ವೈದ್ಯರಿಗೆ ಮಾನವೀಯತೆಯೇ ಮಾನದಂಡವಾಗಲಿ

Team Udayavani, Sep 24, 2018, 11:37 AM IST

m4-vaidya.jpg

ಮೈಸೂರು: ಆರೋಗ್ಯ ಕ್ಷೇತ್ರವೂ ವ್ಯಾಪಾರೀಕರಣವಾಗಿ ಜನರು ವೈದ್ಯರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆ ನಾನು ನಿರ್ಗಮಿಸಿದ ನಂತರವೂ ಮಾನವೀಯ ನೆಲೆಯಲ್ಲಿ ಮುಂದುವರಿಯಬೇಕು ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಆಶಯ ವ್ಯಕ್ತಪಡಿಸಿದರು.

ಡಾ.ಸಿ.ಎನ್‌.ಮಂಜುನಾಥ್‌ ಅಭಿನಂದನಾ ಸಮಿತಿಯಿಂದ ಭಾನುವಾರ ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕನಾಗಿ ಕಳೆದ 12 ವರ್ಷಗಳಲ್ಲಿ ನನ್ನ ಗಮನಕ್ಕೆ ಬಂದಂತೆ ಹಣಕ್ಕೋಸ್ಕರ ಚಿಕ್ಸಿತೆ ನೀಡದೆ ಯಾರನ್ನೂ ಹಿಂದಕ್ಕೆ ಕಳುಹಿಸಿಲ್ಲ ಎಂದರು.

ಬಡ ರೋಗಿಗಳನ್ನು ದಾಖಲೆಗಳಿಂದಲ್ಲ, ಕಣ್ಣುಗಳಿಂದ ಗುರುತಿಸಬೇಕು. ಕಾನೂನಿನ ಪುಸ್ತಕದಲ್ಲಿ ಹಲವಾರು ತಪ್ಪುಗಳಿದ್ದರೂ ಅವುಗಳನ್ನು ಸರಿಪಡಿಸುವ ಬದಲಿಗೆ ಅದನ್ನೇ ಅನುಸರಿಸುವುದು ಸರಿಯಲ್ಲ. ಮಾನವೀಯತೆಯೇ ಮಾನದಂಡ, ಕಾನೂನಾಗಬೇಕು ಎಂದು ತಿಳಿಸಿದರು.

ಹೊಸ ಮೆಡಿಕಲ್‌ ಕಾಲೇಜು ಬೇಡ: ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಸರ್ಕಾರಗಳು ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದನ್ನು ನಿಲ್ಲಿಸಿ, ಇರುವ ವೈದ್ಯಕೀಯ ಕಾಲೇಜುಗಳನ್ನು ಬಲವರ್ಧನೆಗೊಳಿಸುವ ಕೆಲಸವಾಗಬೇಕು.

ಹೊಸ ಕಾಲೇಜುಗಳ ಹೆಸರಿನಲ್ಲಿ ಕೇವಲ ಕಟ್ಟಡಗಳನ್ನು ಕಟ್ಟುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ವಿಕೇಂದ್ರೀಕರಣಕ್ಕೆ ಅವಕಾಶ ನೀಡಬೇಕು. ನಿಧಾನಗತಿಯ ಕೆಲಸದಿಂದ ಒಳ್ಳೆಯದಾಗುವುದಿಲ್ಲ. ಹೀಗಾಗಿ ಆರ್ಥಿಕ ಮತ್ತು ಆಡಳಿತಾತ್ಮಕ ವಿಕೇಂದ್ರೀಕರಣ ಮುಖ್ಯ ಎಂದರು.

ಸಂಸ್ಥೆಗಳಿಗೆ ಹಿರಿತನದ ಆಧಾರದ ಮೇಲೆ ನಿರ್ದೇಶಕ ಹುದ್ದೆಗೆ ನೇಮಕ ಮಾಡುವ ಬದಲಿಗೆ ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬಲ್ಲ ನಾಯಕತ್ವ ಗುಣವುಳ್ಳವರಿಗೆ ನಿರ್ದೇಶಕ ಹುದ್ದೆ ಕೊಡಬೇಕು. ಹಿರಿತನದ ಆಧಾರದ ಮೇಲೆ ನಿರ್ದೇಶಕರಾಗಿ ಬಂದವರೂ ಆಸ್ಪತ್ರೆಯ ಸುಧಾರಣೆಗೆ ಒತ್ತು ನೀಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡುವಾಗ ಸುಧಾರಣೆಗೆ ಹಿಂಜರಿಯಬಾರದು ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮಾತನಾಡಿ, ಡಾ.ಸಿ.ಎನ್‌.ಮಂಜುನಾಥ್‌ ರಾಜಕೀಯ ಸೋಂಕಿಲ್ಲದೆ, ಎಲ್ಲರ ವಿಶ್ವಾಸವನ್ನೂ ಗಳಿಸಿ-ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿ ಮೈಸೂರಿನಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒತ್ತಾಯ ಮಾಡಿ ಕಲಬುರ್ಗಿಯಲ್ಲಿ ಸುಸಜ್ಜಿತ ಆಸ್ಪತ್ರೆ ಮಾಡಿದ್ದಾರೆ. ಅವರು ರಾಜಕೀಯ ಸೋಂಕಿಲ್ಲದೆ ಎಲ್ಲರ ವಿಶ್ವಾಸಗಳಿಸಿರುವುದರಿಂದಲೇ ಯಡಿಯೂರಪ್ಪ ಅವರೂ ಶಿವಮೊಗ್ಗದಲ್ಲಿ ಜಯದೇವ ಆಸ್ಪತ್ರೆ ಶಾಖೆ ತೆರೆಯುವಂತೆ ಕೋರಿದ್ದರು ಎಂದು ತಿಳಿಸಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ, ಡಾ.ಸಿ.ಎನ್‌.ಮಂಜುನಾಥ್‌ ಹೃದಯ ಕ್ಷೇತ್ರದ ಕೃಷಿಕ, ಕೃಷಿ-ಕಸಿ ಎರಡನ್ನೂ ಮಾಡುತ್ತಾ ಬಂದಿರುವ ಅವರನ್ನು ಹೃದಯ ಕ್ಷೇಮಪಾಲಕ ಎಂದು ಕರೆಯಬಹುದು ಎಂದು ಹೇಳಿದರು. ಸುತ್ತೂರು ಮಠಾಧೀಶರಾದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ಡಾ.ಅನಸೂಯ ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

6–strike

Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

12

Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

11-hunsur

Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

England Women’s Cricket Team Selection Using AI Technology

AI ತಂತ್ರಜ್ಞಾನ ಬಳಸಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಆಯ್ಕೆ

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

Kollywood: ಅಣ್ಣಾಮಲೈ ಬಯೋಪಿಕ್‌ಗೆ ತಯಾರಿ? ಖಡಕ್‌ ಐಪಿಎಸ್‌ ಅಧಿಕಾರಿಯಾಗಿ ವಿಶಾಲ್‌ ನಟನೆ?

7-haveri

Haveri: ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ; ವಿಡಿಯೋ ವೈರಲ್

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

Kollywood: ಕಮಲ್‌ ಹಾಸನ್‌ ʼಇಂಡಿಯನ್‌ -2ʼ ಬಿಡುಗಡೆ ಮುಂದೂಡಿಕೆ; ಈ ತಿಂಗಳಿನಲ್ಲಿ ರಿಲೀಸ್?

dvs

Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.