ಉ.ಭಾರತದಲ್ಲಿ ಪ್ರವಾಹ: 13 ಸಾವು
Team Udayavani, Sep 25, 2018, 9:00 AM IST
ಹೊಸದಿಲ್ಲಿ: ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ, ದಿಢೀರ್ ಪ್ರವಾಹ ಉಂಟಾಗಿದ್ದು, ನದಿಗಳೆಲ್ಲ ಅಪಾಯದ ಮಟ್ಟ ಮೀರಿ ಹರಿಯತೊಡಗಿವೆ. ಮಳೆ ಸಂಬಂಧಿ ಘಟನೆಗಳಿಂದ 13 ಮಂದಿ ಸಾವಿಗೀಡಾಗಿದ್ದು, ಅಪಾರ ಹಾನಿಯಾಗಿದೆ. ಪಕ್ಕದ ಪಂಜಾಬ್‌ನಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಲ್ಲಿನ ಪರಿಸ್ಥಿತಿಯು ಇತ್ತೀಚೆಗೆ ಪ್ರವಾಹದಿಂದ ನಲುಗಿದ ಕೇರಳ ಹಾಗೂ ಕರ್ನಾಟಕದ ಕೊಡಗನ್ನು ನೆನಪಿಸಿದೆ.
ಧಾರಾಕಾರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬದ್ರಿನಾಥ, ಕೇದಾರನಾಥ, ಯಮುನೋತ್ರಿಯಂಥ ಯಾತ್ರಾಸ್ಥಳಗಳಿಗೆ ಹೋಗುವ ದಾರಿಗಳೆಲ್ಲ ಮುಚ್ಚಲ್ಪಟ್ಟಿವೆ. ಹಿಮಾಚಲದಲ್ಲಿ ದಿಢೀರ್ ಪ್ರವಾಹದಿಂದ ಹಲವು ಮನೆಗಳು ಕೊಚ್ಚಿಹೋಗಿವೆ. ಕುಲ್ಲುವಿನಲ್ಲಿ ಸಿಲುಕಿಕೊಂಡಿದ್ದ 21 ಮಂದಿಯನ್ನು ವಾಯುಪಡೆ ರಕ್ಷಿಸಿದೆ. ಜಮ್ಮು – ಕಾಶ್ಮೀರದಲ್ಲಿ ಭೂಕುಸಿತದಿಂದಾಗಿ ಒಂದೇ ಕುಟುಂಬದ ಐವರು ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ್ಯಾಯಪೀಠ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ವರದಿ ಮಾಡಲಾಗಿದೆ: ಸುಪ್ರೀಂ ಸ್ಪಷ್ಟನೆ
ಭವಿಷ್ಯ ನಿಧಿ ಖಾತೆಯಲ್ಲಿ ರಿಲೀವಿಂಗ್ ದಿನಾಂಕ ಖುದ್ದಾಗಿ ಅಪ್ಡೇಟ್ ಮಾಡಿ!
ಗೂಗಲ್ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು
ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ
‘2008 ಬಾಟ್ಲಾ ಹೌಸ್’ ಎನ್ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು