ಪೆಟ್ರಾ ಕ್ವಿಟೋವಾಗೆ ಸಿಡ್ನಿ ಕಿರೀಟ
Team Udayavani, Jan 13, 2019, 12:30 AM IST
ಸಿಡ್ನಿ: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಭಾರೀ ಹೋರಾಟದ ಬಳಿಕ 2ನೇ ಸಲ ಸಿಡ್ನಿ ಇಂಟರ್ನ್ಯಾಶನಲ್ ಟೆನಿಸ್ ಕಿರೀಟ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ 2 ಗಂಟೆ, 19 ನಿಮಿಷಗಳ ಕಾಲ ಸಾಗಿದ ಪ್ರಶಸ್ತಿ ಸಮರದಲ್ಲಿ ಕ್ವಿಟೋವಾ ತವರಿನ ನೆಚ್ಚಿನ ಆಟಗಾರ್ತಿ ಆ್ಯಶ್ಲಿ ಬಾರ್ಟಿ ವಿರುದ್ಧ 1-6, 7-5, 7-6 (3) ಅಂತರದ ಗೆಲುವು ಒಲಿಸಿಕೊಂಡರು. 2015ರಲ್ಲಿ ಮೊದಲ ಸಲ ಅವರಿಲ್ಲಿ ಚಾಂಪಿಯನ್ ಆಗಿದ್ದರು.
ಪೆಟ್ರಾ ಕ್ವಿಟೋವಾ ಆರಂಭ ಅತ್ಯಂತ ಕಳಪೆಯಾಗಿತ್ತು. ಮೊದಲ ಸೆಟ್ನಲ್ಲಿ ಗಳಿಸಲು ಸಾಧ್ಯವಾದದ್ದು ಒಂದೇ ಅಂಕ. ದ್ವಿತೀಯ ಸೆಟ್ ಇನ್ನೇನು ಕೈಜಾರಿತು ಎಂಬ ಹಂತದಲ್ಲಿ ಕ್ವಿಟೋವಾಗೆ ಅದೃಷ್ಟ ಕೈಹಿಡಿಯಿತು. 6-5ರ ಮುನ್ನಡೆಯಲ್ಲಿದ್ದ ಬಾರ್ಟಿ ಈ ಸೆಟ್ ಕಳೆದುಕೊಂಡರು. ಟೈ-ಬ್ರೇಕರ್ನಲ್ಲಿ ಅಂತ್ಯಗೊಂಡ ನಿರ್ಣಾಯಕ ಸೆಟ್ ಕೂಡ ಬಾರ್ಟಿಯಿಂದ ದೂರಾಯಿತು.
“ಆ್ಯಶ್ ಸವಾಲು ಎದುರಿಸುವುದು ಕಷ್ಟ ಎಂಬುದು ತಿಳಿದಿತ್ತು. ತವರಿನಲ್ಲಿ ಗೆಲ್ಲಲಾಗದಿದ್ದುದು ಅವರಿಗೆ ಬಹಳ ನೋವುಂಟು ಮಾಡಿದೆ. ಆದರೆ ಮುಂದೊಂದು ದಿನ ಅವರು ಈ ಸಾಧನೆ ಮಾಡಿಯೇ ಮಾಡುತ್ತಾರೆ. ಆಸ್ಟ್ರೇಲಿಯನ್ ಓಪನ್ನಲ್ಲಿ ಅವರಿಗೆ ಗುಡ್ ಲಕ್…’ ಎಂದು ಕ್ವಿಟೋವಾ ಆಸೀಸ್ ಆಟಗಾರ್ತಿ ಬಗ್ಗೆ ಮೆಚ್ಚುಗೆಯ ಮಾತಾಡಿದರು. ಬಾರ್ಟಿ ಸಿಡ್ನಿ ಫೈನಲ್ನಲ್ಲಿ ಸೋಲುತ್ತಿರುವುದು ಇದು ಸತತ 2ನೇ ವರ್ಷ.ಗೆಲುವಿಗೆ ನಾನು ಎಲ್ಲ ಪ್ರಯತ್ನ ಮಾಡಿದೆ. ಆದರೂ ಸಾಲಲಿಲ್ಲ. ತವರಿನ ಅಭಿಮಾನಿಗಳನ್ನು ಮತ್ತೆ ನಿರಾಶೆಯಲ್ಲಿ ಕೆಡವಿದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ’ ಎಂದು ಪರಾಜಿತ ಆ್ಯಶ್ಲಿ ಬಾರ್ಟಿ ಹೇಳಿದರು.
ಕೊನೆಯ ಪಂದ್ಯಾವಳಿ
1885ರಷ್ಟು ಹಿಂದೆ ಆರಂಭಗೊಂಡ “ಸಿಡ್ನಿ ಇಂಟರ್ನ್ಯಾಶನಲ್’ ಕೂಟದ ಕೊನೆಯ ಆವೃತ್ತಿ ಇದಾಗಿದೆ. ಮುಂದಿನ ಋತುವಿನಲ್ಲಿ “ಸಿಡ್ನಿ ಎಟಿಪಿ ಕಪ್’ ಹೆಸರಲ್ಲಿ ಪಂದ್ಯಾವಳಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?