ಲೋಕ ಚುನಾವಣೆ ಖಚಿತವಾದರೆ, ಐಪಿಎಲ್ ವೇಳಾಪಟ್ಟಿ ಅಂತಿಮ
Team Udayavani, Dec 28, 2018, 6:50 AM IST
ಮುಂಬಯಿ: ಮುಂದಿನ ವರ್ಷದ ಐಪಿಎಲ್ ಯಾವಾಗ ನಡೆಯುತ್ತದೆ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯುವುದರಿಂದ ಬಿಸಿಸಿಐ ಯಾವುದೇ ನಿರ್ಧಾರಕ್ಕೆ ಬರಲಾಗದ ಸಂಕಟಕ್ಕೆ ಸಿಲುಕಿದೆ.
ಐಪಿಎಲ್ ಅನ್ನು ಭಾರತದಲ್ಲಿ ನಡೆಸುವುದೋ, ವಿದೇಶಕ್ಕೆ ವರ್ಗಾಯಿಸುವುದೋ ಎಂಬ ಬಗ್ಗೆಯೇ ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಇಕ್ಕಟ್ಟಿಗೆ ಸಿಲುಕಿರುವ ಬಿಸಿಸಿಐ, ಲೋಕಸಭೆ ಚುನಾವಣೆ ವೇಳಾಪಟ್ಟಿ ಬಿಡುಗಡೆಯಾದ ಅನಂತರವೇ, ಐಪಿಎಲ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಐಪಿಎಲ್ ಅನ್ನು ಮಾ.29ಕ್ಕೆ ಆರಂಭಿಸುವ ಸಾಧ್ಯತೆಯಿದೆ.