ಅಜ್ಜ ಹೇಳಿದ ಹಳೆ ಕಥೆ


Team Udayavani, Dec 29, 2018, 5:53 AM IST

ajja.jpg

ಕನ್ನಡದಲ್ಲಿ ಹಾರರ್‌-ಥ್ರಿಲ್ಲರ್‌ ಚಿತ್ರಗಳಿಗೆ ಅದರದ್ದೇ ಆದ ಸಿದ್ಧಸೂತ್ರವಿದೆ, ಅದನ್ನು ಯಾರೂ ಮೀರುವಂತಿಲ್ಲ ಎಂದು ಬಹುತೇಕ ಹಾರರ್‌-ಥ್ರಿಲ್ಲರ್‌ ಚಿತ್ರಗಳ ನಿರ್ದೇಶಕರು ಭಾವಿಸಿದಂತಿದೆ. ಅದೇನೆಂದರೆ, ಯಾವುದೋ ಅಪರಿಚಿತ ಜಾಗಕ್ಕೆ ನಿಗೂಢ ರಹಸ್ಯವನ್ನು ಭೇದಿಸುವುದಕ್ಕೊ (ಬಲಿಯಾಗುವುದಕ್ಕೊ) ನಾಲ್ಕೈದು ಮಂದಿ ಹೋಗುವುದು. ಅಲ್ಲಿರುವ ಅಗೋಚರ ಶಕ್ತಿಗಳಿಗೆ ಎದುರಾಗುವುದು. ಆಮೇಲೆ ಅದರಿಂದ ಹೊರಬರಲು ತಿಣುಕಾಡುವುದು.

ತೆರೆಮೇಲೆ ಒಂದಷ್ಟು ಜನ ಉಸಿರು ಬಿಗಿ ಹಿಡಿದು ಹೋರಾಡುತ್ತಿದ್ದರೆ, ತೆರೆಮುಂದೆ ಒಂದಷ್ಟು ಜನ ಉಸಿರು ಬಿಗಿ ಹಿಡಿದು ನೋಡುವುದು. ಕೊನೆಗೆ ಕೆಣಕಿ ಕೆಡಬೇಡಿ ಎಂಬ ಮಹತ್ತರ ಸಂದೇಶ.  ಈ ವರ್ಷ ತೆರೆಗೆ ಬಂದ ಅರವತ್ತಕ್ಕೂ ಹೆಚ್ಚು ಹಾರರ್‌-ಥ್ರಿಲ್ಲರ್‌ ಚಿತ್ರಗಳಲ್ಲಿ ಒಂದೆರಡನ್ನು ಹೊರತುಪಡಿಸಿದರೆ, ಉಳಿದೆಲ್ಲ ಚಿತ್ರಗಳಲ್ಲಿ ಕಿಂಚಿತ್ತೂ ಬದಲಾಗದ ನಿರೂಪಣೆ ಶೈಲಿ ಇದು.  ಇನ್ನು ಈ ವಾರ ಕೂಡ ಇದೇ ಶೈಲಿಯ ಹಾರರ್‌-ಥ್ರಿಲ್ಲರ್‌ ಚಿತ್ರ ಅಜ್ಜ ತೆರೆಗೆ ಬಂದಿದೆ.

ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ತಂಡ ಗ್ರಾಮೀಣ ಸೇವೆಗಾಗಿ ಹಳ್ಳಿಯೊಂದಕ್ಕೆ ಹೋಗುತ್ತದೆ. ಅಲ್ಲಿನ ನಿಗೂಢ ಬಂಗಲೆಯೊಳಗೆ ಅಲ್ಲಿ ಅಜ್ಜ-ಮೊಮ್ಮಗಳು ಇಬ್ಬರೇ ಯಾರ ಕಣ್ಣಿಗೂ ಕಾಣದಂತೆ ವಾಸಿಸುತ್ತಿರುತ್ತಾರೆ. ಇಂಥ ಬಂಗಲೆಯೊಳಗೆ ಈ ವಿದ್ಯಾರ್ಥಿಗಳು ಪ್ರವೇಶಿಸುತ್ತಾರೆ. ಆ ನಂತರ ಚಿತ್ರದಲ್ಲಿ ವಿಚಿತ್ರ ಘಟನೆಗಳು ಶುರುವಾಗುತ್ತಾ ಹೋಗುತ್ತದೆ. ಅಂತಿಮವಾಗಿ ಈ ನಾಲ್ವರು ಹುಡುಗರು ಜೋಪಾನವಾಗಿ ಬಂಗಲೆಯಿಂದ ಹೊರಬಂದು ನಿಟ್ಟುಸಿರು ಬಿಡುತ್ತಾರಾ?

ಇಲ್ಲವಾ? ಎಂಬುದೇ ಅಜ್ಜ ಚಿತ್ರದ ಕಥಾಹಂದರ. ಕಾದಂಬರಿ ಆಧರಿತ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ಚಿತ್ರದ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಹೊಸತನವಿಲ್ಲ. ಹೊಸ ಬಗೆಯ ನಿರೂಪಣಾ ಶೈಲಿ ಇದ್ದರೆ “ಅಜ್ಜ’ ಕೊಂಚ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದ. ಆದರೆ, ನಿರ್ದೇಶಕರು ಮಾತ್ರ ಹಾರರ್‌ ಸಿನಿಮಾದ ಸಿದ್ಧಸೂತ್ರವನ್ನು ಬಿಟ್ಟು ಹೊರಬರುವ ಮನಸ್ಸು ಮಾಡಿಲ್ಲ. ಹಾಗಾಗಿ, ಹಾರರ್‌ ಸಿನಿಮಾಗಳನ್ನು ನೋಡಿ ಪಂಟರ್‌ ಆಗಿರುವ ಕನ್ನಡ ಪ್ರೇಕ್ಷಕನಿಗೆ ಅಜ್ಜನಲ್ಲಿ ಹೊಸತನ ಕಾಣುವುದಿಲ್ಲ.

ನೋಡುಗರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತೇವೆ ಎಂದು ಹೋಗಿ ಕೊನೆಗೆ ತಾವೇ ಮುಗ್ಗರಿಸುವ ಸರದಿ ಈ ಚಿತ್ರದಲ್ಲೂ ಮುಂದುವರೆದಿದೆ.  ಚಿತ್ರದಲ್ಲಿ ಅಜ್ಜನಾಗಿ ಹಿರಿಯ ನಟ ದತ್ತಣ್ಣ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಪ್ರತಿಭೆಗಳು ತಮ್ಮ ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಪರದಾಡಿರುವುದು ಚಿತ್ರದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ. ಉಳಿದಂತೆ ಚಿತ್ರದ ಛಾಯಾಗ್ರಹಣ, ಸಂಕಲನ, ಇನ್ನಿತರ ತಾಂತ್ರಿಕ ಕೆಲಸಗಳೂ ಅಷ್ಟಾಗಿ ಗಮನ ಸೆಳೆಯುವುದಿಲ್ಲ.  

ಚಿತ್ರ: ಅಜ್ಜ 
ನಿರ್ದೇಶನ: ವೇಮಗಲ್‌ ಜಗನ್ನಾಥ್‌ ರಾವ್‌ 
ನಿರ್ಮಾಣ: ಕೆ.ಪಿ ಚಿದಾನಂದ್‌ 
ತಾರಾಗಣ: ದತ್ತಣ್ಣ, ಪೃಥ್ವಿಶ್ರೀ, ರಾಜ್‌ ಪ್ರವೀಣ್‌, ಅಶ್ವಿ‌ನಿ, ಮಾಧುರಿ, ದೀಪಕ್‌ ರಾಜ್‌, ನಾಗೇಶ್‌ ಮಯ್ಯ ಮತ್ತಿತರರು. 

* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.