ಭರಣಿಯ ಅಮ್ಮನ ಸೆಂಟಿಮೆಂಟ್‌


Team Udayavani, Sep 21, 2018, 6:00 AM IST

z-29.jpg

“ಡಿಸೆಂಬರ್‌ 6ಕ್ಕೆ ಹಾಡು ಕೇಳ್ತೀರಾ …’
ಹಾಗಂತ ಘೋಷಿಸಿಯೇಬಿಟ್ಟರು ನಿರ್ದೇಶಕ ಚನಾನಿರಾಜ. ಅವರ ಹೆಸರೇನೋ ವಿಚಿತ್ರವಾಗಿದೆಯಲ್ಲಾ ಅಂತನಿಸಬಹುದು. ಅವರ ನಿಜವಾದ ಹೆಸರು ಚನ್ನಬಸವ. ಅವರು ಐವರು ಸ್ನೇಹಿತರಂತೆ. ಹಾಗಾಗಿ ಐವರ ಹೆಸರಿನ ಮೊದಲಕ್ಷರವನ್ನು ಜೋಡಿಸಿ ಚನಾನಿರಾಜ ಆಗಿದ್ದಾರೆ. ಈಗ ವಿಷಯಕ್ಕೆ ಬರೋದಾದರೆ, ಅವರು ಚಿತ್ರದ ಹಾಡುಗಳ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು ಚಿತ್ರದ ಮುಹೂರ್ತದ ದಿನದಂದು. ಕಳೆದ ವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅವರ ಮೊದಲ ಚಿತ್ರ “ಭರಣಿ – ಪಾರ್ವತಮ್ಮನ ಮಗ’ ಚಿತ್ರದ ಮುಹೂರ್ತವಿತ್ತು. “ದುನಿಯಾ’ ಯೋಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಹೋದ ಕೆಲ ಹೊತ್ತಲ್ಲೇ ಪತ್ರಿಕಾಗೋಷ್ಠಿ ನಡೆಯಿತು. 

ಅಂದಹಾಗೆ, ಈ ಚಿತ್ರದಲ್ಲಿ ಯೋಗಿ ಅವರ ಸಂಬಂಧಿ ಮಾಧವ್‌ ಮತ್ತು ಸ್ವಾತಿ ಕೊಂಡೆ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಅಪ್ಪಟ ಗ್ರಾಮೀಣ ಚಿತ್ರ ಎನ್ನುತ್ತಾರೆ ಚನಾನಿರಾಜ. “ಗ್ರಾಮೀಣ ಕಥೆಯಾದರೂ ಇದು ಬೇರೆ ತರಹ ಇರುತ್ತದೆ. ಇದು ತಾಯಿ-ಮಗನ ಸೆಂಟಿಮೆಂಟ್‌ ಚಿತ್ರ. ಇದುವರೆಗೂ ತಾಯಿ-ಮಗನ ಸೆಂಟಿಮೆಂಟ್‌ ಕುರಿತಾದ ಹಲವು ಚಿತ್ರಗಳು ಬಂದಿರಬಹುದು. ಇದು ವಿಭಿನ್ನವಾಗಿರುತ್ತದೆ. ಇಲ್ಲಿ ತಾರಾ ಅವರು ತಾಯಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಆನೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. “ಬಾಹುಬಲಿ’ ಚಿತ್ರದಲ್ಲಿ ಆ ಆನೆ ಕಾಣಿಸಿಕೊಂಡಿತ್ತು’ ಅಂತೆಲ್ಲಾ ಹೇಳುತ್ತಾ ಹೋದರು ಚನಾನಿರಾಜ.

ನಿರ್ಮಾಪಕ ಸಿದ್ಧರಾಜು ಅವರ ತಂಗಿ ಮಗನಾಗಿರುವ ನಾಯಕ ಮಾಧವ ಮಾತನಾಡಿ, “12 ವರ್ಷಗಳಿಂದ ನಟನಾಗಬೇಕು ಎಂಬ ಆಸೆ ಇತ್ತು. ಈ ಚಿತ್ರದಿಂದ ಸಾಧ್ಯವಾಗುತ್ತದೆ. ನಿರ್ದೇಶಕರು ಹೇಳಿಕೊಟ್ಟು ಅಭಿನಯ ತೆಗೆಸುತ್ತಿದ್ದಾರೆ. 15 ದಿನಗಳ ಕಾಲ ಕೊಳ್ಳೇಗಾಲದಲ್ಲಿದ್ದು ಅಲ್ಲಿಯ ಪರಿಸರ ಅರ್ಥ ಮಾಡಿಕೊಂಡು ಬಂದೆ’ ಎಂದರು. ನಾಯಕಿ ಸ್ವಾತಿ ಕೊಂಡೆ ಆಡಿಷನ್‌ನಲ್ಲಿ ಭಾಗವಹಿಸಿದ ನಂತರ, ಚಿತ್ರತಂಡದಿಂದ ಯಾವುದೇ ಕರೆ ಬರಲಿಲ್ಲವಂತೆ. ಇನ್ನು ಬರಲ್ಲ ಎಂದುಕೊಳ್ಳುವಷ್ಟರಲ್ಲೇ ಕರೆ ಬಂದು ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಕೇರಳದಲ್ಲಿ ಟೆಸ್ಟ್‌ ಶೂಟ್‌ ನಡೆಯಿತು. ಆರಂಭದಲ್ಲಿ ಆನೆ ನೋಡಿ ಭಯವಾಯ್ತು. ಬಿಟ್ಟು ಬರುವಾಗ ಅಳು ಬಂತು’ ಎಂದು ಹೇಳಿಕೊಂಡರು.

ಚಿತ್ರಕ್ಕೆ ಮಂಜು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್‌ ಅವರ ಛಾಯಾಗ್ರಹಣ ಮತ್ತು ವಿವೇಕ್‌ ಚಕ್ರವರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.