ನಿತ್ಯ 40 ಸಿಗರೆಟ್ ಸೇದುತ್ತಿದ್ದೆ, 87ರಲ್ಲಿ ಬಿಟ್ಟೆ: ಸಿದ್ದು
Team Udayavani, Oct 1, 2018, 6:00 AM IST
ಮೈಸೂರು: “ದಿನಕ್ಕೆ ನಾನು 40 ಸಿಗರೆಟ್ ಸೇದುತ್ತಿದ್ದೆ. ಇಷ್ಟೊಂದು ಸಿಗರೆಟ್ ಸೇದಿದರೆ ಹೆಚ್ಚು ದಿನ ಬದುಕುವುದಿಲ್ಲ ಎಂಬ ಅರಿವಾಗಿ 1987ರಲ್ಲಿ ಸಿಗರೆಟ್ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಾನು ಕಾಲೇಜು ದಿನದಲ್ಲಿ, ವಕೀಲನಾಗಿದ್ದಾಗ ವಿಪರೀತವಾಗಿ ಸಿಗರೆಟ್ ಸೇದುತ್ತಿದ್ದೆ. ನನ್ನ ಸಿಗರೆಟ್ ಸೇವನೆ ಚಟ ನೋಡಿದ್ದ ನನ್ನ ಸ್ನೇತರು, ವಿದೇಶಕ್ಕೆ ಹೋಗಿ, ವಾಪಸ್ ಬಂದಾಗ, ನನಗೆ ದೊಡ್ಡ ಬಾಕ್ಸ್ವೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಬಾಕ್ಸ್ ತೆಗೆದು ನೋಡಿದರೆ, ಎಲ್ಲಾ ಬ್ರಾಂಡ್ ಸಿಗರೆಟ್ಗಳು ತುಂಬಿದ್ದವು. ಒಂದು ತಿಂಗಳ ಕಾಲ ಅವನ್ನೆಲ್ಲಾ ಸೇದಿ ಮುಗಿಸಿದೆ. ನಂತರ ರಾತ್ರಿ ಮಲಗಿದ್ದಾಗ ನಾನು ಇಷ್ಟೊಂದು ಸಿಗರೆಟ್ ಸೇದಿದರೆ ಹೆಚ್ಚು ದಿನ ಬದುಕುವುದಿಲ್ಲ ಎಂಬ ಅರಿವಾಯಿತು ಎಂದರು.
ಸ್ನೇಹಿತರು ನನಗೆ ಸಿಗರೆಟ್ನ್ನು ಗಿಫ್ಟ್ ಆಗಿ ತಂದುಕೊಡುವಂತಹ ಸ್ಥಿತಿಯನ್ನು ಮಾಡಿಕೊಂಡೆನಲ್ಲ ಎಂದು ಚಿಂತಿಸುವಂತಾಯಿತು. ಬಳಿಕ, ಸಿಗರೆಟ್ ಸೇವನೆ ಮಾಡಬಾರದು ಎಂದು ತೀರ್ಮಾನಿಸಿ 1987ರ ಆಗಸ್ಟ್ 17ರಂದು ಸಿಗರೆಟ್ ಸೇದುವುದನ್ನು ಸಂಪೂರ್ಣವಾಗಿ ಬಿಟ್ಟೆ. ಈಗ ಅದರ ವಾಸನೆಯೇ ನನಗೆ ಆಗುವುದಿಲ್ಲ. ಕೆಟ್ಟ ಚಟಗಳನ್ನು ಬಿಡುವುದಕ್ಕೆ ಟೈಂ, ಗಳಿಗೆ, ದಿನ ನಿಗದಿಪಡಿಸಬಾರದು, ಬಿಡಬೇಕು ಅಂದ ತಕ್ಷಣವೇ ಅದನ್ನು ಬಿಟ್ಟು ಬಿಡಬೇಕು ಎಂದು ಅವರು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ