ರಾಂಚೋ ವಾಲ್ ಕೆಡವಲು ನಿರ್ಧಾರ
Team Udayavani, Sep 25, 2018, 8:45 AM IST
ಲೇಹ್: ನಟ ಆಮಿರ್ ಖಾನ್ ಅವರ ‘ತ್ರೀ ಈಡಿಯಟ್ಸ್’ ಸಿನೆಮಾದಿಂದ ಜನಪ್ರಿಯತೆ ಪಡೆದುಕೊಂಡಿದ್ದ ಲೇಹ್ನ ‘ಡ್ರಕ್ ಪದ್ಮ ಕಾರ್ಪೊ ಸ್ಕೂಲ್’ ಈಗ ಪ್ರವಾಸಿಗರ ಭೇಟಿ ಮೇಲೆ ನಿಯಂತ್ರಣ ಹೇರಲು ನಿರ್ಧರಿಸಿದೆ. ಜತೆಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ‘ರಾಂಚೋ ವಾಲ್’ ಎಂಬ ಹೆಸರಿನ ಗೋಡೆ ಕೆಡವಲು ಮುಂದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಜತೆಗೆ ಗೋಡೆಯ ಮೇಲೆ ಫೋಟೋ ತೆಗೆಸಿಕೊಳ್ಳುತ್ತಿರುವುದರಿಂದಲೂ ಅಡಚಣೆ ಉಂಟಾಗುತ್ತಿರುವುದರಿಂದ ಶಾಲೆಯ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.
ಚತುರ್ ಎಂಬ ಪಾತ್ರಧಾರಿ ಗೋಡೆಗೆ ಮೂತ್ರ ಮಾಡುವ ವೇಳೆ ವಿದ್ಯಾರ್ಥಿಗಳು ತಮ್ಮದೇ ಸಂಶೋಧನೆ ಮೂಲಕ ಆತನಿಗೆ ಶಾಕ್ ಹೊಡೆಸುವ ದೃಶ್ಯ ಸಿನಿಮಾದಲ್ಲಿತ್ತು. ಆ ಗೋಡೆಗೆ ಆಡಳಿತ ಮಂಡಳಿ ಪೇಂಟ್ ಬಳಿದು ‘ರಾಂಚೋ ವಾಲ್’ ಎಂದು ಬರೆಯಿಸಿತ್ತು.