ಭಾರತದಲ್ಲೇ ವಿವರ ಸಂಗ್ರಹ
Team Udayavani, Oct 10, 2018, 8:00 AM IST
ಹೊಸದಿಲ್ಲಿ: ಪಾವತಿಗೆ ಸಂಬಂಧಿಸಿದ ಡೇಟಾವನ್ನು ಭಾರತದಲ್ಲೇ ಸಂಗ್ರಹಿಸಲು ವಾಟ್ಸ್ಆ್ಯಪ್ ನಿರ್ಧರಿಸಿದೆ. ಆರ್ಬಿಐ ನಿಯಮಾವಳಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಹಿವಾಟುಗಳ ಎಲ್ಲ ಡೇಟಾವನ್ನೂ ಭಾರತದಲ್ಲೇ ಸಂಗ್ರಹಿಸುವಂತೆ ಆರ್ಬಿಐ ನೀಡಿದ ನಿಯಮಾವಳಿಗೆ ಉದ್ಯಮ ವಲಯದಲ್ಲಿ ಭಿನ್ನ ಅಭಿಪ್ರಾಯ ಕೇಳಿಬಂದಿತ್ತು. ಆದರೆ ವಾಟ್ಸ್ಆ್ಯಪ್ ಈ ನಿರ್ಧಾರ ಕೈಗೊಂಡಿರುವುದು ಅತ್ಯಂತ ಮಹತ್ವದ್ದಾಗಿದೆ. 20 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆ್ಯಪ್ ಈ ನಿರ್ಧಾರ ಕೈಗೊಂಡಿರುವುದರಿಂದ ಇತರ ಕಂಪೆನಿಗಳೂ ಇದನ್ನು ಅನುಸರಿಸುವ ಸಾಧ್ಯತೆಯಿದೆ. ಅ.15ರೊಳಗೆ ಎಲ್ಲ ಕಂಪೆನಿಗಳೂ ಈ ನಿಯಮಕ್ಕೆ ಬದ್ಧವಾಗಿರಬೇಕು ಎಂದು ಆರ್ಬಿಐ ಆದೇಶಿಸಿದೆ. ಸದ್ಯ ವಾಟ್ಸ್ಆ್ಯಪ್ನ ಪೇಮೆಂಟ್ಸ್ ಸೌಲಭ್ಯವು ಪ್ರಾಯೋಗಿಕ ಹಂತದಲ್ಲಿದ್ದು, 10 ಲಕ್ಷ ಜನರು ಇದನ್ನು ಬಳಸುತ್ತಿದ್ದಾರೆ.