್ದು ಸಂತ್ರಸ್ತೆ ಹಾಸ್ಟೆಲ್ನಲ್ಲಿದ್ದ ತನ್ನ ಸಹೋದರಿಯರಿಗೆ ವಿಚಾರ ತಿಳಿಸಿದ್ದಳು. ಬಾಲಕಿ ಗರ್ಭಿಣಿಯಾದ ವಿಚಾರ ತಿಳಿದ ಪ್ರಿನ್ಸಿಪಾಲ್, ಆತನ ಪತ್ನಿ ಮತ್ತು ಹಾಸ್ಟೆಲ್ ಸಿಬಂದಿ ಆಕೆಗೆ ಮಾತ್ರೆ ಮತ್ತು ಔಷಧಿಗಳನ್ನು ನೀಡಿ ಗರ್ಭಪಾತ ಮಾಡಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ.
ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿನ್ಸಿಪಾಲ್ ಸಹಿತ ಶಾಲೆಯ ಐದು ಸಿಬಂದಿಗಳು ಮತ್ತು ನಾಲ್ವರು ರೇಪ್ ಆರೋಪಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಾಲ್ವರು ಆರೋಪಿಗಳು 17 ವರ್ಷದ ವರು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ