Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ


Team Udayavani, May 4, 2024, 3:09 PM IST

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

ಮೈಸೂರು: ಕಳೆದೆರೆಡು ತಿಂಗಳಿನಿಂದ ಬಿಸಿಲಿನ ತೀವ್ರತೆ ಹಾಗೂ ಮಳೆ ಕೊರತೆ ಪರಿಣಾಮ ಹಣ್ಣು ಮತ್ತು ತರಕಾರಿ ಬೆಳೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿ ದರ ಬಿಸಿಲ ತಾಪದಂತೆ ಏರಿಕೆಯಾಗುತ್ತಿದೆ.

ಮಳೆ ಕೊರತೆ ಪರಿಣಾಮ ಜಿಲ್ಲೆಯ ವಿವಿಧ ಭಾಗದಲ್ಲಿ ರೈತರು ಬೆಳೆದಿದ್ದ ತರಕಾರಿ, ಹಣ್ಣು ಮತ್ತು ಸೊಪ್ಪು ಹೊಲದಲ್ಲೇ ಬತ್ತುತ್ತಿದ್ದು, ಇಳುವರಿ ಕುಠಿತವಾಗಿದೆ. ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದ್ದು, ಜಿಲ್ಲೆಯ ಜನತೆ ಹೈರಾಣಾಗಿದ್ದಾರೆ.

ಮಳೆ ಕೊರತೆಗೆ ಬತ್ತಿದ ಬೆಳೆ: ಕಳೆದ 22 ವರ್ಷಗಳ ಬಳಿಕ ಮತ್ತೆ ತೀವ್ರ ಮಳೆ ಕೊರತೆ ಎದುರಿರಾಗಿದ್ದು, ನೂರಾರು ಹೆಕ್ಟೇರ್‌ನಲ್ಲಿ ರೈತರು ಬೆಳೆದಿದ್ದ ಬೆಳೆ ನೀರಿಲ್ಲದೇ ಒಣಗುತ್ತಿವೆ. ತೀವ್ರ ಬರಗಾಲ ಹಿನ್ನೆಲೆ ನದಿ, ಕೆರೆ-ಕಟ್ಟೆಗಳ ಜತೆಗೆ ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಬೇಸಿಗೆಯಲ್ಲಿ ಬೆಳೆದಿದ್ದ ಹಣ್ಣು, ತರಕಾರಿ ಬೆಳೆಗೆ ನೀರು ಒದಗಿಸಲಾಗದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ವಾತಾವರಣದಲ್ಲಿನ ಉಷ್ಣತೆಗೆ ಫ‌ಸಲಿನ ಇಳುವರಿಯೂ ಕುಂಠಿತವಾಗಿದೆ.

ತಗ್ಗಿದ ಪೂರೈಕೆ ಪ್ರಮಾಣ: ಮೈಸೂರು ಜಿಲ್ಲೆಯ ವಿವಿಧ ತಾಲೂಕು ಸೇರಿದಂತೆ ಪಕ್ಕದ ಗುಂಡ್ಲುಪೇಟೆ, ಶ್ರೀರಂಗಪಟ್ಟಣ ತಾಲೂಕುಗಳಿಂದ ನಿತ್ಯವೂ 2 ಸಾವಿರ ಟನ್‌ಗೂ ಹೆಚ್ಚು ಪ್ರಮಾಣದ ತರಕಾರಿಯನ್ನು ನೂರಾರು ವಾಹನಗಳಲ್ಲಿ ತರಲಾಗುತ್ತಿತ್ತು. ಆದರೆ. ಕಳೆದೊಂದು ತಿಂಗಳಿನಿಂದ ಮೈಸೂರಿಗೆ ಪೂರೈಕೆಯಾಗುತ್ತಿರುವ ಪ್ರಮಾಣ ಕಡಿಮೆಯಾಗಿದ್ದು, 1 ಸಾವಿರ ಟನ್‌ಗೆ ಇಳಿಕೆಯಾಗಿದೆ. ಪರಿಣಾಮ ತರಕಾರಿ ಮತ್ತು ಸೊಪ್ಪಿಗೆ ಬೇಡಿಕೆ ಹೆಚ್ಚಾಗಿರುವ ಜತೆಗೆ ಬೆಲೆಯೂ ಹೆಚ್ಚಿದೆ.

ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌ ಮತ್ತು ಮೇನಲ್ಲಿ ತರಕಾರಿ ಬೆಲೆ ಸಾಧಾರಣವಾಗಿತ್ತದೆ. ಆದರೆ ಈ ಬಾರಿ ಎಲ್ಲಾ ಬಗೆಯ ತರಕಾರಿಗಳು 50ರ ಗಡಿ ದಾಟಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.

ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಟ್‌, ಬೀನ್ಸ್‌, ಟೊಮೆಟೊ, ಈರುಳ್ಳಿ ಸೇರಿದಂತೆ ಹಲವು ತರಕಾರಿ ದರ ಹೆಚ್ಚಾಗಿದ್ದು, ರಿಟೇಲ್‌ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಜನರು ಕಂಗಾಲಾಗಿ¨ªಾರೆ. ಬಹುತೇಕ ಕಡೆ ತರಕಾರಿ ಬೆಳೆ ಒಣಗಿದ್ದು, ಬೀನ್ಸ್‌ ಸೇರಿದಂತೆ ನಾನಾ ತರಕಾರಿ, ಸೊಪ್ಪುಗಳ ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ  ಈ ಹಿಂದೆ ಕೆ.ಜಿ.ಗೆ 10-20 ರೂ. ದರವಿದ್ದ ಟೊಮೆಟೊ 40-50ಕ್ಕೆ ಏರಿಕೆಯಾಗಿದೆ. ಒಂದು ಕಂತೆ ದಂಟು, ಮೆಂತ್ಯ, ಪಾಲಕ್‌, ಸಪ್ಸಿಗೆ, ಕೊತ್ತಂಬರಿ ಸೊಪ್ಪು 10 ರೂ. ಮುಟ್ಟಿದೆ.

 ಚಿಲ್ಲರೆ ಅಂಗಡಿಯಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು

ನಗರದ ವಿವಿಧೆಡೆ ಹಾಗೂ ಸಂತೆಗಳಲ್ಲಿ ತರಕಾರಿ ಸಗಟು ಮಾರಾಟ ಕೇಂದ್ರಗಳಿಗಿಂತ ದುಪ್ಪಟ್ಟು ಬೆಲೆಗೆ ತರಕಾರಿ ಮತ್ತು ಸೊಪ್ಪು ಮಾರಾಟವಾಗುತ್ತಿದ್ದು, ಟೊಮೊಟೊ ಪ್ರತಿ ಕೆ.ಜಿ.ಗೆ 100, ಈರುಳ್ಳಿಗೆ 90, ಕ್ಯಾರೆಟ್‌ಗೆ 80 ರೂ.ನಂತೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಬೀನ್ಸ್‌, ಮೆಣಸಿನ ಕಾಯಿ ಬೆಲೆ ದಿಢೀರ್‌ ಏರಿಕೆ

30-40 ರೂ.ಗೆ ದೊರೆಯುತ್ತಿದ್ದ ಬೀನ್ಸ್‌ ಈಗ ಬಲು ದುಬಾರಿಯಾಗಿದ್ದು, ಪ್ರತಿ ಕಿಲೋಗೆ 160ರಿಂದ 180ಕ್ಕೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40 ರೂ. ಇದ್ದ ಹಸಿ ಮೆಣಸಿನ ಕಾಯಿ ಬೆಲೆ ಸಧ್ಯಕ್ಕೆ 70ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಬೆಂಡೆಕಾಯಿಗೆ 60, ಮೂಲಂಗಿ 60, ಕ್ಯಾರೆಟ್‌-ಬೀಟ್ರೋಟ್‌ 70, ಸೌತೆಕಾಯಿ 50, ಹಾಗಲಕಾಯಿ 70, ಕೋಸು 40 ರೂಪಾಯಿಗೆ ಮಾರಾಟವಾಗುತ್ತಿದೆ.

-ಸತೀಶ್‌ ದೇಪುರ

ಟಾಪ್ ನ್ಯೂಸ್

RCB (2)

IPL Eliminator ಪಂದ್ಯ; ಅಭ್ಯಾಸವನ್ನು ಕೈಬಿಟ್ಟ ಆರ್ ಸಿಬಿ: ಉಗ್ರ ಬೆದರಿಕೆ ಕಾರಣವೇ?

Hemant

Supreme Court ತಪರಾಕಿ: ಬಂಧನದ ವಿರುದ್ಧದ ಮನವಿ ಹಿಂಪಡೆದ ಹೇಮಂತ್ ಸೊರೇನ್!

8-rishab-3

Rishab Shetty: ಇತಿಹಾಸ ಪ್ರಸಿದ್ಧ ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

EC

BJP,Congress ಸೇರಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚುನಾವಣ ಆಯೋಗ

ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?

ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?

kejriwal

Kejriwal ಕುರಿತು ವಿವಿಧ ಗೀಚುಬರಹ: ಬ್ಯಾಂಕ್‌ ಮ್ಯಾನೇಜರ್ ಬಂಧಿಸಿದ ಪೊಲೀಸರು

isrel netanyahu

Palestine ‘ರಾಷ್ಟ್ರ’: ಐರ್ಲೆಂಡ್, ನಾರ್ವೆ, ಸ್ಪೇನ್ ನಿಂದ ಇಸ್ರೇಲ್ ರಾಯಭಾರಿ ಹಿಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H C MAhadev

Mysuru;ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾ ಲಕ್ಷಣಗಳು‌: ಸಚಿವ ಡಾ.ಮಹದೇವಪ್ಪ ಭೇಟಿ

ಆ ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ: ಎಚ್‌ಡಿಕೆ  ವಾಗ್ದಾಳಿ

ಆ ಮಹಾನುಭಾವರು 1980 ರಲ್ಲೇ ಸಿಡಿ ಫ್ಯಾಕ್ಟರಿ ಓಪನ್ ಮಾಡಿದ್ದಾರೆ: ಎಚ್‌ಡಿಕೆ ವಾಗ್ದಾಳಿ

1-mysore

Mysore: ಒಂದೇ ಕುಟುಂಬದ ನಾಲ್ವರು ಸಾವು; ಅನಿಲ ಸೋರಿಕೆ ಶಂಕೆ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

RCB (2)

IPL Eliminator ಪಂದ್ಯ; ಅಭ್ಯಾಸವನ್ನು ಕೈಬಿಟ್ಟ ಆರ್ ಸಿಬಿ: ಉಗ್ರ ಬೆದರಿಕೆ ಕಾರಣವೇ?

ಮಂಗಳೂರು: ನಗರದ ನಡುವೆಯೇ ಸೃಷ್ಟಿಯಾಗಿದೆ ದಟ್ಟ ಅರಣ್ಯ!

ಮಂಗಳೂರು: ನಗರದ ನಡುವೆಯೇ ಸೃಷ್ಟಿಯಾಗಿದೆ ದಟ್ಟ ಅರಣ್ಯ!

Hemant

Supreme Court ತಪರಾಕಿ: ಬಂಧನದ ವಿರುದ್ಧದ ಮನವಿ ಹಿಂಪಡೆದ ಹೇಮಂತ್ ಸೊರೇನ್!

8-rishab-3

Rishab Shetty: ಇತಿಹಾಸ ಪ್ರಸಿದ್ಧ ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

EC

BJP,Congress ಸೇರಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.