ಶಿಶುವನ್ನು ಎಳೆದ ರಭಸಕ್ಕೆ ತಲೆ ಗರ್ಭದಲ್ಲೇ ಉಳಿಯಿತು!
Team Udayavani, Jan 12, 2019, 4:26 AM IST
ರಾಮಗಢ: ಮಹಿಳೆಯೊಬ್ಬರನ್ನು ಹೆರಿಗೆ ಮಾಡಿಸುವ ವೇಳೆ ಕರ್ತವ್ಯದಲ್ಲಿದ್ದ ನರ್ಸ್, ಶಿಶುವಿನ ದೇಹವನ್ನು ಎಳೆದ ರಭಸಕ್ಕೆ ಅದರ ತಲೆಯು ಗರ್ಭದಲ್ಲೇ ಉಳಿದು, ದೇಹ ಮಾತ್ರ ಹೊರಬಂದಂಥ ಮೈ ಜುಮ್ಮೆನಿಸುವಂಥ ಆಘಾತಕಾರಿ ಘಟನೆಯೊಂದು ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ರಾಮಗಢ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆಂದು ಮಹಿಳೆ ದಾಖಲಾಗಿದ್ದರು. ನರ್ಸ್ ಅಮೃತ್ ಲಾಲ್ ಎಂಬವರು ಮತ್ತೂಬ್ಬ ನರ್ಸ್ನ ಸಹಾಯದಿಂದ ಮಗುವನ್ನು ಹೊರತೆಗೆಯಲು ಪ್ರಯತ್ನಿಸಿದ್ದರು. ಶಿಶುವನ್ನು ಅವರು ರಭಸದಿಂದ ಎಳೆದಿದ್ದು, ಮಗುವಿನ ದೇಹ ಎರಡು ತುಂಡಾಗಿ, ತಲೆಯು ಗರ್ಭದೊಳಗೇ ಉಳಿದು, ದೇಹದ ಉಳಿದ ಭಾಗ ಮಾತ್ರ ಹೊರಬಂದಿತ್ತು. ಈ ವಿಷಯವನ್ನು ನರ್ಸ್ಗಳು ಮುಚ್ಚಿಟ್ಟಿದ್ದು, ಮಗುವಿನ ದೇಹವನ್ನು ಶವಾಗಾರದಲ್ಲಿ ಇಟ್ಟಿದ್ದರು. ನಂತರ, ವೈದ್ಯರು ಮಹಿಳೆಯ ಶಸ್ತ್ರಚಿಕಿತ್ಸೆಗೆಂದು ಬಂದಾಗ, ಗರ್ಭದೊಳಗೇ ಮಗುವಿನ ತಲೆ ಕಂಡು ಹೌಹಾರಿದರು. ಇದೀಗ ನರ್ಸ್ಗಳ ಮೇಲೆ ದೂರು ದಾಖಲಾಗಿದ್ದು, ಸೇವೆಯಿಂದ ವಜಾಗೊಳಿಸಲಾಗಿದೆ.
ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆ ಕುರಿತು ವರದಿ ನೀಡುವಂತೆ ಸರಕಾರ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು